ಜೆಡಿಎಸ್ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆಯಿಲ್ಲ

ಕೋಲಾರ,ಏ,೬-ಜೆಡಿಎಸ್ ಪಕ್ಷದೊಳಗೆ ಯಾವುದೇ ಗುಂಪುಗಾರಿಕೆಯಾಗಲಿ ಗೊಂದಲಗಳು ಇಲ್ಲ ನಮ್ಮಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಉಂಟಾದರೆ ಅದನ್ನು ನಾವೇ ಕೂತು ಸರಿಪಡಿಸಿಕೊಳ್ಳುತ್ತೇವೆ ಎಂದು ಎಂಎಲ್‌ಸಿ ಇಂಚರ ಗೋವಿಂದರಾಜು ತಿಳಿಸಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಷದ ಕೋಲಾರ ತಾಲ್ಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಅವರ ನಿವಾಸಕ್ಕೆ ನಾನು, ಅಭ್ಯರ್ಥಿ ಸಿಎಂಆರ್ ಶ್ರೀನಾಥ್, ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾಜಿ ಎಂಎಲ್ಸಿ ತೂಪಲ್ಲಿ ಚೌಡರೆಡ್ಡಿ, ಪಕ್ಷದ ಜಿಲ್ಲಾ ಅಧ್ಯಕ್ಷ ಬಣಕನಹಳ್ಳಿ ನಟರಾಜ್, ಸೇರಿದಂತೆ ಹಲವರು ಹೋಗಿ ನಾಲ್ಕೈದು ಗಂಟೆ ಚರ್ಚಿಸಿದ್ದೇವೆ. ಅವರು ನಮ್ಮೊಂದಿಗೆ ಚೆನ್ನಾಗಿಯೇ ಇದ್ದರು. ಆದರೆ ಶ್ರೀನಿವಾಸಪುರ ಶಾಸಕರು ಕರೆದು ಅವರ ಜೊತೆ ಮಾತನಾಡಿದ್ದಾರೆ ಎಂಬುದು ಗೊತ್ತಾಗಿದೆ. ಆ ಬಳಿಕ ರಾಜೇಶ್ವರಿ ಗೊಂದಲಕ್ಕೆ ಒಳಗಾಗಿದ್ದಾರೆ ಎಂದರು.
ಶ್ರೀನಿವಾಸಪುರ ಕ್ಷೇತ್ರದ ಶಾಸಕ ಮಹಾಜ್ಞಾನಿ ಮಾತನಾಡಿಸಿದವರೆಲ್ಲಾ ಹಾಗೆಯೇ ನಮ್ಮ ಜೆಡಿಎಸ್ ಪಕ್ಷದಿಂದ ಶಾಸಕರಾಗಿದ್ದ ಶ್ರೀನಿವಾಸಗೌಡರಿಗೂ ಆ ರೀತಿ ಆಯಿತು, ರಾಜೇಶ್ವರಿ ಅವರೂ ನಮ್ಮ ಜೊತೆಗಿರುತ್ತಾರೆ ಎಂಬ ಆಶಾಭಾವನೆ ನನಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಗೊಂದಲದ ಬಗ್ಗೆ ನಾನು ಮಾತನಾಡುವುದಿಲ್ಲ. ಅವರದ್ದು ರಾಷ್ಟ್ರೀಯ ಪಕ್ಷ. ಅವರೊಳಗಿನ ಗೊಂದಲದಿಂದ ಲಾಭ ಸಿಕ್ಕರೆ ಖಂಡಿತ ಸ್ವೀಕರಿಸುತ್ತೇವೆ ಆದರೆ ಉಳಿದ ಪಕ್ಷಗಳ ಅಭ್ಯರ್ಥಿಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಜೆಡಿಎಸ್‌ಗೆ ಅಧಿಕಾರ ಸಿಕ್ಕರೆ, ಕೋಲಾರದಲ್ಲಿ ನಮ್ಮ ಅಭ್ಯರ್ಥಿ ಗೆದ್ದರೆ ಎಚ್.ಡಿ.ಕುಮಾರಸ್ವಾಮಿ ಘೋಷಿಸಿರುವ ಭರವಸೆಗಳನ್ನು ಯಥಾವತ್ತಾಗಿ ಜಾರಿ ಮಾಡಲಾಗುವುದುಎಂದರು.
ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರ ಆಶಯದಂತೆ ಎಚ್.ಡಿ.ಕುಮಾರಸ್ವಾಮಿ ಪಂಚರತ್ನ ಯಾತ್ರೆ ಮೂಲಕ ಹಲವಾರು ಭರವಸೆ ನೀಡಿದ್ದಾರೆ. ಜೊತೆಗೆ ರೈತರಿಗೆ ಎಕರೆಗೆ ೧೦ ಸಾವಿರ, ಹಿರಿಯ ನಾಗರಿಕರಿಗೆ ೧೦ ಸಾವಿರ, ವಿಧವೆ, ಅಂಗವಿಕಲರಿಗೆ ೨,೫೦೦, ರೈತರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ೨ ಸಾವಿರ, ಆಟೊ ಚಾಲಕರು, ಬಡ ಕಾರ್ಮಿಕರಿಗೆ ಮಾಸಿಕ ೨ ಸಾವಿರ ಪರಿಹಾರ ನೀಡಲಿದ್ದಾರೆ. ಉಚಿತವಾಗಿ ವರ್ಷಕ್ಕೆ ಆರು ಅಡುಗೆ ಅನಿಲ ನೀಡುವ ನೀಡುವುದಾಗಿ ಹೇಳಿದ್ದಾರೆ ಏ.೧೦ ರಂದು ಕುಮಾರಸ್ವಾಮಿ ಅವರು ಮುಳಬಾಗಿಲು ಹಾಗೂ ಶ್ರೀನಿವಾಸಪುರಕ್ಕೆ ಬರುತ್ತಾರೆ. ಕೋಲಾರಕ್ಕೂ ಆಹ್ವಾನಿಸಿ ಸಭೆ ನಡೆಲಾಗುವುದು ಎಂದರು.