ಜೆಡಿಎಸ್ ನಿಂದ ಕೋಡಿಹಳ್ಳಿ ಭೀಮಣ್ಣ  ನಾಮಪತ್ರ ಸಲ್ಲಿಕೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ.20 :-  ನಿನ್ನೆ ಸಾಂಕೇತಿಕವಾಗಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ಕೋಡಿಹಳ್ಳಿ ಭೀಮಣ್ಣ ಇಂದು ಅಧಿಕೃತವಾಗಿ ಅಪಾರ ಬೆಂಬಲಿಗರ ಜೊತೆಗೂಡಿ ಕೂಡ್ಲಿಗಿ ಆಡಳಿತ ಸೌಧಕ್ಕೆ ತೆರಳಿ ನಾಮಪತ್ರ ಸಲ್ಲಿಸಿದರು.
ಬಿಜೆಪಿ ಟಿಕೇಟ್ ವಂಚಿತ ಕೋಡಿಹಳ್ಳಿ ಭೀಮಣ್ಣ ಬಿಜೆಪಿ ತೊರೆದು ಸೋಮವಾರ ಅಧಿಕೃತವಾಗಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಎನ್ ಎಂ ನಬೀ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದ ಇವರು ಇಂದು ಬೆಳಿಗ್ಗೆ  ಜೆಡಿಎಸ್ ಅಭ್ಯರ್ಥಿಯಾಗಿ ಅಧಿಕೃತವಾಗಿ ಜೆಡಿಎಸ್ ಎಸ್ಟಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಕಾರೆಪ್ಪ, ತಾಲೂಕು ಅಧ್ಯಕ್ಷ ಬ್ಯಾಳಿ ವಿಜಯಕುಮಾರಗೌಡ, ಪ ಪಂ ಸದಸ್ಯ ಸಚಿನ ಕುಮಾರ ಅವರ ಜೊತೆ ಸಾಗಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಈರಣ್ಣ ಬಿರಾದಾರ ಗೆ ನಾಮಪತ್ರ ಸಲ್ಲಿಸಿದರು.
ಕೋಡಿಹಳ್ಳಿ ಭೀಮಣ್ಣ ಮೂಲತಃ ಹರಪನಹಳ್ಳಿ ತಾಲೂಕಿನ ಕೋಡಿಹಳ್ಳಿ ಗ್ರಾಮದವರಾಗಿದ್ದು ವಿದ್ಯಾರ್ಥಿ ದೆಸೆಯಲ್ಲೇ ಭಾರತೀಯ ಕಮ್ಯುನಿಸ್ಟ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಇವರು ನಂತರ ದಿನಗಳಲ್ಲಿ ಬಡವರ, ನೊಂದವರ, ಮಹಿಳೆಯರ, ವಿದ್ಯಾರ್ಥಿಗಳ ಪರ ನಿಂತು ಅನೇಕ ಸಾಮಾಜಿಕ ಕಳಕಳಿಯ ಸೇವೆಯಲ್ಲಿ ನಿರಂತರ ತೊಡಗಿಕೊಂಡಿದ್ದ ಇವರು ಹರಪನಹಳ್ಳಿಗೆ 371ಜೆ ಸೇರ್ಪಡೆಗೊಳಿಸುವ  ಹಾಗೂ ದಾವಣಗೆರೆ ಜಿಲ್ಲೆಯಿಂದ  ಹರಪನಹಳ್ಳಿ ತಾಲೂಕನ್ನು  ಬಳ್ಳಾರಿ ಜಿಲ್ಲೆಗೆ ಮರು ಸೇರ್ಪಡಿಸುವ ಹೋರಾಟದಲ್ಲಿ ಮುಂಚೂಣಿ ನಾಯಕರಲ್ಲಿ ಇವರು ಒಬ್ಬರಾಗಿದ್ದರು ಅಲ್ಲದೆ ಕೆಪಿಸಿಸಿ ಸದಸ್ಯರಾಗಿ, ಎಂ. ಪಿ ರವೀಂದ್ರ ಅವರ ಒಡನಾಡಿಯಾಗಿದ್ದ ಇವರು ಸತೀಶ ಜಾರಕಿಹೊಳಿ ಅವರ ಮಾನವ ಬಂಧುತ್ವ ವೇದಿಕೆಯ ಪದಾಧಿಕಾರಿಯಾಗಿ ಸಂಘಟನಾತ್ಮಕವಾಗಿ ಗುರುತಿಸಿಕೊಂಡಿದ್ದ ಇವರು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿಯಲು ಕೂಡ್ಲಿಗಿಗೆ ಆಗಮಿಸಿ ಕಳೆದ ಬಾರಿ ಶ್ರೀರಾಮುಲು ಬಿಜೆಪಿಯಿಂದ ಟಿಕೆಟ್ ಕೊಡುವ ಮುನ್ಸೂಚನೆ ಇರುವಾಗ, ಮೊಳಕಾಲ್ಮುರು ಮಾಜಿ ಶಾಸಕರಾಗಿದ್ದ ಎನ್ ವೈ ಗೋಪಾಲಕೃಷ್ಣ ಇವರಿಗೆ ಕೂಡ್ಲಿಗಿ ಕ್ಷೇತ್ರದಿಂದ ಬಿಜೆಪಿ ಟಿಕೇಟ್ ನೀಡಿದ್ದರಿಂದ ಅಂದು ಅಸಮಾಧಾನಗೊಂಡರೂ  ಮುಂದಿನ ಬಾರಿ ಅವಕಾಶ ಸಿಗುವುದೆಂಬ ಆಸೆಯಲ್ಲಿ ಅಂದು ಬಿಜೆಪಿಯ ಎನ್ ವೈ ಗೋಪಾಲಕೃಷ್ಣ ಗೆಲುವಿಗೂ ಮತ್ತು ಬಳ್ಳಾರಿ ಎಂಪಿ ದೇವೇಂದ್ರಪ್ಪ ಗೆಲುವಿಗೂ ಶ್ರಮಿಸಿದ್ದರು ಆದರೆ,  ಈ ಬಾರಿಯ ಬಿಜೆಪಿ ಟಿಕೇಟ್ ನ ಪ್ರಮುಖ ಆಕಾಂಕ್ಷಿಯಾಗಿದ್ದ ಕೋಡಿಹಳ್ಳಿ ಭೀಮಣ್ಣರವರಿಗೆ ಟಿಕೇಟ್ ಹಂಚಿಕೆಯಲ್ಲಿ ಈ ಸಲವೂ ಅನ್ಯಾಯವಾಗಿದ್ದು ಬಂಡಾಯದ ಕಹಳೆ ಮೊಳಗಿಸಿ ಜೆಡಿಎಸ್ ಪಕ್ಷ ಸೇರಿ ಈಗ ಕೂಡ್ಲಿಗಿ ಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದಾರೆ.