ಜೆಡಿಎಸ್ ಪಕ್ಷದಲ್ಲಿ ಮಹಿಳಾ ಘಟಕ ನಿರ್ಲಕ್ಷ್ಯ

ವಿಜಯಪುರ :ಜ.10: ವಿಜಯುಪರ ಜಿಲ್ಲಾ ಜನತಾದಳ (ಜಾತ್ಯಾತೀತ) ಮಹಿಳಾ ಘಟಕದ ವತಿಯಿಂದ 2023 ನೇ ಸಾಲಿನ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಮಹಿಳೆಯರ ಪಾತ್ರ ಹಾಗೂ ಪಕ್ಷದಲ್ಲಿ ಮಹಿಳಾ ಘಟಕವನ್ನು ನಿರ್ಲಕ್ಷಿಸುತ್ತಿರುವ ಕುರಿತು ವಿಜಯಪುರ ನಗರದ ನೌಕರರ ಭವನದಲ್ಲಿ ಪತ್ರಿಕಾ ಗೋಷ್ಠಿ ಕರೆಯಲಾಗಿತ್ತು.
ಈ ಗೋಷ್ಠಿಯನ್ನು ಉದ್ದೇಶಿಸಿ ಜಾತ್ಯಾತೀತ ಜನತಾದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಸ್ನೇಹಲತಾ ಶೆಟ್ಟಿ ಅವರು ಮಾತನಾಡಿ, ಪಕ್ಷದ ಚಿಹ್ನೆಯಲ್ಲಿ ತೆನೆ ಹೊತ್ತ ಮಹಿಳೆ ಇರುವುದರಿಂದ ಎಲ್ಲಾ ಕ್ಷೇತ್ರದಲ್ಲೂ ಹಾಗೂ ಎಲ್ಲಾ ಜಿಲ್ಲಾ ಜಾತ್ಯಾತಿತ ಜನತಾದಳದಲ್ಲಿ ಮಹಿಳಾ ಘಟಕಕ್ಕೆ ಹಾಗೂ ಮಹಿಳಾ ಅಧ್ಯಕ್ಷರಿಗೆ ವಿಶೇಷವಾದ ಸ್ನಾನವನ್ನು ಪಕ್ಷ ನೀಡಿದೆ . ಆದರೆ ನಮ್ಮ ಜಿಲ್ಲೆಯಾದ ವಿಜಯಪುರದಲ್ಲಿ ಜಿಲ್ಲಾಧ್ಯಕ್ಷರಿಂದ ಮಹಿಳಾ ಅಧ್ಯಕ್ಷರಿಗೂ ಮಹಿಳಾ ಪ್ರತಿನಿಧಿಗಳಿಗೂ ಸರಿಯಾಗಿ ಸ್ಪಂದಿಸುವುದು ಗೊತ್ತಿರುವುದಿಲ್ಲ . ಯಾವುದೇ ರೀತಿಯ ಪಕ್ಷದ ಸಭೆ ಸಮಾರಂಭಗಳಿಗೂ ಆಹ್ವಾನಿಸುವುದಿಲ್ಲ . ರಾಜ್ಯದಿಂದ ಬಂದ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ ಯಾವುದೇ ರಾಜ್ಯ ನಾಯಕರು ನಮ್ಮ ಜಿಲ್ಲೆಗೆ ಬಂದಾಗ ನಮಗೆ ಯಾವುದೇ ಮಾಹಿತಿಯನ್ನು ಕೊಡುವುದಿಲ್ಲ . ನಮ್ಮ ಅನುಪಸ್ಥಿತಿಯಲ್ಲಿ ಕಾರ್ಯಕ್ರಮಗಳು ನಡೆದುಬಿಡುತ್ತವೆ . ಪಕ್ಷದ ಚಟುವಟಿಕೆಗಳಲ್ಲಿ ನಮಗೆ ಮಾನ್ಯತೆಯೇ ಇಲ್ಲದಂತಾಗಿದೆ.
