ಜೆಡಿಎಸ್ ನಿಂದ ಡಾ|| ಬಾಬು ಜಗಜೀವನ್ ರಾಂ ಜನ್ಮ ದಿನಾಚರಣೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.06: ಮಾಜಿ ಉಪ ಪ್ರಧಾನಿ, ಹಸಿರು ಕ್ರಾಂತಿ ಹರಿಕಾರ, ಹಾಗೂ ಮುತ್ಸದ್ದಿ ರಾಜಕಾರಣಿ, ಕಾರ್ಮಿಕ ಕಾನೂನುಗಳ ಹೋರಾಡಗಾರ ದಲಿತ ನಾಯಕ ,ಹಾಗು ನಮ್ಮ ಹೆಮ್ಮೆಯ ನಾಯಕ ಡಾ|| ಬಾಬು ಜಗಜೀವನ್ ರಾವ್ ಅವರ 116ನೇ ಜಯಂತಿ ಅಂಗವಾಗಿ ಡಾ|| ಬಾಬು ಜಗಜೀವನ್ ರಾಂ ಪ್ರತಿಮೆಗೆ ಮಾರ್ಲಪಾಣೆ ಮಾಡಲಾಯಿತು
ಈ ಸಂದರ್ಭದಲ್ಲಿ  ಜೆಡಿಎಸ್ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಮುನ್ನಾ ಬಾಯ್, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಪಿ.ಎಸ್.ಸೋಮಲಿಂಗನ ಗೌಡ್ರ, ರಾಜ್ಯಕಾರ್ಯದರ್ಶಿ ಮಿನಾಹಳ್ಳಿ ತಾಯಣ್ಣ ಮತ್ತು ಡಿ. ವಿಜಯಕುಮಾರ್ ಬಳ್ಳಾರಿ ಜಿಲ್ಲಾ ಯುವ ಅಧ್ಯಕ್ಷರು ಹಾಗು ಬಳ್ಳಾರಿ ಜಿಲ್ಲಾ ವಕ್ತಾರರು ಹಾಗೂ ಪಕ್ಷದ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.