ಜೆಡಿಎಸ್ ಪಕ್ಷಕ್ಕೆ ಮತಹಾಕಲು ಮನವಿ


ಸಂಜೆವಾಣಿ ವಾರ್ತೆ
ಸಂಡೂರು:ಮಾ: 15: ರಾಷ್ಟ್ರೀಯ ಪಕ್ಷಗಳು ಇಂದು ರಾಷ್ಟ್ರವನ್ನು ಲೂಟಿ ಹೊಡೆಯುವ ಹಾಗೂ ಬಂಡವಾಳಶಾಹಿಗಳಿಗೆ ಮಾರುವಂತಹ ಹುನ್ನಾರ ನಡೆಸುತ್ತಿವೆ, ಅದ್ದರಿಂದ ರೈತಪರ, ಯುವಕರ, ಬಡವರ ಬಂಧುವಾಗಿ ಕಾರ್ಯನಿರ್ವಹಿಸುವ ಜೆಡಿಎಸ್ ಅಧ್ಯಕ್ಷ ಕುಮಾರಣ್ಣನವರನ್ನು ಮತ್ತೋಮ್ಮೆ ಅಧಿಕಾರಕ್ಕೆ ತರುವಂತಹ ಕೆಲಸವನ್ನು ಮತದಾರ ಬಂಧುಗಳು ಮಾಡಬೇಕು ಎಂದು ಜೆ.ಡಿ.ಎಸ್. ಅಭ್ಯರ್ಥಿ ಎನ್. ಸೋಮಪ್ಪ ಕರೆನೀಡಿದರು.
ಅವರು ಇಂದು ಇಡೀ ತಾಲೂಕಿನಾದ್ಯಂತ ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಪಾದಯಾತ್ರೆಯ ಮೂಲಕ ಸಂಚರಿಸಿ ಪಟ್ಟಣದ ಸುಭಾಷ್‍ನಗರದಲ್ಲಿ ಪ್ರತಿ ಮನೆಗಳಿಗೆ ಭೇಟಿನೀಡಿ ಮಾಜಿ ಮುಖ್ಯಮಂತ್ರಿ ಕುಮಾರಣ್ನನವರ ಯೋಜನೆಗಳನ್ನು ತಿಳಿಸುತ್ತಾ ಪಕ್ಷದ ಪ್ರನಾಳಿಕೆಯನ್ನು ತಿಳಿಸುತ್ತಾ ಮತ ಯಾಚನೆ ಮಾಡಿ ಮಾತನಾಡಿ ಇಂದು ದೇಶದ ರೈತರು ತಮ್ಮ ಬೆಳೆಗಳಿಗೆ ಬೆಲೆ ಇಲ್ಲದಂತಾಗಿದೆ, ನಿತ್ಯ ಬಳಕೆಯ ವಸ್ತುಗಳು ದುಪ್ಪಟ್ಟಾಗಿವೆ, ಸಾರ್ವಜನಿಕರು ತತ್ತರಿಸಿದ್ದಾರೆ, ಕಾಂಗ್ರೇಸ್ ಅಧಿಕಾರಕ್ಕಾಗಿ ಕಿತ್ತಾಟ, ಬಿಜೆಪಿ 40% ಸರ್ಕಾರ ಎಂದೇ ಖ್ಯಾತಿ ಪಡೆದುಕೊಂಡಿದೆ, ಅದ್ದರಿಂದ ಈ ಬಾರಿ ಸ್ಥಳೀಯ ಪಕ್ಷ ಜೆ.ಡಿ.ಎಸ್. ಅಭ್ಯರ್ಥಿ ಎನ್. ಸೋಮಪ್ಪನವರಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು, ಮಹಿಳಾ ಘಟಕದ, ತಾಲೂಕಿನ ವಿವಿಧ ಘಟಕಗಳ ಪದಾಧಿಕಾರಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.