ಪಂಚರತ್ನ ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣ ಎಂಬ ಅಂಶವು ಪ್ರಮುಖವಾಗಿದೆ . ಮಹಿಳೆಯರು ಕಾರ್ಯಕ್ರಮಕ್ಕೆ ಭಾಗವಹಿಸಲು ತಯಾರಿದ್ದ ಆದರೆ ವಿಧಾನಸಭೆಗೆ ಅಯ್ಕೆಯಾದ ಅಭ್ಯರ್ಥಿಗಳು ನಮ್ಮ ಘಟಕಕ್ಕೆ ಇಲ್ಲಿಯವರೆಗೂ ಜವಾಬ್ದಾರಿಯನ್ನು ಕೊಟ್ಟಿಲ್ಲ.ಇದರ ಬಗ್ಗೆ ಮಹಿಳೆಯಲ್ಲಿ ಅಸಮಧಾನವಿದೆ. ಕಾರಣ ಆಯ್ಕೆಯಾದ ಅಭ್ಯರ್ಥಿಗಳು ಮಹಿಳೆಯರನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಜಿಲ್ಲಾಧ್ಯಕ್ಷರು ಮಹಿಳಾ ಘಟಕದ ಬಗ್ಗೆ ಸೂಕ್ತ ಗಮನ ಹರಿಸಬೇಕು. ಹಾಗೂ ಕೆಲವೊಂದು ವಿಧಾನಸಭೆ ಅಭ್ಯರ್ಥಿಗಳಿಗೆ ಮಹಿಳಾ ಅಧ್ಯಕ್ಷರ ಪರಿಚಯವೇ ಇಲ್ಲ.
ಮುಂಬರುವ 2023 ನೇ ಸಾಲಿನ ಸಾರ್ವತ್ರಿಕ ಚುನಾವಣೆಯಲ್ಲಿ ಮಹಿಳೆಯರಿಗೂ ಒಂದು ಅವಕಾಶ ನೀಡಬೇಕೆಂದು ಮಹಿಳಾ ಅಧ್ಯಕ್ಷರಿಂದ ಬೇಡಿಕೆ ಇರುತ್ತದೆ.
ಜಿಲ್ಲೆಯ ಕಾರ್ಯಾಲಯದಲ್ಲಿ ಯಾವುದೇ ರೀತಿಯ ಪಕ್ಷದ ಚಟುವಟಿಕೆಗಳು ನಡೆಯುತ್ತಿಲ್ಲ. ಪೂರ್ವಭಾವಿ ಸಭೆಗಳು ನಡೆದರೂ ನಮ್ಮ ಮಹಿಳಾ ಘಟಕಕ್ಕೆ ಮಾಹಿತಿಯನ್ನು ನೀಡುತ್ತಿಲ್ಲ. ಆದ ಕಾರಣ ಜಿಲ್ಲೆಯಿಂದ ರಾಜ್ಯಕ್ಕೆ ತಪ್ಪು ಮಾಹಿತಿಗಳು ರವಾನೆಯಾಗುತ್ತಿವೆ. ಮತ್ತು ಪಕ್ಷದ ಸಂಘಟನೆಗೆ ಮಹಿಳಾ ಘಟಕವನ್ನು ಸಕ್ರೀಯವಾಗಿ ಪಾಲ್ಗೊಳ್ಳಲು ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ರೂಪಾ ಕುಂಬಾರ, ಶ್ರೀಮತಿ ಶಿವಗಂಗಾ ಕಟ್ಟಿಮನಿ, ಶ್ರೀಮಂತಿ ನಂದಾ ಗುನ್ನಾಪೂರ, ಶ್ರೀಮತಿ ಬಸೀರಾ ಮಣಿಯಾರ, ಶ್ರೀಮತಿ ರೇಣುಕಾ ಮಡಿವಾಳ ಮುಂತಾದವರು ಉಪಸ್ತಿತರಿದ್ದರು.