
ಸಿಂಧನೂರು,ಏ.೧೮- ಮುಖಂಡರನ್ನು ಕಾಂಗ್ರೆಸ್ ತನ್ನ ಕಡೆ ಸೆಳೆದಿರಬಹುದು ಆದರೆ ಕಾರ್ಯಕರ್ತರೆ ನನಗೆ ಮುಖ್ಯ ನಿಜವಾದ ಪ್ರಮಾಣಿಕ ಕಾರ್ಯಕರ್ತರಿಂದ ನನ್ನ ಗೆಲವು ಸಾಧ್ಯ ಎಂದು ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ವೆಂಟರಾವ ನಾಡಗೌಡ ಹೇಳಿದರು.
ಶಾಸಕ ವೆಂಟರಾವ ನಾಡಗೌಡ ಭರ್ಜರಿ ರೋಡ ಶೋ ನಡೆಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ನಡೆಸಿ ಅಪಾರ ಬೆಂಬಲಿಗರ ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ಇಂದು ತಹಸೀಲ್ದಾರ ಕಛೇರಿಯಲ್ಲಿ ಚುನಾವಣೆಯ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ನಗರದ ಎಪಿಎಂಸಿ ಗಣೇಶ ಗುಡಿಯಿಂದ ಆರಂಭವಾದ ರೋಡ ಶೋ ಅಪಾರ ಸಂಖ್ಯೆಯ ಜನ ಸ್ಥೋಮದ ನಡುವೆ ನಗರದ ಪ್ರಮುಖ ವೃತ್ತಗಳಲ್ಲಿ ಭವ್ಯ ಮೆರವಣಿಗೆ ನಡೆಸಿ ಮಾತನಾಡಿದ ಅವರು ನಾನು ಮಾಡಿದ ಅಭಿವೃದ್ಧಿ ಕೆಲಸಗಳೆ ನನ್ನ ಗೆಲವು ಸಾಧ್ಯ ಎಂದರು.
ಪಕ್ಷದ ಮುಖಂಡರಾದ ಚಂದ್ರಶೇಖರ ಮೈಲಾರ ಸಿದ್ಧೇಶ್ವರ ಮರಳು ಮಠದ ಡಾ.ಸಿದ್ದಲಿಂಗಯ್ಯ ಸ್ವಾಮಿ, ಜಿ.ಎಸ್.ಎನ್ ಸತ್ಯ ನಾರಾಯಣ, ಭೀಮನಗೌಡ ವಕೀಲರು ಇದ್ದರು.
ಮಾಜಿ ಶಾಸಕ ಹಂಪನಗೌಡ ಬಾದರ್ಲಿ ತಮ್ಮ ಮನೆಯಿಂದ ಅಪಾರ ಬೆಂಬಲಿಗರ ಜೊತೆ ನಗರದಲ್ಲಿ ರೋಡ್ ಶೋ ನಡೆಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಯ ಅಧಿಕಾರಿಗಳಿಗೆ ತಮ್ಮ ನಾಮಪತ್ರ ಪತ್ರ ಸಲ್ಲಿಸಿ ಮಾತನಾಡಿದ ಅವರು ಡಬ್ಬಲ್ ಇಂಜನ್ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕೆಲಸಗಳುಯಾಗಿಲ್ಲ. ಇದರಿಂದ ಜನ ಬಿಜೆಪಿಯ ಪಕ್ಷವನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷದ ಕಡೆ ಬರುತ್ತಿದ್ದು ನಿಮ್ಮ ಅಮೂಲ್ಯವಾದ ಮತವನ್ನು ಹಾಕಿ ನನ್ನನ್ನು ಗೆಲ್ಲಿಸಬೇಕು ಎಂದು ಅವರು ಮತದಾರರಲ್ಲಿ ಮನವಿ ಮಾಡಿಕೊಂಡರು.
ಪಕ್ಷದ ಮುಖಂಡರಾದ ಎಂ.ಅಮರೇಗೌಡ ವಕೀಲರು, ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ, ಚಿಟ್ಟೂರು ಶ್ರೀನಿವಾಸ, ಜಾಫರ್ ಜಾಗೀರದ್ದಾರ್ ಸೇರಿದಂತೆ ಇತರರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಹಾಜರಿದ್ದರು ಯಾವುದೇ ಅಹಿತಕರ ಘಟನೆಯ ನಡೆಯದಂತೆ ಪೋಲಿಸರು ಸೂಕ್ತ ಬಂದೋಬಸ್ತ್ ಮಾಡಿದ್ದರು.