ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ

ಸಿಂಧನೂರು,ಜ.೮- ಅಲಬನೂರ ಗ್ರಾಮದ ಜೆಡಿಎಸ್ ಪಕ್ಷದ ಕಾರ್ಯಕರ್ತರು ಜೆಡಿಎಸ್ ಪಕ್ಷ ಬಿಟ್ಟು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಸಮ್ಮಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ತಾಲೂಕಿನ ಅಲಬನೂರ ಗ್ರಾಮದ ಜೆಡಿಎಸ್ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಮೆಚ್ಚಿ ಹಾಗೂ ಹಂಪನಗೌಡ ಬಾದರ್ಲಿ ನಾಯಕತ್ವ ನೋಡಿ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು.
ಪಕ್ಷಕ್ಕೆ ಸೇರ್ಪಡೆಯಾದ ಚಿದಾನಂದಸ್ವಾಮಿ, ಹನುಮಂತ ಮ್ಯಾಗೇರ್, ಹುಲಗಪ್ಪ ಬಜಾಂತ್ರಿ, ಸುರೇಶ್, ಶರಣಪ್ಪ,ಮಲ್ಲೇಶ, ನಾಗನಗೌಡ, ಕ್ಯಾಡ್ ನಾಗಪ್ಪ, ಫಕೀರಪ್ಪ, ಚನ್ನಬಸವ, ಶರಣಪ್ಪ ಗುಡಗುಂಟಿ, ಹೋಟಲ್, ಕಣ್ಣಪ್ಪ, ಬಸವರಾಜ ಆಸಣ್ಣ, ಶಿವಪ್ಪ, ಇವರನ್ನು ಹಂಪನಗೌಡ ಬಾದರ್ಲಿ ಪಕ್ಷಕ್ಕೆ ಸ್ವಾಗತ ಮಾಡಿಕೊಂಡರು.
ಲಿಂಗಪ್ಪ ಜಂಬಣ್ಣನವರು, ಅಮರೇಶ ವಲ್ಲೂರು, ವೀರೇಶ ಕಸ್ತೂರಿ, ವಿರೂಪಾಕ್ಷಿಗೌಡ ಸಾನಬಾಳ, ಬಸವರಾಜ ಇನ್ನಿತರರು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.