ಜೆಡಿಎಸ್ ಗೆ ಓಟು ಹಾಕಿ ಕಾಂಗ್ರೆಸ್ ಗೆ ಪಾಠಕಲಿಸಿ:  ಅನಿಲ್ ಲಾಡ್


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.26: ಕಾಂಗ್ರೆಸ್ ಪಕ್ಷಕ್ಕೆ ಜನಸೇವೆ ಮಾಡುವ ನಮ್ಮಂತಹವರು ಬೇಕಿಲ್ಲ. ದುಡ್ಡಿದ್ದವರು ಬೇಕು, ಆಗ ಅನಿಲ್ ಲಾಡ್ ನಗರದಲ್ಲಿ ರೆಡ್ಡಿಗಳನ್ನು ಎದುರಿಸಲು ಬೇಕಿತ್ತು. ಈಗ ಬೇಡವಾಗಿದೆ.‌ಅದಕ್ಕಾಗಿ ಎಲ್ಲರ ಅಭಿವೃದ್ಧಿ ಬಯಸುವ ಜೆಡಿಎಸ್ ಪಕ್ಷಕ್ಜೆ ಮತ ಹಾಕಿ ಕಾಂಗ್ರೆಸ್ ಗೆ ಪಾಠ ಕಲಿಸಿ ಎಂದು ಮಾಜಿ ಶಾಸಕ, ನಗರದ ಜೆಡಿಎಸ್ ಅಭ್ಯರ್ಥಿ ಅನಿಲ್ ಲಾಡ್ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಅವರು ನಿನ್ನೆ ಸಂಜೆ ನಗರದ ಶ್ರೀರಾಂಪುರ ಕಾಲೋನಿಯಲ್ಲಿ ಮತದರರ ಬಳಿ ಚುನಾವಣಾ ಪ್ರಚಾರ ನಡೆಸಿ ಮತಯಾಚನೆ ಮಾಡಿ ಮಾತನಾಡುತ್ತಿದ್ದರು.
ಬಡವರುಗೆ ಸಹಾಯ ಮಾಡುವುದೇ  ನನ್ನ ಧ್ಯೇಯ, ಆಶ್ರಯ ಇಲ್ಲದವರಿಗೆಲ್ಲ ಆಶ್ರಯ ನಿವೇಶನ ನೀಡಬೆರಕೆಂದು ನಾನು ಹೋರಾಟ ಮಾಡಿದ್ದು ನಿಮಗೆಲ್ಲ ತಿಳಿದಿದೆ. ಈ ಬಾರಿ‌ ಜೆಡಿಎಸ್ ಅಭ್ಯರ್ಥಿಯಾಗಿರುವೆ ಭತ್ತದ ಹುಲ್ಲಿನ ಹೊರೆ ಹೊತ್ತ ಮಹಿಳೆ ಗುರ್ತಿಗೆ ಮತ ನೀಡಿ ಎಂದರು.
ಈ ಸಂದರ್ಭದಲ್ಲಿ ರೋಷನ್, ಮುಕ್ಕಣ್ಣ, ಗೌಸಿಯಾ, ಪಂಪಾಪತಿ, ನರೇಶ್, ಲಕ್ಷ್ಮಿ, ಮಲ್ಲಿ ಮೊದಲಾದವರು ಇದ್ದರು.