ಜೆಡಿಎಸ್ ದೂರಾಡಳಿತ ನಿಷ್ಟಾವಂತರ ಕಡೆಗಣೆನೆ- ಶ್ರೀನಿವಾಸ

ಸಿಂಧನೂರು,ಏ.೧೬ ಜೆಡಿಎಸ್ ಪಕ್ಷದಲ್ಲಿ ನಿಷ್ಠಾವಂತ ಹಾಗೂ ಪ್ರಮಾಣಿಕ ಕಾರ್ಯಕರ್ತರಿಗೆ ಬೆಲೆ ಇಲ್ಲ ಇಲ್ಲಿ ಹೊಗಳು ಭಟ್ಟರಿಗೆ ಬೆಲೆ ಇದೆ. ಆದ್ದರಿಂದ ಮನನೊಂದು ಬೇಸತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಜೆಡಿಎಸ್ ಪಕ್ಷದ ತಾಲೂಕಾ ಉಪಾಧ್ಯಕ್ಷರಾದ ವಿ.ಶ್ರೀನಿವಾಸ ಹಾಗೂ ಅವರ ಪತ್ನಿ ಕವಿತಾ ಶ್ರೀನಿವಾಸ ಪತ್ರಿಕೆ ಸ್ವಷ್ಟನೆ ನೀಡಿದರು.
ತಾಲೂಕಿನ ಗಾಂಧಿನಗರ ತಮ್ಮ ನಿವಾಸದಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ಸುಮಾರು ೧೮ ವರ್ಷಗಳಿಂದ ಪಕ್ಷದಲ್ಲಿ ಇದ್ದು ಪ್ರಾಮಾಣಿಕವಾಗಿ ಕೆಲಸ ಮಾಡಿದರು ನಮ್ಮ ಮಾತಿಗೆ ಬೆಲೆ ಕೊಡದೆ ನಮ್ಮ ಕ್ಯಾಂಪ್‌ನ ಕೆಲಸ ಮಾಡಿ ಕೋಡಿ ಎಂದು ಶಾಸಕ ವೆಂಟರಾವ ನಾಡಗೌಡರನ್ನು ಕೇಳಲು ಅವರ ಬಳಿ ಹೋಗಲು ನಮಗೆ ಅವಕಾಶ ಸಿಗುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪಕ್ಷದಿಂದ ನನ್ನ ಹೆಂಡತಿ ತಾ.ಪ.ಸದಸ್ಯರಾಗಿ ತಾ.ಪ ಅಧ್ಯಕ್ಷರಾಗಿ ಕೆಲಸ ಮಾಡಿದ್ದು ಅಲ್ಲದೆ ಜಾಲಿಹಾಳ. ಜಿ.ಪ.ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಇರಲಿಲ್ಲ ಶಾಸಕರು ಮನೆಗೆ ಬಂದು ನಿನ್ನ ಹೆಂಡತಿಯನ್ನು ನಿಲ್ಲಿಸಿ ನನ್ನ ಮರ್ಯಾದೆಯನ್ನು ಉಳಿಸಿ ಎಂದು ಬೇಡಿಕೊಂಡ ಕಾರಣ ನನ್ನ ಹೆಂಡತಿ ಕವಿತಾ ಚುನಾವಣೆಯಲ್ಲಿ ನಿಂತು ಪಕ್ಷದ ಮಾನ ಉಳಿಸಲಾಯಿತು ಎಂದರು.
ನಾನು ಪಕ್ಷಕ್ಕೆ ಬಂದ ಮೇಲೆ ನಾಗೇಶ ಹಂಚಿನಾಳ ಕ್ಯಾಂಪ್ ಹಾಗೂ ವೆಂಕಟೇಶ ನಂಜಲದಿನ್ನಿ, ಕೃಷ್ಣ ಮೂರ್ತಿ, ಸತ್ಯನಾರಾಯಣ ಇವರು ಬಂದಿದ್ದು, ನಾನು ನಾಡಗೌಡರನ್ನು ಬೇಟಿ ಮಾಡಲು ಹೋದಾಗ ಮೊದಲು ಇವರನ್ನು ಬೇಟಿ ಮಾಡಿ ಇವರ ಅನುಮತಿ ಪಡೆದುಕೊಂಡು ಅವರು ಒಕೆ ಎಂದ ಮೇಲೆ ನಾಡಗೌಡರನ್ನು ಬೇಟಿ ಮಾಡುವ ಪರಿಸ್ಥಿತಿಯ ಒದಗಿಬಂದಿತ್ತು.
ಗಾಂಧಿನಗರ ಕ್ಯಾಂಪ್‌ನ ಏನಾದರು ಜನರು ಸಮಸ್ಯೆಗಳನ್ನು ಹೇಳಲು ಶಾಸಕರ ಬಳಿ ಹೋದರೆ ನಾಗೇಶ ಹಂಚಿನಾಳ, ವೆಂಕಟೇಶ ನಂಜಲದಿನ್ನಿ ಇವರನ್ನ ಬೇಟಿ ಮಾಡಿ ಅವರೆ ಬಗೆಹರಿಸುತ್ತಾರೆ ಎಂದು ಶಾಸಕರು ಹೇಳುತ್ತಾರೆ. ನಾನು ಹಿರಿಯ ಸದಸ್ಯ ನಿದ್ದರು ಸಣ್ಣವರ ಹತ್ತಿರ ಹೋಗಿ ಕೆಲಸ ಕೇಳವ ಪರಿಸ್ಥಿತಿ ಬಂದ ಕಾರಣ ಹಾಗೂ ನನ್ನನ್ನು ಕಡೆಗಣಿಸುತ್ತಲೆ ಬಂದುರು ಇನ್ನು ಮುಂದೆ ಅವರನ್ನು ಕೇಳಿ ಶಾಸಕರು ಚುನಾವಣೆಯ ಮಾಡಲಿ ಅವರು ಗೆದ್ದು ಶಾಸಕರಾಗಲು ನೋಡೋಣ ಎಂದು ಸವಾಲು ಹಾಕಿದರು.
ಈಗ ಪಕ್ಷಕ್ಕೆ ರಾಜೀನಾಮೆ ನೀಡಿದ್ದು ಮಂದೆ ನನ್ನ ಅಭಿಮಾನಿಗಳು ಕಾರ್ಯಕರ್ತರ ಸಭೆ ಮಾಡಿ ಮುಂದಿನ ನನ್ನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.
ಈ ಸಂದರ್ಭದಲ್ಲಿ ಅವರ ಪತ್ನಿ ಕವಿತಾ ಶ್ರೀನಿವಾಸ ಇದ್ದರು.