
ದೇವದುರ್ಗ,ಮೇ.೦೫- ಜೆಡಿಎಸ್ ಪಕ್ಷದಲ್ಲಿ ತಾಲೂಕಾಧ್ಯಕ್ಷ ಬುಡ್ಡನಗೌಡ ಪಾಟೀಲ್ ಮಾದಿಗ ಸಮಾಜದ ಮುಖಂಡರಿಗೆ ಜಾತಿ ತಾರತಮ್ಯ ಮಾಡುತ್ತಿದ್ದಾರೆ. ಗೆದ್ದಿಲ್ಲ ಶಾಸಕರಂತೆ ವರ್ತನೆ ಮಾಡುತ್ತಿದ್ದು, ಬೇಸರ ತರಿಸಿದ್ದರಿಂದ ಜೆಡಿಎಸ್ ಪಕ್ಷಕ್ಕೆ ಕೊಟ್ಟಂತ ಬೆಂಬಲ ವಾಪಸ್ ಪಡೆಯಬೇಕಾಗಿದೆ ಎಂದು ಕೂಲಿ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಯಲ್ಲಪ್ಪ ದೊಡ್ಡಮನೆ ಆರ್ಲ್ದತಿ ಹೇಳಿದರು.
ಪಟ್ಟಣದ ಖಾಸಗಿ ಹೋಟಲ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಮಾಜದ ಮುಖಂಡರು ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್ ಮರಳಿ ಜೆಡಿಎಸ್ ಪಕ್ಷಕ್ಕೆ ಸೇರಿದ್ದರಿಂದ ಬೆಂಬಲ ನೀಡಿದ್ದೇವೆ. ಆದರೆ ಬುಡ್ಡನಗೌಡ ಪಾಟೀಲ್ ಮಾದಿಗ ಸಮಾಜದವರನ್ನು ನೋಡುವ ಪದ್ದತಿ ಸರಿಯಿಲ್ಲದ ಕಾರಣ ಬೇಸರ ಉಂಟಾದ್ದರಿಂದ ಬೆಂಬಲ ನೀಡುತ್ತಿಲ್ಲ ಎಂದು ಹೇಳಿದರು. ಈಹಿಂದಿನಿಂದಲೂ ಅವರು ದಲಿತ ಮುಖಂಡರನ್ನು ಕಡೆಗಣಸುತ್ತಲೇ ಬಂದಿದ್ದಾರೆ. ಇಂತಹವರಿಂದ ಸಮುದಾಯಗಳು ಅಭಿವೃದ್ಧಿ ಕಾಣಲು ಅಸಾದ್ಯ. ಇನ್ನು ಮತದಾನವೇ ಮುಗಿದಿಲ್ಲ ಫಲಿತಾಂಶವೇ ಬಂದಿಲ್ಲ. ಈಗಲೇ ಶಾಸಕರಂತೆ ವರ್ತನೆ ಮಾಡುತ್ತಿರುವುದು ಜೆಡಿಎಸ್ ಪಕ್ಷದಲ್ಲಿ ಗುಟ್ಟಾಗಿ ಉಳಿದಿಲ್ಲ. ಜಾತಿ ತಾರತಮ್ಯ ಮಾಡುವ ಕಾರಣಕ್ಕೆ ಬಹುತೇಕರು ಅವರು ಜೊತೆ ಒಳ್ಳೆಯ ಸಂಬಂಧ ಇಟ್ಟಿಕೊಂಡಿಲ್ಲ ಎಂದು ದೂರಿದರು. ಬುಡ್ಡನಗೌಡ ಪಾಟೀಲ್ ಯಾವ ಪಕ್ಷದಲ್ಲಿ ಇರುತ್ತಾರೂ ಅಲ್ಲಿ ಅಸಮಾಧಾನಗಳು ಹೆಚ್ಚು. ಈಬಾರಿ ಚುನಾವಣೆಯಲ್ಲಿ ಶಾಸಕ ಕೆ.ಶಿವನಗೌಡ ನಾಯಕರಿಗೆ ಬೆಂಬಲ ನೀಡಲು ತೀರ್ಮಾನಿಸಲಾಗಿದೆ. ಮಾದಿಗ ಸಮುದಾಯಗಳಿಗೆ ಅಭಿವೃದ್ಧಿ ಮಾಡುವ ಜತೆ ಹಲವು ಸ್ಥಾನಮಾನ ಬಿಜೆಪಿ ಪಕ್ಷ ನೀಡಿದೆ. ಜೆಡಿಎಸ್ ತಾಲೂಕಾಧ್ಯಕ್ಷ ಬುಡ್ಡನಗೌಡ ಪಾಟೀಲ್ ಮೈಯಿಗೆ ಅಂಟಿಕೊಂಡಿರುವ ಜಾತಿ ಪದ್ದತಿ ಬಿಡಬೇಕು. ಜೆಡಿಎಸ್ ಪಕ್ಷದಲ್ಲಿರುವ ಮಾದಿಗ ಸಮಾಜದವರು ಇಂತಹವರಿಂದ ದೂರ ಸರಿಯಬೇಕು. ಹಲವು ಪಕ್ಷದಲ್ಲಿದಾಗಲೂ ದಲಿತ ಮುಖಂಡರನ್ನು ದೂರವಿಟ್ಟು ಜಾತಿ ತಾರತಮ್ಯ ಮಾಡಿದ ಉದಾರಣೆಗಳಿವೆ. ಹೀಗಾಗಿ ಮಾದಿಗ ಸಮಾಜದ ಮುಖಂಡರು, ಕಾರ್‍ಯಕರ್ತರು ಎಚ್ಚರವಹಿಸಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಹನುಮಂತ ಕಟ್ಟಿಮನಿ, ಸಿಂಡಿಕೇಟ್ ಸದಸ್ಯ ಬಸವರಾಜ ಕೊಪ್ಪರು, ಉಮೇಶ ಪಾಟೀಲ್, ಮಲ್ಲು ತಳವರದೊಡ್ಡಿ ಸೇರಿ ಇದ್ದರು.