ಜೆಡಿಎಸ್ ಕಾರ್ಯಕರ್ತರ ಸಭೆ

ದಾವಣಗೆರೆ. ಜ.೪; ನಗರದ ರೋಟರಿ ಬಾಲ ಭವನದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿತ್ತು.ಜಿಲ್ಲಾ ಕಾರ್ಮಿಕರ ವಿಭಾಗದ ಕಾರ್ಯದರ್ಶಿಗಳಾದ ಕೊರ್ಟ್ ಅಕ್ಬರ್ ರವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತವಿಕವಾಗಿ ಮಾತನಾಡಿದ ವಕೀಲರಾದ ಅನೀಸ್ ಪಾಶ ಜೆ.ಡಿ.ಎಸ್ ಪಕ್ಷದ ಮೂಲ ಕಾರ್ಯಕರ್ತರು ದಾವಣಗೆರೆ ಜಿಲ್ಲೆಯಲ್ಲಿ ಬಹಳ ಜನ ಇದ್ದು, ಪಕ್ಷದ ಸಂಘಟನೆಯ ಕೊರತೆಯಿಂದ ನಿಶ್ಕ್ರಿಯರಾಗಿದ್ದಾರೆ ಹಾಗಾಗಿ ಇನ್ನುಮುಂದೆ ನಿರಂತರವಾಗಿ ಜಿಲ್ಲೆಯಾದ್ಯಂತ ಪಕ್ಷದ ಕಾರ್ಯಕ್ರಮಗಳನ್ನು ಮೂಲ ಕಾರ್ಯಕರ್ತರನ್ನು ಸೇರಿಸಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಮಹಾ ಕಾರ್ಯದರ್ಶಿಗಳಾದ ಹೆಚ್.ಸಿ ಗುಡ್ಡಪ್ಪರವರು ಮಾತನಾಡಿ  ‌ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ .ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ಇದುವರೆಗೆ ನೀಡದಂತಹ ಆಡಳಿತವನ್ನು ಮಾಡಿರುತ್ತಾರೆ. ಪ್ರತಿಯೊಂದು ಕಾರ್ಯಕ್ರಮಗಳು ಪರಿಣಾಮಕಾರಿಯಾಗಿದ್ದವು  ಎಂದು ಹೇಳಿದರು. ಈ ಸಂದರ್ಭದಲದಲ್ಲಿ ಜಸ್ಟಿನ್ ಜೈಕುಮಾರ್ ಉತ್ತರ ಕ್ಷೇತ್ರದ ಸಂಗನಗೌಡ್ರು ಮಾಯಕೊಂಡದ ಕ್ಷೇತ್ರದ ಅಧ್ಯಕ್ಷರಾದ ಪಾಪಣ್ಣ ಶ್ರೀಧರ್ ಪಾಟೀಲ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ದಾದಪೀರ್ ರವರು ಸ್ವಾಗತಿಸಿದರು ಪ್ಯಾರುರವರು ಒಂದನಾರ್ಪಣೆ ಮಾಡಿದರು ಈ ಸಂದರ್ಭದಲ್ಲಿ ರಾಜಸಾಬ್, ಗೋಣಿವಾಡ ಮಂಜುನಾಥ್, ದಾದಪೀರ್ ಇನ್ನಿತರು ಉಪಸ್ಥಿತರಿದ್ದರು.