ಜೆಡಿಎಸ್, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ೧೨೦ಕ್ಕೂ ಹೆಚ್ಚು ಮುಖಂಡರು

ಅರಕೇರಾ,ಮಾ.೨೯- ದೇವದುರ್ಗ ವಿಧಾನ ಸಭಾ ಕ್ಷೇತ್ರದ ಮಲ್ಲೆದೇವರಗುಡ್ಡ ಮತ್ತು ಜಾ.ಜಾಡಲದಿನ್ನಿ, ಮಲ್ಲಿನಾಯಕನದೊಡ್ಡಿ ಗ್ರಾಮದ ೧೨೦ಕ್ಕೂ ಹೆಚ್ಚು ಯುವಕರು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷವನ್ನು ತೊರೆದು ಶಾಸಕರಾದ ಕೆ.ಶಿವನಗೌಡ ನಾಯಕ ಅವರ ನೇತೃತ್ವದಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು.
ಬುಧವಾರ ಪಟ್ಟಣದ ಶಾಸಕರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕ್ಷೇತ್ರದ ಮಲ್ಲೆದೇವರಗುಡ್ಡ ಗ್ರಾಮದ ೩೦ಕ್ಕೂ ಅಧಿಕ, ಜಾ.ಜಾಡಲದಿನ್ನಿ ಗ್ರಾಮದ ೬೦ಕ್ಕೂ, ಮಲ್ಲಿನಾಯಕನದೊಡ್ಡಿ ಗ್ರಾಮದ ಗ್ರಾಮದ ೩೦ಕ್ಕೂ ಹೆಚ್ಚು ಯುವಕರು ಬಿಜೆಪಿ ಸೇರಿದರು.
ಪಟ್ಟಣದ ಯುವ ಮುಖಂಡರಾದ ಕೆ.ಭಗವಂತ್ರಾಯ ನಾಯಕ, ವೀರೇಶ ನಾಯಕ ಮಲ್ಲೆದೇವರಗುಡ್ಡ, ಗ್ರಾಮ ಪಂಚಾಯತ ಅಧ್ಯಕ್ಷರಾದ ನಾಗರಾಜ ಜಾಡಲದಿನ್ನಿ , ವಿನೋದ ನಾಯಕ ಹಿರೇಬೂದೂರು, ರಂಗಪ್ಪ ಮಾಲಿ ಪಾಟೀಲ್, ಪಂಪ್ಣ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.
ಇದೇ ವೇಳೆ ಶಾಸಕರಾದ ಕೆ.ಶಿವನಗೌಡ ನಾಯಕ ಅವರು ಮಾತನಾಡಿ, ಅಭಿವೃದ್ಧಿಯ ಕಾಳಜಿ ಮತ್ತು ಪರಿಕಲ್ಪನೆ ಇದ್ದವರು ಬಿಜೆಪಿ ಸೇರ್ಪಡೆಯಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಸಹಕಾರಿಯಾಗಲಿದೆ. ಪಕ್ಷ ಸೇರ್ಪಡೆ ಮೂಲಕ ಬೆಂಬಲಿಸುವುದರಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಲು ಉತ್ಸಾಹ ಉಂಟಾಗುತ್ತದೆ. ನಮ್ಮ ಅಧಿಕಾರದ ಅವಧಿಯಲ್ಲಿ ಶಿಕ್ಷಣ, ಗ್ರಾಮೀಣಾಭಿವೃದ್ಧಿ, ವಸತಿ ಯೋಜನೆ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಕ್ಷೇತ್ರಕ್ಕೆ ತರುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ತಾಲೂಕಿನ ಪ್ರತಿ ಗ್ರಾಮ, ತಾಂಡ, ದೊಡ್ಡಿಗಳಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಬಸ್ ಸೌಕರ್ಯ, ರಸ್ತೆ, ಚರಂಡಿ, ವಿದ್ಯುತ್ ಪೂರೈಕೆ, ಕುಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ, ಸೇತುವೆ ನಿರ್ಮಾಣ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಮನಗಂಡು ಸಹಸ್ರ ಸಂಖ್ಯೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಬೆಂಬಲ ವ್ಯಕ್ತಪಡಿಸುತ್ತಿರುವುದು ಸಂತಸ ಮೂಡಿಸಿದೆ ಎಂದರು. ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬರು ಜವಾಬ್ದಾರಿಯುತವಾಗಿ ಕೆಲಸ ಮಾಡಿ ಪಕ್ಷದ ಗೆಲುವಿಗಾಗಿ ಶ್ರಮಿಸುವಂತೆ ತಿಳಿಸಿದರು.
ನೂತನವಾಗಿ ಸೇರ್ಪಡೆಗೊಂಡ ಕಾರ್ಯಕರ್ತರಿಗೆ ಶಾಸಕರಾದ ಕೆ.ಶಿವನಗೌಡ ನಾಯಕ ಅವರು ಭಾರತೀಯ ಜನತಾ ಪಕ್ಷದ ಶಾಲು ಹಾಕುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು.
ಯುವಕರಿಂದ ಸನ್ಮಾನ : ಇದೇ ವೇಳೆ ನೂತನವಾಗಿ ಸೇರ್ಪಡೆಯಾದ ದೇವದುರ್ಗ ಪಟ್ಟಣ ಮತ್ತು ಮಸರಕಲ್ ಗ್ರಾಮದ ಯುವಕರು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಕೆ.ಅನಂತರಾಜ ನಾಯಕ, ಬಿಜೆಪಿ ಮಂಡಲ ಅಧ್ಯಕ್ಷರಾದ ಕೆ.ಜಂಬಣ್ಣ ನಿಲೋಗಲ್, ಯುವ ಮುಖಂಡರಾದ ಕೆ.ಭವಂತರಾಯ ನಾಯಕ, ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರಾದ ವೀರೇಶ ನಾಯಕ ಮಲ್ಲೆದೇವರಗುಡ್ಡ, ಹನುಮಂತರಾಯ ಪೂಜಾರಿ, ಮುದುಕಯ್ಯ ನಾಗಿನಾಕಿ, ಮೌನೇಶ ಪೂಜಾರಿ, ಮಲ್ಲಯ್ಯ ಮೆಲಕಲ್, ಇವಪ್ಪ ನಾಗನಾಕಿ, ಸಾಹೇಬ್ ಗೌಡ ನಾಯಕ, ಯಂಕಪ್ಪ ಲೀಡರ್, ಚನ್ನಬಸ್ಸಪ್ಪ ಮಾಜಿ ಗ್ರಾ.ಪಂ ಸದಸ್ಯರು, ಬೂದೆಪ್ಪ ದೊರೆ, ನಿಂಗಪ್ಪ ಪುಸಲದೊಡ್ಡಿ, ರಂಗಣ್ಣ ದೊರೆ, ಲಕ್ಷ್ಮಣ,ಬಸವರಾಜ, ಹಂಪಯ್ಯ ನಾಯಕ, ಶಿವರಾಜ ಗುರಿಕಾರ, ಹನುಮಂತರಾಯ ಗ್ರಾ.ಪಂ ಸದಸ್ಯರು, ಹನುಮಂತರಾಯ ಗುರಿಕಾರ, ಶಿವಪ್ಪ ಗುರಿಕಾರ, ಪರಪ್ಪ ಪೂಜಾರಿ ಸೇರಿದಂತೆ ಅನೇಕರು ಇದ್ದರು.