(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.28: ಜೆಡಿಎಸ್ ಪಕ್ಷದ ಕಛೇರಿಯಲ್ಲಿ ನಗರ ಜೆಡಿಎಸ್ ಅಭ್ಯರ್ಥಿ ಅನಿಲ್ ಲಾಡ್ ರವರ ಅಧ್ಯಕ್ಷತೆಯಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನೆಡೆಯಿತು . ಸಭೆಯಲ್ಲಿ ಚುನಾವಣೆಯ ಮುಂದಿನ ರೂಪುರೇಷಗಳ ಬಗ್ಗೆ ಚರ್ಚಿಸಲಾಗಿ ಬೂತ್ ಮಟ್ಟದ ಕಾರ್ಯಕರ್ತರನ್ನು ಬೇಟಿಯಾಗಿ ಮನೆ ಮನೆಗೆ ತರಳಿ ಮತ ಪತ್ರ ಹಾಗೂ ಕರಪತ್ರಗಳನ್ನು ಹಂಚುವುದು ಹಾಗು ವಾರ್ಡಗಳಲ್ಲಿ ಮನೆ ಮನೆಗೆ ಬೇಟಿ ನೀಡಿ ಕುಮಾರ ಸ್ವಾಮಿಯವರ ಪಂಚರತ್ನ ಯೋಜನೆ ಬಗ್ಗೆ ಸಾರ್ವಜನಿಕರ ಗಮನಕ್ಕೆ ತರಲು ತಿಳಿಸಿದ್ದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷರು.ಹಾಜರಿದ್ದರು.ಸಬೆಯಲ್ಲಿ ಅನಿಲ್ ಲಾಡ್ ರವರು ಕಾರ್ಯಕರ್ತರ ಹಾಗು ಮಹಿಳಾ ಕಾರ್ಯಕರ್ತರ ಸಲಹೆಗಳನ್ನು ಪಡೆದರು ಈ ಸಭೆಯಲ್ಲಿ ಬಂಡೆಪ್ಪ, ರೋಷನ್ ಭಾಷ, ಕೆ, ವಾದಿರಾಜಶಟ್ಟಿ ಕೂರ್ಲಗುಂದಿ ಪಂಪಾಪತಿ, ಕೆ ಶ್ರೀನಿವಾಸರಾವ್ ಎಸ್ ಯಲ್ಲಪ್ಪ ವಕೀಲರು ಮುಕ್ಕಣ ಮದಿರೆ ವಿಜಯಕುಮಾರ್ ಪ್ರಸಾದ್ ಕ್ರಿಸ್ಟೋಫ್ರ್, ಎಲಿಷಾ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಗವಸೀಯ, ಶ್ರೀಮತಿ ಶಿವಕುಮಾರಿ ಶ್ರೀಮತಿ ರಾಮೇಶ್ವರಿ ಶ್ರೀಮತಿ ವಿಜಯಕುಮಾರಿ ಹಾಜರಿದ್ದರು.