ಜೆಡಿಎಸ್ ಅಭ್ಯರ್ಥಿ ಸಿದ್ದು ಬಂಡಿಗೆ ಬಿ, ಫಾರಂ ವಿತರಿಸಿದ ಹೆಚ್‌ಡಿಕೆ

ಲಿಂಗಸುಗೂರು,ಏ.೧೪- ವಿಧಾನಸಭಾ ಕ್ಷೇತ್ರದ ಜಾತ್ಯಾತೀತ ಜನತಾ ಪಕ್ಷದ ಅಭ್ಯರ್ಥಿಯಾದ ಸಿದ್ದು ಬಂಡಿಯವರಿಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರು ಬೆಂಗಳೂರಿನಲ್ಲಿ ಬೆಳಿಗ್ಗೆ ಬಿ ಫಾರಂ ವಿತರಣೆ ಮಾಡಿದರು.
ಲಿಂಗಸುಗೂರು ತಾಲೂಕಿನ ಜೆಡಿಎಸ್ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೆಚ್ಚಿನ ಮತಗಳಿಂದ ಗೆಲುವು ಸಾಧಿಸು ಎಂದು ಜೆಡಿಎಸ್ ಅಭ್ಯರ್ಥಿ ಸಿದ್ದು ಬಂಡಿ ರವರಿಗೆ ಕುಮಾರಸ್ವಾಮಿ ಆಶೀರ್ವಾದ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲೂಕಾಧ್ಯಕ್ಷ ಬಸವರಾಜ ಮಾಕಾಪೂರು ಉಪಸ್ಥಿತರಿದ್ದರು.