ಜೆಡಿಎಸ್ ಕಛೇರಿಯಲ್ಲಿ ದೇವೆಗೌಡರ ಜನ್ಮದಿನಾಚರಣೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.18: ಜೆಡಿಎಸ್ ಪಕ್ಷದ  ಜಿಲ್ಲಾ ಕಛೇರಿಯಲ್ಲಿ  ಮಾಜಿ ಪ್ರಧಾನಿಗಳಾದ ಹೆಚ್.ಡಿ ದೇವೆಗೌಡ್ರ 91ನೇ ಜನ್ಮದಿನವನ್ನು ಆಚರಿಸಲಾಯಿತು.
ಜಿಲ್ಲಾಧ್ಯಕ್ಷರ ಅದ್ಯಕ್ಷತೆಯಲ್ಲಿ ಆನೇಕ ಹಿರಿಯ ಮುಖಂಡರುಗಳು ಮತ್ತು ಮಹಿಳಾ ಪದಾಧಿಕಾರಿಗಳು, ಕಾರ್ಯಕರ್ತರು, ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಅಧ್ಯಕ್ಷರು ಮಾತನಾಡಿ, ದೇವೆಗೌಡರವರ ಕೊಡುಗೆ ಮತ್ತು ಸೇವೆಯನ್ನು ಸ್ಮರಿಸಿದರು. ಕೊನೆಯಲ್ಲಿ ಜನರಿಗೆ ಹಣ್ಣು ಕಾಯಿ ವಿತರಿಸಲಾಯಿತು.