ಜೆಡಿಎಸ್ ಕಚೇರಿಯಲ್ಲಿ ಕನಕ ಜಯಂತಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.12: ನಗರದ ಜೆಡಿಎಸ್ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಕನಕ ಜಯಂತಿಯನ್ನು ನಿನ್ನೆ ಪಕ್ಷದ  ಜಿಲ್ಲಾಧ್ಯಕ್ಷ ಪಿ.ಎಸ್‌.ಸೋಮಲಿಂಗನಗೌಡ ಅವರು ಕ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಕನಕದಾಸರ ಭಾವಚಿತ್ರಕ್ಕೆ ಪುಷ್ಒ ನಮನ ಸಲ್ಲಿಸಿದ ಅವರು  ಕನಕದಾಸರ ವಿಚಾಧಾರೆಗಳನ್ನು ಜೀವನದಲ್ಲಿಅಳವಡಿಸಿಕೊಂಡು ಸಾಗುವುದು ಅವಶ್ಯ ಎಂದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೋಳದರಾಶಿ ತಿಮ್ಮಪ್ಪ ಅವರು ಮಾತನಾಡಿ, ಕನಕದಾಸರು ಕೀರ್ತನೆಗಳ ಮೂಲಕ ಮಾನವೀಯ ಮೌಲ್ಯ, ಸಾಮಾಜಿಕ ಚಿಂತನೆ, ಸಾಹಿತ್ಯ, ಸಂಸ್ಕೃತಿ, ಅನುಭಾವ ಕ್ಷೇತ್ರಕ್ಕೆ ಶಿಷ್ಟವಾದ ಕೊಡುಗೆಯನ್ನು ನೀಡಿದ್ದಾರೆ
ಕನಕದಾಸರ ಕೀರ್ತನೆಗಳು ಮಾನವನ ಸಮಾನತೆ, ಸತ್ವೀಕ ಜಿವನಕ್ಕೆ ತುಂಬ ಪರಿಣಾಮ ಬೀರುತ್ತವೆ. ಮೌಲ್ಯಧರಿತ ಸುಸಂಸ್ಕೃತ ನಾಗರಿಕರನ್ನಾಗಿ ನಿರ್ಮಾಣ ಮಾಡುವಲ್ಲಿ ಸಹಾಕಾರಿಯಾಗಿದೆ ಎಂದರು.
ಈ ಸಂಧರ್ಭದಲ್ಲಿ ಪಕ್ಷದ ಮುಖಂಡರುಗಳಾದ ವಾದಿರಾಜಶೆಟ್ಟಿ, ಪಂಪಾಪತಿ, ಹದ್ದಿಗೆರಿ ರಾಮಣ್ಣ, ರೋಶನ್ ಬಾಷ್, ರಾಜಶೇಖರ, ಮುಕ್ಕಣ್ಣ , ಗೌಸಿಯ. ಶಿವಕೂಮಾರಿ.ಕಮಲ ಪದ್ಮ ಮುಂತಾದವರು ಉಪಸ್ಥಿತರಿದ್ದರು