ಜೆಡಿಎಸ್ ತೊರೆದು ಬಿಜೆಪಿ ಸೇರಿದ ಸುಂಕೇಶ್ವರಾಳ ಗ್ರಾಮಸ್ಥರು

ಅರಕೇರಾ.ಏ.೦೭- ತಾಲ್ಲೂಕಿನ ಸುಂಕೇಶ್ವರಹಾಳ ಗ್ರಾಮದ ೮೦ಕ್ಕೂ ಹೆಚ್ಚು ಕಾರ್ಯಕರ್ತರು ಜೆಡಿಎಸ್ ಮತ್ತು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.
ಇಂದು ತಾಲ್ಲೂಕಿನ ಸುಂಕೇಶ್ವರಹಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ಸೇರ್ಪಡೆಯಾದರು.
ಗ್ರಾಮದ ಬಿಜೆಪಿ ಮುಖಂಡರಾದ ರಾಮಪ್ಪ ನಾಯಕ, ಶಿವಪುತ್ರ ಗುತ್ತೇದಾರ, ಯಶ್ವಂತ ಅವರ ನೇತೃತ್ವದಲ್ಲಿ ಬಿಜೆಪಿ ಸೇರಿದರು.
ದೇವದುರ್ಗ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಕೆ.ಶಿವನಗೌಡ ನಾಯಕ ಅವರು ನೂತನ ಕಾರ್ಯಕರ್ತರಿಗೆ ಬಿಜೆಪಿ ಶಾಲು ಹಾಕುವ ಮೂಲಕ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಕೆ.ಜಂಬಣ್ಣ ನಿಲೋಗಲ್, ವಿಶ್ವನಾಥ ಬನಹಟ್ಟಿ, ಬಿಜೆಪಿ ಮುಖಂಡರಾದ ಕೆ.ಅನಂತರಾಜ್ ನಾಯಕ, ಭಗವಂತ್ರಾಯ ನಾಯಕ, ವಿರೇಶ ನಾಯಕ, ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಗ್ರಾಮಸ್ಥರು ಇದ್ದರು.