ಜೆಡಿಎಸ್ ಕಾರ್ಯಕರ್ತರ ಸಮಾವೇಶ

ಬೆಟ್ಟದಪುರ: ಮಾ.29:- ಪಿರಿಯಾಪಟ್ಟಣ ತಾಲೂಕಿನಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿಯನ್ನು ನನ್ನ ಅಧಿಕಾರ ಅವಧಿಯಲ್ಲಿ ಮಾಡಿ ತೋರಿಸಿಕೊಟ್ಟಿದ್ದೇನೆ, ಎಂದು ಶಾಸಕ ಕೆ ಮಹದೇವ್ ತಿಳಿಸಿದರು
ಸಮೀಪದ ಶಾನುಭೋಗನಹಳ್ಳಿ ಗ್ರಾಮದಲ್ಲಿ ನಡೆದ ಜೆಡಿಎಸ್ ನ ಕಾರ್ಯಕರ್ತರ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ಪ್ರಾದೇಶಿಕ ಪಕ್ಷ ಈ ಬಾರಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವುದರಲ್ಲಿ ಸಂಶಯವಿಲ್ಲ, ಆದ್ದರಿಂದ ರಾಷ್ಟ್ರೀಯ ಪಕ್ಷಗಳಿಗೆ ನಿದ್ದೆಗೆಡಿಸಿದೆ, ಮೈಸೂರಿನಲ್ಲಿ ನಡೆದ ಪಂಚರತ್ನ ಯಾತ್ರೆ ಕಾರ್ಯಕ್ರಮಕ್ಕೆ ಆಗಮಿಸಿದ ರೈತ ಕುಟುಂಬದವರು ವ್ಯಕ್ತಪಡಿಸಿದ ಪ್ರೀತಿ ಎಂದಿಗೂ ಮರೆಯಲಾಗುವುದಿಲ್ಲ, ಅದರಂತೆ ಏ.6 ರಂದು ಎಚ್.ಡಿ ಕುಮಾರಸ್ವಾಮಿ ಅವರು ಪಿರಿಯಾಪಟ್ಟಣಕ್ಕೆ ಆಗಮಿಸಲಿದ್ದು, ತಾಲೂಕಿನಾದ್ಯಂತ ಪ್ರವಾಸವನ್ನು ಕೈಗೊಳ್ಳಲಿದ್ದಾರೆ, ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ರೈತ ಬಾಂಧವರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು
ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿ ಮಾತನಾಡಿ
ನಮ್ಮ ಪಕ್ಷಕ್ಕೆ ದೇವೇಗೌಡರೇ ಸ್ಪೂರ್ತಿ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಶಾಸಕ ಕೆ.ಮಹದೇವ್ ಹಾಗೂ ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ರವರು ಸಮಯ ವ್ಯರ್ಥ ಮಾಡದೆ ತಾಲ್ಲೂಕಿನ ಅಭಿವೃದ್ಧಿಗೆ ಹಗಲಿರುಳು ಎನ್ನದೆ ದುಡಿಯುತ್ತಿದ್ದಾರೆ, ತಾಲೂಕಿನಲ್ಲಿ ಸರಿಸುಮಾರು 1200 ಕೋಟಿ ಹೆಚ್ಚು ಅನುದಾನ ತಂದು ಅಭಿವೃದ್ಧಿ ಮಾಡಿರುವ ಅವರಿಗೆ ನಿಮ್ಮ ಮತವನ್ನು ಹಾಕಿ ಅವರನ್ನು ಮತ್ತೊಮ್ಮೆ ಜಯಶೀಲರನ್ನಾಗಿ ಮಾಡಬೇಕೆಂದು ಸಭೆಯಲ್ಲಿ ವಿನಂತಿಸಿಕೊಂಡರು
ಮೈಮಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಮಾತನಾಡಿ ಮಾಜಿ ಶಾಸಕರು ಹಾಗೂ ಅವರ ಮಗ ನಮ್ಮ ಮೇಲೆ ಇಲ್ಲಸಲ್ಲದ ಅಪಪ್ರಚಾರ ಮಾಡಿಕೊಂಡು ಓಡಾಡುತ್ತಿದ್ದಾರೆ, ನೀವು ಜನರಿಗೆ ಮಾಡಬೇಕೆಂದಿರುವ ಕೆಲಸಗಳನ್ನು ಜನರ ಮುಂದೆ ಇಟ್ಟು ಮತ ಕೇಳಿ ಅದು ಬಿಟ್ಟು ನನ್ನ ಹಾಗೂ ನಮ್ಮ ತಂದೆಯವರ ಜಪ ಮಾಡಬೇಡಿ, ತಾಲೂಕಿನಲ್ಲಿ ಶಾಸಕ ಕೆ ಮಹದೇವರವರು ಅಧಿಕಾರ ಸ್ವೀಕಾರ ಆದಾಗಿನಿಂದ ತಾಲೂಕಿನಾದ್ಯಂತ ಮೂಲಭೂತ ಸೌಕರ್ಯಗಳು ಕೊರತೆಯಾಗದಂತೆ ನೋಡಿಕೊಂಡಿದ್ದಾರೆ, ನಾವುಗಳು ಎಂದಿಗೂ ಶಾಸಕರಾಗುತ್ತೇವೆ ಎಂಬ ಕನಸು ಸಹ ಕಂಡಿರಲಿಲ್ಲ, ನಮಗೆ ಅವರು ಮಾಡಿದ ಅವಮಾನ, ಮೋಸಕ್ಕಾಗಿ ಸ್ವಾಭಿಮಾನದಿಂದ ಚುನಾವಣೆಗೆ ಸ್ಪರ್ಧಿಸಿ ಎರಡು ಬಾರಿ ಸೋಲು ಕಂಡರೂ ಮೂರನೇ ಬಾರಿ ನಮ್ಮ ತಂದೆಗೆ ಜಯ ತಂದುಕೊಡುವುದರಲ್ಲಿ ತಾಲೂಕಿನ ಜನತೆಯ ಪಾತ್ರ ಬಹುಮುಖ್ಯವಾತದ್ದು, ಆ ಕಾರಣಕ್ಕಾಗಿಯೇ ನಾನು ಮತ್ತು ನಮ್ಮ ತಂದೆ ತಾಲೂಕಿನ ಅಭಿವೃದ್ಧಿಗೆ ಜನರ ಸೇವೆ ಅಭಿವೃದ್ಧಿಗೋಸ್ಕರ ಹಗಲಿರುಳೆನ್ನದೆ ದುಡಿಯುತ್ತಿದ್ದೇವೆ, ಈ ಬಾರಿ ಮತ್ತೊಂದು ಅವಕಾಶ ಮಾಡಿಕೊಟ್ಟರೆ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಸಮುದಾಯದ ಮುಖಂಡರು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಸೇರ್ಪಡೆಗೊಂಡರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರೇಗೌಡ, ಮುಖಂಡರಾದ ಐಲಾಪುರ ರಾಮು, ಕೃಷ್ಣಪ್ಪ, ವಿದ್ಯಾಶಂಕರ್, ಮೋಹನ್, ಅಶೋಕ್ ಕುಮಾರ್, ಭುವನಹಳ್ಳಿ ಗಿರೀಶ್, ಬಸವರಾಜು, ಇಂದ್ರೇಶ್, ಹೇಮಂತ್ ಕುಮಾರ್, ರುದ್ರಮ್ಮ ನಾಗಯ್ಯ, ಶೇಖರ್, ಗಣೇಶ್, ಪುಟ್ಟಸ್ವಾಮಿ, ಸುಂದರೇಶ್, ರಾಮಣ್ಣ, ನಾಗರಾಜು, ರಾಮಕೃಷ್ಣಪ್ಪ, ಕರಿಗೌಡ, ಪಟೇಲ್ ನಟೇಶ್ ಚಂದ್ರಶೇಖರ್ ಇದ್ದರು.