
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.03: ನಗರದ ವಿದ್ಯಾನಗರ, ದೇವಿನಗರ ಮತ್ತು ಪಾರ್ವತಿ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಅನಿಲ್ ಲಾಡ್ ಅವರ ಪರವಾಗಿ ಜೆಡಿಎಸ್ ಗೆ ಮತ ನೀಡಿ ಎಂದು ಪತ್ನಿ ಆರತಿ ಲಾಡ್ ಅವರು ತಮ್ಮಬೆಂಲಿಗರ ಜೊತೆ ಸೇರಿ ಮತಯಾಚನೆ ಮಾಡಿದರು.
ಬದಲಾದ ರಾಜಕೀಯ ಸಂದರ್ಭದಲ್ಲಿ ನನ್ನ ಪತಿ ಅನಿಲ್ ಲಾಡ್ ಅವರು ಈ ಬಾರಿ ಜೆಡಿಎಸ್ ನಿಂದ ಸ್ಪರ್ಧೆ ಮಾಡಿದ್ದಾರೆ.
ರಾಜ್ಯದ ಜನರ ಅಭಿವೃದ್ದಿಗಾಗಿ ಕುಮಾರಸ್ವಾಮಿ ಅವರು ಪಕ್ಷದಿಂದ ಪಂಚರತ್ನ ಯೋಜನೆಗಳನ್ನು ರೂಪಿಸಿದ್ದಾರೆ. ಅವುಗಳಮೂಲಕ ಉತ್ತಮ ಆರೋಗ್ಯ, ಶಿಕ್ಷಣ ವ್ಯವಸ್ಥೆ ಯುವ ಸಮೂಹಕ್ಕೆ ಉದ್ಯೋಗ ಮತ್ತು ರೈತರ ಏಳಿಗೆಯಾಗಲಿದೆ ಅದಕ್ಕಾಗಿ ಜೆಡಿಎಸ್ ಗೆ ಮತ ನೀಡಿ ಅಧಿಕಾರಕ್ಕೆ ತನ್ನಿ. ಅಲ್ಲದೆ ಅನಿಲ್ ಲಾಡ್ ಅವರು ಶಾಸಕರಾಗಿದ್ದಾಗ ಜನತೆಗೆ ಸ್ಪಂದಿಸಿ ವಾರ್ಡ್ ವಾರ್ಡಿನಲ್ಲಿ ನೀರಿನ ವ್ಯವಸ್ಥೆ ಮಾಡಿದ್ದನ್ನು ನೆನಪಿಸಿ. ಮತ ನೀಡುವಂತೆ ಕೋರಿದರು.