ಜೆಡಿಎಸ್ ಕಾರ್ಯಕರ್ತರು ಬಳೆ ತೊಟ್ಟಿಕೊಂಡಿಲ್ಲ: ಮಲ್ಲೇಶ್ ಕಿಡಿ

ಕೆ.ಆರ್.ಪೇಟೆ. ಜು.27:- ತಾಲ್ಲೂಕಿನಲ್ಲಿ ಜೆಡಿಎಸ್ ಕಾರ್ಯಕರ್ತರು ಬಳೆ ತೊಟ್ಟಿಕೊಂಡಿಲ್ಲ. ಹೆಚ್.ಟಿ.ಮಂಜು ಯಾರೆಂದು 7-8 ತಿಂಗಳಿನಲ್ಲಿಯೇ ತೋರಿಸುತ್ತೇವೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್ ಬಿಜೆಪಿ ನಾಯಕರುಗಳ ವಿರುದ್ದ ಕಿಡಿಕಾರಿದ್ದಾರೆ.
ಆವರು ಪಟ್ಟಣದ ಪ್ರವಾಸಿಮಂದಿರದಲ್ಲಿ ಹೆಚ್.ಟಿ.ಮಂಜು ಅಭಿಮಾನಿಗಳು ಏರ್ಪಡಿಸಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.
ಜೆಡಿಎಸ್ ಇತಿಹಾಸ ತಿಳಿದಿದ್ದೀರಿ:
ಜೆಡಿಎಸ್ ಪಕ್ಷವನ್ನು ಯಾರಿಂದಲೂ ಒಡೆಯಲು ಸಾಧ್ಯವಿಲ್ಲ ನಮ್ಮಲ್ಲಿ ಬಣಗಳಿರಬಹುದು ಆದರೆ ಅದು ತಾತ್ಕಾಲಿಕ. ಚುನಾವಣೆ ಬಂದಾಗ ನಾವೆಲ್ಲ ಒಗ್ಗಟ್ಟಾಗಿ ಎದುರಾಳಿಯನ್ನು ಧೂಳಿಪಟ ಮಾಡಿರುವುದಕ್ಕೆ 2013 ಮತ್ತು 2018 ಚಿನಾವಣೆಗಳೇ ಸಾಕ್ಷಿ. ಈ ಸತ್ಯವನ್ನು ಬಿಜೆಪಿ ನಾಯಕರುಗಳು ಅರಿತಕೊಳ್ಳಬೇಕು.
ಪ್ರಾಮಾಣಿಕ ಕಾರ್ಯಕರ್ತರಿಗೆ ದೇವೇಗೌಡರ ಬೆಂಬಲ:
ನಿಮ ಸೇಡಿನ ರಾಜಕಾರಣಕ್ಕೆ ನಮ್ಮ ಕ್ರಷರ್ ಬಲಿಯಾಗುತ್ತಿದ್ದುದನ್ನು ಗಮನಿಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕ್ರ?Àರ್‍ಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ ಲೀಗಲ್ ಒಪೀನಿಯನ್ ಪಡೆದ ನಂತರ ಪಕ್ಷದ ಒಬ್ಬ ಪ್ರಾಮಾಣಿಕ ಕಾರ್ಯಕರ್ತನಿಗೆ ಅನ್ಯಾಯವಾಗುತ್ತಿರುವುದನ್ನು ಕಂಡು ಇಲ್ಲಿಗೆ ಬರಬೇಕಾಯಿತು.
2023 ಕ್ಕೆ ಹೆಚ್.ಟಿ.ಮಂಜು ಯಾರೆಂದು ತೋರಿಸುತ್ತೇವೆ:
ನಿಮ್ಮ ನಾಯಕರ ಹಾಗೆ ಹಾಗೆ ಸುಳ್ಳು, ಸೇಡಿನ ರಾಜಕಾರಣ ಮಾಡಿಕೊಂಡು ತಿರುಗುತ್ತಿಲ್ಲ. ಮಂಜಣ್ಣನವರು ಬಡಜನರ ಮದ್ಯೆ ಇದ್ದು ಅವರ ಕಷ್ಟಸುಖಗಳಲ್ಲಿ ಭಾಗಿಯಾಗಿ ಅವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದಾರೆ.ಇದರಿಂದಾಗಿ ಅವರಿಗೆ ಸಿಗುತ್ತಿರುವ ಜನಬೆಂಬಲ ನೋಡಿ ನಿಮಗೆ ಉರಿಯುವಂತಾಗಿದೆಯಾ. 2023 ಕ್ಕೆ ನೋಡಿ ನಮ್ಮ ಪಕ್ಷದ ಕರಾಮತ್ತು ತೋರಿಸುತ್ತೇವೆ ಎಂದರು.
