ಜೆಡಿಎಸ್ ತಾಲೂಕು ಉಪಾಧ್ಯಕ್ಷರಾಗಿ ಶರಣಪ್ಪ ಪರೆಪ್ಪ ನಗರ ಘಟಕಕ್ಕೆ ಸುಶೀಲ ಅವಸ್ಥಿ ಅಧ್ಯಕ್ಷ

ಬಸವಕಲ್ಯಾಣ:ನ.7: ತಾಲೂಕಿನ ಜೆಡಿಎಸ್ ಪಕ್ಷದ ತಾಲೂಕು ಉಪಾಧ್ಯಕ್ಷರನ್ನಾಗಿ ಶರಣಪ್ಪಾ ಗುರನಾಥ ಪರೆಪ್ಪಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ತಾಲೂಕು ಅಧ್ಯಕ್ಷ ಅರ್ಷದ ಮಹಾಗಾಂವೆ ತಿಳಿಸಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷ ರಮೇಶ ಪಾಟೀಲ ಸೋಲಪೂರ ಅವರ ಆದೇಶದ ಮೇರೆಗೆ ಜೆಡಿಎಸ್ ಪಕ್ಷದ ಶಾಶಕಾಂಗ ಪಕ್ಷದ ಉಪ ನಾಯಕರಾದ ಹಾಗೂ ಬೀದರ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪಾ ಖಾಶೆಂಪೂರ ಅವರು ಶರಣಪ್ಪ ಅವರಿಗೆ ಮಂಗಳವಾರ ನಗರದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಆದೇಶ ಪತ್ರ ನೀಡಿದರು.
ಬಸವಕಲ್ಯಾಣ ಕ್ಷೇತ್ರದದಲ್ಲಿ ಜೆಡಿಎಸ್ ಪಕ್ಷವೂ ತಳಮಟ್ಟದಿಂದ ಬಲಪಡಿಸಿ ಯುವಕರನ್ನು ಪಕ್ಷಕ್ಕೆ ಸೇರ್ಪಡಿಸುವ ಮೂಲಕ ಪಕ್ಷ ಸಂಘಟನೆಗೆ ಇನ್ನಷ್ಟು ಶ್ರಮಿಸಿ ಪಕ್ಷ ಸಂಘಟನೆಗೆ ಶ್ರಮಿಸಬೇಕು ಎಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ನಗರ ಘಟಕದ ಅÀಧ್ಯಕ್ಷರನ್ನಾಗಿ ಸುಶೀಲ ಅವಸ್ಥಿಯನ್ನು ನೇಮಕ ಮಾಡಲಾಯಿತು. ಈ ಹಿಂದೆ ಇವರು ಪಕ್ಷದ ನಗರ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಇವರ ಕಾರ್ಯ ವೈಖರಿ ನೋಡಿ ಅವಸ್ಥಿಯನ್ನು ಮತ್ತೊಮ್ಮೆ ನಗರ ಘಟಕದ ಅಧ್ಯಕ್ಷರನ್ನಾಗಿ ಮರು ನೇಮಕ ಮಾಡಿ ಆದೇಶ ಪತ್ರ ನೀಡಲಾಗಿದೆ.
ಅಲ್ಲದೆ ಶೇಖ್ ಜಾವೀದ ( ನಗರ ಘಟಕದ ಉಪಾಧ್ಯಕ್ಷರು) ಖಯಾಮೋದ್ದಿನ್ ನಿಲಂಗೆ ( ನಗರ ಘಟಕದ ಅಲ್ಪ ಸಂಖ್ಯಾತರ ಅಧ್ಯಕ್ಷ) ಜಬೀ ನವಾಜ ( ನಗರ ಘಟಕದ ಯುಥ್ ಅಧ್ಯಕ್ಷ) ಪ್ರೀತಂ ಮದಲವಾಡ ( ಎಸ್ಸಿ ನಗರ ಘಟಕದ ಅಧ್ಯಕ್ಷ) ಅವರನ್ನು ನೇಮಕ ಮಾಡಿ ಇವರಿಗೂ ಆದೇಶ ಪತ್ರ ನೀಡಲಾಗಿದೆ.