ಜೆಡಿಎಸ್ ಪಕ್ಷದಿಂದ ಉತ್ತಮ ಆಡಳಿತ ಸಾಧ್ಯ- ಹುಸೇನ್

ಸಿರವಾರ.ಆ.೦೧- ಜೆಡಿಎಸ್ ಪಕ್ಷದಿಂದ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲು ಸಾಧ್ಯ ಎಂದು ಜೆಡಿಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಕಲ್ಯಾಣ ಕರ್ನಾಟಕದ ಸಂಘಟನೆ ಉಸ್ತುವಾರಿ ಸೈಯದ್ ಹುಸೇನ್ ಸಾಹೇಬ್ ಮಾನ್ವಿ ಹೇಳಿದರು.
ಪಟ್ಟಣ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸನ್ಮಾನ ಸ್ವೀಕರಿಸಿ ನಂತರ ಮಾತನಾಡಿ ಸಮಿಶ್ರ ಸರಕಾರದಲ್ಲಿ ಕೇವಲ ೧೪ ತಿಂಗಳಲ್ಲಿ ರೈತರ ಸಾಲಮನ್ನ, ಬಡವರ, ಹಿಂದುಳಿದ,ಅಲ್ಪ ಸಂಖ್ಯಾತರಿಗೆ ಅನುಕೂಲ ವಾಗುವ ಯೋಜನೆ ಜಾರಿಗೆ ತಂದು, ಪಕ್ಷದ ಅಧ್ಯಕ್ಷ ಸ್ಥಾನ ಎರಡನೇ ಭಾರಿಗೆ ಸಿ.ಎಂ.ಇಬ್ರಾಹಿಂ ಜವಾಬ್ದಾರಿವಹಿಸಿದ್ದು, ಇದರಿಂದ ಮುಸ್ಲಿಂ ಸಮುದಾಯದ ಮುಖಂಡರು ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷ ಸೇರಲಿದ್ದಾರೆ, ಕಾಂಗ್ರೆಸ್-ಬಿಜೆಪಿ ಉನ್ನತ ಸ್ಥಾನ ನೀಡದೆ ಓಟ ಬ್ಯಾಂಕ್ ಮಾಡಿಕೊಂಡು ಆಡಳಿತ ನಡೆಸಿದ್ದಾರೆ.
ಮುಂಬರುವ ವಿಧಾನ ಸಭೆಯ ಚುನಾವಣೆಯಲ್ಲಿ ರಾಷ್ಟ್ರೀಯ ಎರಡು ಪಕ್ಷಗಳನ್ನು ತಿರಸ್ಕರಿಸಿ ಜೆಡಿಎಸ್ ಪಕ್ಷದಿಂದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಪುನಃ ಮುಖ್ಯಮಂತ್ರಿಯಾಗಿ ಮಾಡಬೇಕು, ಮಾನ್ವಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರು ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ಜಗಳ, ಗಲಭೆ ಇಲ್ಲಾ, ಅವರನ್ನು ಪುನಃ ಶಾಸಕರನ್ನಾಗಿಮಾಡಿ ಸಚಿವರಾಗಬೇಕು, ನಮ್ಮ ಪಕ್ಷದ ಕಾರ್ಯಕರ್ತರು ಹೆಚ್ಚಿನ ಶ್ರಮವಹಿಸಿ ಚುನಾವಣೆಯಲ್ಲಿ ಆಯ್ಕೆಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಸಿರವಾರ ತಾಲೂಕು ಘಟಕದ ಅಧ್ಯಕ್ಷ ನಾಗರಾಜಗೌಡ ಡಿಎನ್ ವೈ, ಪ್ರಧಾನ ಕಾರ್ಯದರ್ಶಿ ದಾನಪ್ಪ,ಚಂದ್ರಶೇಖರ ವಲಿಸಾಬ್ ಗುತ್ತೆದಾರ, ಸತ್ತರ್ ಸಾಬ್ ಗುತ್ತೆದಾರ, ಹಬೀಬ್ ಮಾನ್ವಿ, ಬಂದೇನವಾಜ, ಖಾಜಿಸಾಬ್, ಇಬ್ರಾಹಿಂ, ಭೀಮರಾಯ, ವಿರೇಶನಾಯಕ,ಹಾಜಿ, ಸೇರಿದಂತೆ ಅನೇಕರು ಇದ್ದರು.