ನಿಮ್ಮಂಥಹ ಕೀಳು ರಾಜಕಾರಣ ಯಾರೂ ಮಾಡಿಲ್ಲ:
ಜೆಡಿಎಸ್ ಮುಖಂಡ ಅಗ್ರಹಾರಬಾಚಳ್ಳಿ ನಾಗೇಶ್ ಮಾತನಾಡಿ ದೇವೇಗೌಡರು ಇಲ್ಲದಿದ್ದರೆ ನಾರಾಯಣಗೌಡ ಎಲ್ಲಿರುತ್ತಿದ್ದರು ಎಂಬುದನ್ನು ಊಹಿಸಿಕೊಳ್ಳಿ. ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಿದರೆ ನಿಮ್ಮ ಬಾಯಿಗೆ ಹುಳ ಬೀಳುತ್ತವೆ. ಕೆ.ಆರ್,ಪೇಟೆಯಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ ತಾಲೂಕಿನಲ್ಲಿ ಯಾವ ರಸ್ತೆಯೂ ಸರಿಯಾಗಿಲ್ಲ. ಕೃ?À್ಣ, ಎಂ.ಕೆ.ಬೊಮ್ಮೇಗೌಡ ಎಸ್.ಎಂ.ಲಿಂಗಪ್ಪ ಎಲ್ಲರೂ ಈ ಹಿಂದೆ ರಾಜಕೀಯ ಮಾಡಿದ್ದಾರೆ ಆದರೆ ಅವರ್ಯಾರು ಈ ತರಹದ ಕೀಳು ಮಟ್ಟದ ರಾಜಕಾರಣವನ್ನು ಮಾಡಿಲ್ಲ ಎಲ್ಲಕ್ಕೂ ಜಿಎಸ್‍ಟಿ ಹಾಕಿ ರೈತರ ರಕ್ತ ಹೀರುತ್ತಿದ್ದೀರಿ. ನಾರಾಯಣಗೌಡರನ್ನು ಓಲೈಸಲು ರಾಜಕಾರಣ ಮಾಡಬೇಡಿ ಎಂದು ತಿಳಿಸಿದರು.
ಜೆಡಿಎಸ್ ಮುಖಂಡರಾದ ಬೇಲದಕೆರೆನಂಜಪ್ಪ, ಭೈರಾಪುರಹರೀಶ್, ಅಘಲಯನಂಜಪ್ಪ, ಮೋಹನ್, ಮುಂತಾದವರು ಮಾತನಾಡಿ ಪ್ರಾಮಾಣಿಕವಾಗಿ ರಾಜಕಾರಣ ಮಾಡುತ್ತಿರುವ ಎಚ್.ಟಿ.ಮಂಜು ವಿರುದ್ಧ ಮಾತನಾಡಿರುವ ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು. ಬಿಲ್ಲೇನಹಳ್ಳಿ ಮಂಜೇಗೌಡ ಒಬ್ಬ ಅಯೋಗ್ಯ ಹಾಲಿನ ಡೈರಿಯಲ್ಲಿ ರೈತರ ಹಣ ನುಂಗಿ ಮುಂಬೈಗೆ ಕದ್ದು ಹೋಗಿ ಅನೈತಿಕ ವ್ಯವಹಾರ ಮಾಡಿ ಸ್ವಲ್ಪ ಹಣ ಮಾಡಿಕೊಂಡು ಬಂದು ಈಗ ದೊಡ್ಡ ನಾಯಕನಂತೆ ವರ್ತಿಸುತ್ತಿರುವ ಇವನಿಗೆ ಜೆಡಿಎಸ್ ನಾಯಕರ ವಿರುದ್ಧ ಮಾತನಾಡುವ ಯಾವ ನೈತಿಕತೆ ಇದೆ. ಅಘಲಯ ಮಂಜು ಒಬ್ಬ ಗಂಜಿಗಿರಾಕಿ ನಾರಾಯಣಗೌಡರ ಬಳಿ ಪ್ರತಿನಿತ್ಯ ಕೂಲಿಗಾಗಿ ಇರುವವನು ನಮ್ಮ ನಾಯಕರ ಬಗ್ಗೆ ಮನಬಂದಂತೆ ಮಾತಾನಾಡಿದ್ದಾನೆ ಇವನಿಗೆ ಎಲ್ಲೂ ಗೌರವವಿಲ್ಲ ಎಂದರು.
ನಾವೂ ಚೆಡ್ಡಿ ಇಕ್ಕಿದ್ದೀವಿ:
ನಿಮ್ಮಂತೆ ನಾವು ಪ್ರತೀ ಚುನಾವಣೆಯ ಬಂದಾಗ ಭಿಕ್ಷಾಪಾತ್ರೆ ಹಿಡಿದು ಸಂಚರಿಸುವುದಿಲ್ಲ. ನಮ್ಮದು ನಿಷ್ಟಾವಂತರ ಪಕ್ಷ. ನಿಮ್ಮಂಥಹ ಸಾವಿರಾರು ಮಂದಿ ಹೋದರೂ ಜೆಡಿಎಸ್‍ಗೆ ಯಾವ ನಷ್ಟವೂ ಇಲ್ಲ. ನಾವೂ ಚಡ್ಡಿ ಇಕ್ಕಿದ್ದೀವಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಏನೆಂದು ತೋರಿಸುತ್ತೇವೆ. ಮಾತನಾಡುವಾಗ ಸ್ವಲ್ಪ ನಾಲಿಗೆ ಹಿಡಿದು ಮಾತನಾಡಿ ಇಲದಿದ್ದರೆ ಮುಂದಿನ ದಿನಗಳಲ್ಲಿ ಪ್ರತೀ ಹಂತದಲ್ಲಿಯೂ ನಿಮ್ಮ ವಿರುದ್ದ ಹೋರಾಟ ಮಾಡಬೇಕಾಗುತ್ತದೆ ಎಂದರು.