ಜೆಡಿಎಸ್ ಪಕ್ಷದ ಬಾಸೂರು ಚಂದ್ರೇಗೌಡ ನಾಮಪತ್ರ ಸಲ್ಲಿಕೆ.

ಸೊರಬ.ಎ.18; ಸೊರಬ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಬಾಸೂರು ಚಂದ್ರೇಗೌಡ ಮಂಗಳವಾರ ಪಟ್ಟಣದ ಶ್ರೀ ರಂಗನಾಥ ಸ್ವಾಮಿಗೆ ಕುಟುಂಬ ಸಮೇತರಾಗಿ ಬಂದು ವಿಶೇಷ ಪೂಜೆ ಸಲ್ಲಿಸಿ ಬೃಹತ್ ರೋಡ್ ಶೋ ಮೂಲಕ ಅಪಾರ ಸಂಖ್ಯೆಯ ಬೆಂಬಲಿಗರು ಕಾರ್ಯಕರ್ತರು ಮುಖಂಡರ ಮೂಲಕ ತಾಲೂಕು ಕಛೇರಿವರಗೆ ಮೆರವಣಿಗೆ ಮೂಲಕ ಸಾಗಿ ನಾಮಪತ್ರ ಸಲ್ಲಿಸಿ ನಂತರ ಮಾಧ್ಯಮದವರೋಂದಿಗೆ  ಮಾತನಾಡಿದ ಅವರು ಹಿಂದುಳಿದ  ತಾಲ್ಲೂಕು ಎಂಬ ಹಣೆಪಟ್ಟಿಗೆ ಒಳಗಾಗಿರುವ ಸೊರಬ ತಾಲ್ಲೂಕನ್ನ ಸಮಗ್ರ ಅಭಿವೃದ್ಧಿ ಮಾಡುವ ಉದ್ದೇಶದಿಂದ  ಕುಮಾರ ಸ್ವಾಮಿ ಮುಖ್ಯ ಮಂತ್ರಿ ಯಾದ ಅವಧಿಯಲ್ಲಿ ಹಲವು ಜನಪರವಾದ  ಯೋಜನೆಗಳನ್ನು ರೈತರ  ಸಾಲ ಮನ್ನಾ.ಏತ ನೀರಾವರಿ ಯೋಜನೆ ಬಗ್ಗೆ ಜನರಿಗೆ ತಲುಪಿಸಿ  ತಾಲೂಕಿನ  ಅಭಿವೃದ್ಧಿ ಪರ ಚಿಂತನೆ ಹೊಂದಿದ ನಾನು ನಿರುದ್ಯೋಗ ನಿವಾರಣೆ ಮಾಡುವ ಉದ್ದೇಶದಿಂದ ಬೃಹತ್ ಕೈಗಾರಿಕೆಗಳನ್ನ ಸ್ಥಾಪಿಸುವ  ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.ರಸ್ತೆ. ನೀರಾವರಿ.ಶಿಕ್ಷಣ, ಆರೋಗ್ಯ.ಮುಂತಾದ ಮೂಲ ಭೂತ ಸೌಕರ್ಯ ಕಲ್ಪಿಸಲು ಒತ್ತು ನೀಡಲಾಗುವುದು ಎಂದರು .ಈ ಸಂದರ್ಭದಲ್ಲಿ ರಾಜ್ಯ  ಕಾರ್ಯದರ್ಶಿ ಎನ್.ಕುಮಾರ,ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಶಿವಪ್ಪ ವಕೀಲ, ಶ್ರೀಧರ್ ಶೇಟ್, ಅಬ್ದುಲ್ ಅಜೀಜ್ ಸಾಬ್,ತುಳಜಪ್ಪ, ಸುನಿಲ್, ಶಿವಾಜಪ್ಪ, ಸಂತೋಷ್, ಸಂಪತ್, ಚಂದ್ರಪ್ಪ, ರಾಜುಗೌಡ, ವಿಷ್ಣು, ಆನಂದಪ್ಪ, ಸೇರಿದಂತೆ ಮೊದಲಾದವರಿದ್ದರು.