ಬಳ್ಳಾರಿ, ಅ.28ಜಿಲ್ಲಾ ಜನತಾ ದಳ (ಜಾ) ಪಕ್ಷದ ಕೇಂದ್ರ ಕಛೇರಿಯಲ್ಲಿ ಮಹರ್ಷಿ ವಾಲ್ಮೀಕಿಯವರ ಜನ್ಮದಿನಾಚರಣೆಯ ಅಂಗವಾಗಿ ಪೂಜೆಯ ಕಾರ್ಯಕ್ರಮ ಅದ್ದೂರಿಯಾಗಿ ಜಿಲ್ಲಾಧ್ಯಕ್ಷರಾದ ಪಿ.ಎಸ್. ಸೋಮನಲಿಂಗನಗೌಡು ನೆರೆವೇರಿಸಿದರು.
ಈ ಸಂದರ್ಭದಲ್ಲಿ ಎಸ್ ಪಸಾದ್, ಹೊನ್ನರುವಲ್ಲಿ, ವಾದಿರಾಜಶೆಟ್ಟಿ ಇವರುಗಳು ಮಾತನಾಡಿ, ಮಹರ್ಷೀ ವಾಲ್ಮೀಕಿಯವರ ಜನ್ಮದಿನಾಚರಣೆಯ ಶುಭಾಶಯಗಳನ್ನು ತಿಳಿಸಿದ್ದರು ಹಾಗೂ ಅವರ ಜೀವನ ಮತ್ತು ವಾಲ್ಮೀಕಿ ರಾಮಯಾಣದ…ಮಹತ್ವದ ಬಗ್ಗೆ ತಿಳಿಸಿದರು. ಮತ್ತು ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಪಿ.ಎಸ್. ಸೋಮನಲಿಂಗನಗೌಡು, ಮಾತನಾಡಿದರು.ಹಾಗೂ ಮಹರ್ಷಿ ವಾಲ್ಮೀಕಿಯವರ ಜನ್ಮದಿನಾಚರಣೆಯ ಮಹತ್ವದ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಕೆ ಶ್ರೀನಿವಾಸ್ ರಾವ್ ಮುಕ್ಕಣ್ಣ, ಶಿವನಾರಾಯಣ, ಹೊನ್ನುರುಸ್ವಾಮೀ, ಎಲೀಷ ವೇದಂ ನಾಯಕಂ ರಸೂಲ್ ಸಾಬ್ www ಶ್ರೀ ದೂಡ್ಡಬಸವ ಕಾರೆಗವಿಸಿದ್ದಪ್ಪ ಹಾಗೂ ಪಕ್ಷದ ಮಹಿಳೆಯರಾದ ಶ್ರೀಮತಿ ಗೌಸೀಯ ಎಸ್ ವಿಜಯಕುಮಾರಿ, ಶ್ರೀಮತಿ ರಾಮೇಶ್ವರಿ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಹಾಗು ಆನೇಕ ಕಾರ್ಯಕರ್ತರು ಹಾಜರಿದ್ದರು ವಂದನಾರ್ಪಣೆಯೊಂದಿಗೆ ಸಭೆ ಮುಕ್ತಾಯವಾಯಿತು. ನಂತರ ವಾಲ್ಮೀಕಿ ಭವನಕ್ಕೆ ತೆರಳಿ ಎಲ್ಲಾರು ಸೇರಿ ಶ್ರೀ ಮಹರ್ಷಿ ವಾಲ್ಮೀಕಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದರು.