ಜೆಡಿಎಸ್ ಎಸ್ಸಿ ಯುವ ಘಟಕದ ಜಿಲ್ಲಾಧ್ಯಕ್ಷರಾಗಿ ಸುಧಾಕರ ಹೆಗಡೆ ನೇಮಕ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.25: ಜೆಡಿಎಸ್ ಪಕ್ಷದ ಎಸ್ಸಿ ಯುವ ಘಟಕಕ್ಕೆ ನೂತನ  ಜಿಲ್ಲಾಧಕ್ಷರನ್ನಾಗಿ ನಗರದ ಹೆಚ್.ಎಸ್.ಸುಧಾಕರ ಹೆಗಡೆ ಅವರನ್ನು ನೇಮಕ‌ಮಾಡಲಾಗಿದೆ
ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಎಸ್ಸಿ ಘಟಕದ ಅಧ್ಯಕ್ಷ ಮುಕ್ಜಣ್ ಅವರು  ನೇಮಕ‌ ಮಾಡಿದ  ಆದೇಶ ಪತ್ರವನ್ನು ರಾಜ್ಯ ಎಸ್ಸಿ ಘಟಕದ  ಕಾರ್ಯದರ್ಶಿ ಕೊರ್ಲಗುಂದಿ ಪಂಪಾಪತಿ ಇವರ ನೇತೃತ್ವದಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಸೋಮಲಿಂಗನಗೌಡ ವಿತರಿಸಿದ್ದಾರೆ.
ತಕ್ಷಣ ಈ ಜವಾಬ್ದಾರಿಯನ್ನು ವಹಿಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳು ಸೂಚಿಸಲಾಗಿದೆ.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಬಂಡೆಗೌಡ, ರಸೂಲ್ ಸಾಬ್, ಎಸ್.ಪ್ರಸಾದ್,  ಮಹಿಳಾ ಜಿಲ್ಲಾಧ್ಯಕ್ಷೆ ಡಾ. ವೈ ಗೌಸಿಯಾ ಬಿ, ಮತ್ತು ಗ್ರಾಮಾಂತ ಅಧ್ಯಕ್ಷ  ಹೂನ್ನರು ಸ್ವಾಮಿ, ಕೋರಿ ಆಂಜಿನಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಕೆ ದಿವಾಕರ್  ಹಾಗು ಗ್ರಾಮಾಂತರ ಎಸ್ಸಿ ಘಟಕದ ಅಧ್ಯಕ್ಷ, ಸಿ. ಧನುಂಜಯ, ಉಪಾಧ್ಯಕ್ಷರು ಹಾಗೂ ನಗರ 7ನೇ ವಾರ್ಡಿನ ಬಾಪೂಜಿ ನಗರದ ಅರ್,ಪುರುಷೋತಮ್ ,ಮುರುಳಿ ಕೃಷ್ಣ,  ಗಾದಿಲಿಂಗ ಆಭಿಶೇಕ್ ಮೊದಲಾದವರು ಉಪಸ್ಥಿತರಿದ್ದರು