ಸಂಜೆವಾಣಿ ವಾರ್ತೆ
ಗಂಗಾವತಿ, ಏ.09: ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಆಕಾಂಕ್ಷಿ ಹೆಚ್.ಆರ್ ಚನ್ನಕೇಶವ ಅವರು ಐತಿಹಾಸಿಕ ಪ್ರಸಿದ್ದವಾಗಿರುವ ಅಂಜನಾದ್ರಿಯ ಶ್ರೀ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸುವುದರ ಮೂಲಕ ಚುನಾವಣಾ ಪ್ರಚಾರ ಕಾರ್ಯವನ್ನು ಆರಂಭಿಸಿದರು.
ನಂತರ ಗಂಗಾವತಿ ವಿಧಾನಸಭಾ ಕ್ಷೇತ್ರದ ಕ್ಷೇತ್ರದ ಚಿಕ್ಕರಾಂಪೂರ, ಆನೇಗುಂದಿ, ಕೆಡೆಬಾಗಿಲು, ಮತ್ತು ಬಸವನದುರ್ಗಾ ಗ್ರಾಮಗಳಿಗೆ ತೆರಳಿ ಕುಮಾರಣ್ಣನವರನ್ನು ಬೆಂಬಲಿಸಿ ಜೆಡಿಎಸ್ ಪಕ್ಷಕ್ಕೆ ಮತನೀಡಿ ತಮ್ಮಗಳ ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಡುವಂತೆ ಮತದಾರರಲ್ಲಿ ಮನವಿ ಮಾಡಿದರು. ರೈತರ ಕಾಳಜಿಯನ್ನು ಅರಿತುಕೊಂಡು ಹಲವಾರು ಜನರಪರ ಯೋಜನೆಗಳನ್ನು ಜೆಡಿಎಸ್ ಪಕ್ಷ ನೀಡಿದೆ. ಪಂಚರತ್ನ ಯಾತ್ರೆಯ ಮೂಲಕ ಹಲವಾರು ಯೋಜನೆಗಳನ್ನು ರೂಪಿಸಿದ್ದು ಈ ಭಾರಿ ಜೆಡಿಎಸ್ ಗೆ ಮತ ನೀಡಿ ಆಶಿರ್ವಾಧಿಸಬೇಕು ಎಂದು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಶೇಖ್ ನಬಿಸಾಬ್, ತಾಲೂಕು ಪ್ರಧಾನ ಕಾರ್ಯದರ್ಶಿ ದುರ್ಗಾ ಪ್ರಸಾದ್, ತಾಲೂಕು ಅಲ್ಪಸಂಖ್ಯಾತರ ಅಧ್ಯಕ್ಷ ಮಹ್ಮದ್ ಯೂಸುಫ್, ವಿಕ್ರಮ್ ರಾಜ್, ಜಾನಿ, ನಗರ ಭಾಷಾ ಮಸ್ಕಿ, ಚಂದ್ರಶೇಖರ್ ಜೆ, ಖಾಜಾಪಾಷಾ, ಟಿ ಕೃಷ್ಣಪ್ಪ ಸಂಗಾಪುರ್, ಚಿರಂಜೀವಿ ಜೆಕಿನ್, ಚಿನ್ನತಂಬಿ ಹುಸೇನ್ ಮೇಸ್ತ್ರಿ ಬಸವ ರೆಡ್ಡಿ ಕೆಸರಹಟ್ಟಿ, ಶ್ರೀನಿವಾಸ ವೆಂಕಟಗಿರಿ, ಮುನಿಯಪ್ಪ ಉಪ್ಪಾರ್ ಮಂಜುನಾಥ್ ಮಂತ್ರಿ ಚನ್ನಬಸವ ಜಂತಕಲ್ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
One attachment • Scanned by Gmail