ಜೆಡಿಎಸ್ ಪಕ್ಷದ ಪ್ರಬಲ ಅಭ್ಯರ್ಥಿ ರಾಮನಗೌಡ

ರಾಯಚೂರು.ಜ.೪-
ರಾಜಕೀಯ ಪ್ರವೇಶದಿಂದ ಇಲ್ಲಿಯವರಿಗೂ ಮೂಲ ಜೆಡಿಎಸ್ ಪಕ್ಷದಲ್ಲಿದ್ದುಕೊಂಡು ನಗರದ ಸುತ್ತಲಿನ ಹಳ್ಳಿಗಳಲ್ಲಿ ಹಾಗೂ ರಾಯಚೂರು ನಗರದಲ್ಲಿ ತಳಮಟ್ಟದಿಂದ ಪಕ್ಷವನ್ನು ಗಟ್ಟಿಗೊಳ್ಳಿಸುವಲ್ಲಿ ಹಲವು ವರ್ಷಗಳಿಂದ ಕಾರ್ಯಮಾಡುತ್ತಿರುವ ರಾಮನಗೌಡ ಏಗನೂರು ಅವರು ರಾಯಚೂರು ನಗರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಪ್ರಬಲ ಅಭ್ಯರ್ಥಿಯಾಗಿದ್ದಾರೆ, ಅವರ ಗೆಲವನ್ನು ಕ್ಷೇತ್ರದ ಜನತೆ ಬಯಸಿದ್ದಾರೆಂದು ಜೆಡಿಎಸ್ ಪಕ್ಷದ ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷರಾದ ಆದಿರಾಜು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಹಲವಾರು ವರ್ಷಗಳಿಂದ ಅವರು ಜೆಡಿಎಸ್ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ,ಹಾಗಾಗಿ ಅವರಿಗೆ ಜೆಡಿಎಸ್ ಟಿಕೆಟ್ ಸಿಗುವ ವಿಶ್ವಾಸವಿದೆ, ಹಾಗೂ ಪಕ್ಷದ ಹಿರಿಯ ಮುಖಂಡರು ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ, ನಮಗೂ ಕೂಡ ರಾಮನಗೌಡರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗುವುದು ಎನ್ನುವ ವಿಶ್ವಾಸವಿದೆ.
ಏಗನೂರು ಪ್ರದೇಶದಲ್ಲಿ ೨೦೦೦ಕ್ಕೂ ಹೆಚ್ಚು ಭೂಮಿಯನ್ನು ಙಖಿPS ಸೇರಿದಂತೆ ಹಲವು ಕಾರ್ಖಾನೆಗಳಿಗೆ ನೀಡಲಾಗಿದ್ದು ಇಲ್ಲಿಯವರಿಗೂ ಸ್ಥಳೀಯ ಜನರಿಗೆ ಉದ್ಯೋಗ ನೀಡಿರಲಿಲ್ಲ, ಹಾಗೂ ನಗರದ ಸುತ್ತಮುತ್ತಲ್ಲಿನಲ್ಲಿರುವ ಜನರಿಗೆ ಅವರು ಹಲವಾರು ಹೋರಾಟಗಳ ಮುಖಾಂತರ ಸರ್ಕಾರದ ಮೇಲೆ ಒತ್ತಡ ಹಾಕಿ ಬಡ ಜನರಿಗೆ ಉದ್ಯೋಗ ಕೊಡಿಸಲು ನೇರವಾಗಿದ್ದಾರೆ,ಜನರ ಹಲವಾರು ಸಮಸ್ಯೆಗಳನ್ನ ಹೋರಾಟ ಮಾಡಿ ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ನಗರ ಕ್ಷೇತ್ರದ ಜನ ಈ ಸಾರಿ ಬದಲಾವಣೆಯನ್ನು ಬಯಸಿದ್ದಾರೆ, ಜಾತ್ಯಾತೀತ ನಾಯಕನ್ನಾಗಿ ಎಲ್ಲಾ ವರ್ಗದವರನ್ನ ಒಟ್ಟುಗುಡಿಸಿಕೊಂಡು ಪಕ್ಷದ ಸಂಘಟನೆ ಮಾಡುವ ರಾಮನಗೌಡ ಏಗನೂರು ಅವರನ್ನು ಕ್ಷೇತ್ರದಲ್ಲಿನ ಜನತೆ ಗೆಲ್ಲಿಸಲು ಪಣತೊಟ್ಟಿದ್ದಾರೆಂದು ತಿಳಿಸಿದರು.
ರಾಯಚೂರು ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಅರ್ಧಕ್ಕೆ ನಿಂತಿವೆ,ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳು ಕ್ಷೇತ್ರದಲ್ಲಿ ಆಗಬೇಕಿವೆ, ನಮ್ಮ ಜೆಡಿಎಸ್ ಪಕ್ಷ ರಾಯಚೂರು ನಗರ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುತ್ತದೆ ಎನ್ನುವ ವಿಶ್ವಾಸವಿದೆ. ಕ್ಷೇತ್ರದ ಜನತೆ ಈ ಬಾರಿ ರಾಮನಗೌಡರಿಗೆ ಅವಕಾಶ ಮಾಡಿಕೊಡಬೇಕು ಎಂದರು.