ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ ಶಶಿಕುಮಾರ್ ಉಪಾಧ್ಯಕ್ಷರಾಗಿ ಯಲ್ಲಪ್ಪ

ಆನೇಕಲ್.ಏ.೨೩:ಅತ್ತಿಬೆಲೆಯಲ್ಲಿ ಆಯೋಜಿಸಿದ್ದ ಜೆಡಿಎಸ್ ಪಕ್ಷದ ಸಭೆಯಲ್ಲಿ ಜೆಡಿಎಸ್ ಪಕ್ಷದ ಎಸ್ಸಿ ಘಟಕದ ಆನೇಕಲ್ ತಾಲ್ಲೂಕು ಅಧ್ಯಕ್ಷರಾಗಿ ಶಶಿಕುಮಾರ್ ಮತ್ತು ಉಪಾದ್ಯಕ್ಷರಾಗಿ ಯಲ್ಲಪ್ಪ ಮತ್ತು ಸಂಘಟನಾ ಕಾರ್ಯದರ್ಶಿ ಮುನಿರಾಜು ರವರನ್ನು ನೂತನವಾಗಿ ನೇಮಕಮಾಡಲಾಗಿದೆ.
ಜವಬ್ದಾರಿ ಪತ್ರಗಳನ್ನು ವಿತರಣೆ ಮಾಡಿದ ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜಣ್ಣ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿ ಕೆ.ಪಿ.ರಾಜುರವರು.
ಸಭೆಯಲ್ಲಿ ಜೆಡಿಎಸ್ ಪಕ್ಷದ ಆನೇಕಲ್ ತಾಲ್ಲೂಕು ಅಧ್ಯಕ್ಷರಾದ ದೇವೇಗೌಡರು, ಯುವ ಘಟಕದ ಅಧ್ಯಕ್ಷರಾದ ವಿನಯ್ ರೆಡ್ಡಿ, ಜೆಡಿಎಸ್ ಮುಖಂಡರಾದ ಪಟಾಪಟ್ ರವಿ, ಚಂದಾಪುರ ಆನಂದ್, ಸಿಎಂ ಆರ್ ರವಿ, ಹರೀಶ್ ಗೌಡ, ಕೃಷ್ಣೇಗೌಡ, ಮಾದೇಶ್, ಗೋಪಿ, ಕನ್ನಡ ಸೋಮು, ಸಂಜಯ್ ಮತ್ತಿತರು ಹಾಜರಿದ್ದರು.