ಜೆಡಿಎಸ್ ಪಕ್ಷದಿಂದ ಸಿದ್ದು ವೈ ಬಂಡಿ ಸಾಂಕೇತಿಕ ನಾಮಪತ್ರ ಸಲ್ಲಿಕೆ

ಲಿಂಗಸುಗೂರು,ಏ.೧೭ – ಲಿಂಗಸುಗೂರು ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದಿಂದ ಸಿದ್ದು ವೈ ಬಂಡಿ ಇವರು ಇಂದು ಪಟ್ಟಣದ ಚುನಾವಣೆ ಕಛೇರಿಯಲ್ಲಿ ಸಾಂಕೇತಿಕವಾಗಿ ಕುಟುಂಬ ಸಮೇತರಾಗಿ ಬಂದು ನಾಮಪತ್ರ ಸಲ್ಲಿಕೆ ಮಾಡಿದರು.
ಮುಂಬರುವ ವಿಧಾನಸಭಾ ೨೦೨೩ ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸಿದ್ದು ವೈ ಬಂಡಿ ಇವರು ನಾಮಪತ್ರ ಸಲ್ಲಿಕೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಕ್ಷೇತ್ರದಲ್ಲಿ ರೈತರಿಗೆ ಕೂಲಿಕಾರರಿಗೆ ಕೆಲಸ ಮಾಡುವ ಕಾರ್ಮಿಕರಿಗೆ ರಾಜ್ಯ ಜೆಡಿಎಸ್ ಪಕ್ಷದಿಂದ ಜಾರಿಗೆ ಪ್ರಣಾಳಿಕೆಯಲ್ಲಿ ತಂದಿರುವ ಅಶ್ವಾಸನೆ ಪ್ರಕಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಮೂಲಕ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಜೆಡಿಎಸ್ ಪಕ್ಷವು ಬದ್ದವಾಗಿದೆ ಎಂದು ಸಿದ್ದು ವೈ ಬಂಡಿ ಇವರು ಹೇಳಿದರು.
ಎರಡು ಸೊತ ಅಭ್ಯರ್ಥಿ ಗೆಲುವಿಗಾಗಿ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಆರ್ಶಿವಾದ ಮಾಡುತ್ತಾರೆ ಎಂಬುದು ನನಗೆ ಮತದಾರರ ಮೇಲೆ ಬಲವಾದ ನಂಬಿಕೆ ಇದೆ ಎಂದರು.
ಈ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಬಸವರಾಜ ಮಾಕಾಪುರ ಯುವ ಘಟಕದ ಅಧ್ಯಕ್ಷ ಇಮ್ತಿಯಾಜ್ ಪಾಶ ಮುದಗಲ್ ಜೆಡಿಎಸ್ ಪಕ್ಷದ ಮುಖಂಡ ದೊಡ್ಡ ಸಿದ್ದಯ್ಯ ಬಸವರಾಜ ಗಡದ ಗಂಗಾ ಬಂಡಿ ಅಸ್ಮಾ ಬೇಗಂ ಯಂಕಪ್ಪ ಬಂಡಿ ಸಂದೀಪ್ ಬಂಡಿ ಸೇರಿದಂತೆ ಇತರರು ನಾಮಪತ್ರ ಸಲ್ಲಿಕೆ ವೇಳೆಯಲ್ಲಿ ಇದ್ದರು.