ಜೆಡಿಎಸ್ ಜತೆ ಮೈತ್ರಿ ಮುಮದುವರೆಯಲಿದೆ: ಬಿಎಸ್‌ವೈ

ದಾವಣಗೆರೆ.ಏ.೧೬- ಈಗಿನ ಲೋಕಸಭಾ ಚುನಾವಣೆ ಮಾತ್ರವಲ್ಲ ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಜೆಡಿಎಸ್ ಜತೆಗೆ ಬಿಜೆಪಿ ಮೈತ್ರಿ ಮುಂದುವರೆಯಲಿದೆ ಎಂದು ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಒಟ್ಟಾಗಿರುವುದರಿಂದ ಎಲ್ಲಾ ೨೮ ಕ್ಷೇತ್ರಗಳನ್ನು ಗೆಲ್ಲಲು ಪ್ರಯತ್ನ ಮಾಡುತ್ತೇವೆ.ನಾನು ೨೩ ಕ್ಷೇತ್ರಗಳನ್ನು ಸುತ್ತಿದ್ದೇನೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಉಳಿದ ಕ್ಷೇತ್ರಗಳಲ್ಲಿ ಇಳಿ ವಯಸ್ಸಿನಲ್ಲೂ ಪ್ರಚಾರ ನಡೆಸುತ್ತಿದ್ದಾರೆ.ಇನ್ನು ದಾವಣಗೆರೆ ಚುನಾವಣೆ ಕುರಿತು ಮಾತನಾಡಿ, ಗಾಯತ್ರಿ ಸಿದ್ದೇಶ್ವರ ಅವರು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಬಿಎಸ್‌ವೈ, ಕಾಂಗ್ರೆಸ್ ಪಕ್ಷ ಸಂವಿಧಾನ ಶಿಲ್ಪಿ ಡಾ.ಬಿಆರ್.ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲಿಲ್ಲ.ಅಂಬೇಡ್ಕರ್ ನಿಧಾನರಾದಾಗ ಅಂತ್ಯ ಸಂಸ್ಕರಕ್ಕೆ ಜಾಗ ನೀಡಲಿಲ್ಲ. ಜವಾಹರಲಾಲ್ ನೆಹರೂ ಸಮಾಧಿಗೆ ೫೨.೬ ಎಕರೆ, ಇಂದಿರಾ ಗಾಂಧಿ ಸಮಾಧಿಗೆ ೪೫ ಎಕರೆ ಮತ್ತು ರಾಜೀವ್ ಗಾಂಧಿ ಸಮಾಧಿಗೆ ೧೫ ಎಕರೆ ಜಾಗ ಕೊಡಲಾಗಿದೆ. ಆದರೆ ಅಂಬೇಡ್ಕರ್ ಅವರಿಗೆ ಈ ರೀತಿಯಾಗಿ ಅಪಮಾನ ಮಾಡಿದ್ದು ಸರಿಯಲ್ಲ ಎಂದರು.ಇದಲ್ಲದೇ ಅಂಬೇಡ್ಕರ್ ಅವರು ಚುನಾವಣೆಯಲ್ಲಿ ನಿಂತಾಗ ಎರಡು ಬಾರಿ ಕಾಂಗ್ರೆಸ್ ಸೋಲಿಸಿದೆ ಎಂದರು.ಇದೀಗ ರಾಜ್ಯ ಕಾಂಗ್ರೆಸ್ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ನೀಡುವ ಹಣವನ್ನು ೧೧,೧೬೪ ಕೋಟಿ ರೂ, ಹಣವನ್ನು ಬೇರೆ ಯೋಜನೆಗಳಿಗೆ ವರ್ಗಾಹಿಸಿ ಅನ್ಯಾಯ ಮಾಡಿದೆ. ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಟೀಕಿಸಿದರು.