ಜೆಡಿಎಸ್ ಪಕ್ಷಕ್ಕೆ ಶಬ್ಫೀರ ಹುಸೇನ್, ಲಿಂಗರಾಜ ಹೂಗಾರ ರಾಜೀನಾಮೆ

ಸಿಂಧನೂರು,ಏ.೧೦- ಜೆಡಿಎಸ್ ಪಕ್ಷದ ಕಾರ್ಯಕರ್ತರಾದ ಶಬ್ಫೀರಹುಸೇನ ಹಾಗೂ ಲಿಂಗರಾಜ ಹೂಗಾರ ಪಕ್ಷಕ್ಕೆ ರಾಜೀನಾಮೆ ನೀಡಲಾಗಿದೆ ನಮ್ಮ ಮುಂದಿನ ನಡೆ ನಂತರ ತಿಳಿಸಲಾಗುತ್ತೇದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೆಡಿಎಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಕೆಲಸ ಮಾಡಿದ ಲಿಂಗರಾಜ ಹೂಗಾರ ಪಕ್ಷದ ವತಿಯಿಂದ. ಟಿಕೆಟ್ ಪಡೆದು ನಗರ ಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಿ ನಗರಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು ಎರಡನೇಯ ಸಲ ನಗರಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಪರಾಬವಗೊಂಡಿದ್ದರು.
ಶಬ್ಫೀರ ಹುಸೇನ ಹಾಗೂ ಲಿಂಗರಾಜ ಹೂಗಾರ ಪಕ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದರು. ಸಹ ನಮ್ಮನ್ನು ಕಡೆಗಣಿಸಿದ ಕಾರಣ ನಾನು ಪಕ್ಷಕ್ಕೆ ರಾಜೀನಾಮೆಯನ್ನು ನೀಡಿದ್ದೇನೆ ಎಂದು ಶಬ್ಬಿರ ಹುಸೇನ ಪತ್ರಿಕೆಗೆ ಸ್ವಷ್ಷನೆ ನೀಡಿದರೆ ಲಿಂಗರಾಜ ಹೂಗಾರ ಮಾತ್ರ ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದರು.
ನಾನು ಸುಮಾರು ವರ್ಷಗಳಿಂದ ಪಕ್ಷದಲ್ಲಿ ನಿಷ್ಠಾವಂತನಾಗಿ ಕೆಲಸ ಮಾಡಿದ್ದೇನೆ ನಮ್ಮ ಏರಿಯಾ ದಲ್ಲಿ ಕಾಂಗ್ರೆಸ್ ಪಕ್ಷದ ಏಜೆಂಟರು ಇಲ್ಲದ್ದಂತೆ ಮಾಡಿ ಪಕ್ಷದ ವತಿಯಿಂದ ಸ್ಪರ್ಧಿಸಿದ ಶಾಸಕ ವೆಂಟರಾವ ನಾಡಗೌಡ ಹಾಗೂ ನಗರಸಭೆಯ ಚುನಾವಣೆಯಲ್ಲಿ ಹೆಚ್ಚು ಮತಗಳು ಬರುವಂತೆ ಕೆಲಸ ಮಾಡಲಾಗಿದೆ ಕೆಲಸ ಕಾರ್ಯಗಳ ಬಗ್ಗೆ ಕೇಳಿದರೆ ಅಭಿಶೇಷ ನಾಡಗೌಡರನ್ನು ಕೇಳಿ ಎನ್ನುತ್ತಾರೆ. ಅವರನ್ನು ಕೇಳಿದರೆ ಸರಿಯಾದ ಸ್ಪಂದಿಸುತ್ತಿಲ್ಲ ಇದರಿಂದ ಬೇಸರಗೊಂಡು ಪಕ್ಷಕ್ಕೆ ರಾಜೀನಾಮೆಯನ್ನು ನೀಡಿದ್ದೇನೆ ಎಂದು ಶಬ್ಬೀರ ಹುಸೇನ್ ತಮ್ಮ ನೋವನ್ನು ತೋಡಿಕೊಂಡರು.