ಜೆಡಿಎಸ್ ಅಭ್ಯರ್ಥಿ ನೇಮಿರಾಜ್ ನಾಯ್ಕ್ ನಾಮಪತ್ರ


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಏ.20 ಪಟ್ಟಣದ ಗಾಳೆಮ್ಮ ಗುಡಿ ದೇವಸ್ಥಾನದಿಂದ ಬೃಹತ್ ಮೆರವಣಿಗೆಯೊಂದಿಗೆ ಸಾವಿರಾರು ಕಾರ್ಯಕರ್ತರೊಂದಿಗೆ   ಜೆಡಿಎಸ್ ಅಭ್ಯರ್ಥಿ ನೇಮಿರಾಜ್ ನಾಯ್ಕ್ ನಾಮಪತ್ರ ಸಲ್ಲಿಸಿದರು.
 ಮೆರವಣಿಗೆಯಲ್ಲಿ ಸ್ವಯಂಕೃತವಾಗಿ ಸಾವಿರಾರು ಅಭಿಮಾನಿಗಳು ಭಾಗವಹಿಸುವ ಮೂಲಕನಮ್ಮ ಬೆಂಬಲ ಸೂಚಿಸಿದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯಿಂದ ಹೊರಬಂದು ಜೆಡಿಎಸ್ ಪಕ್ಷದ ಬಿ ಫಾರಂ ಪಡೆಯುವ ಮೂಲಕ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಕ್ಷೇತ್ರದಲ್ಲಿ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ.
 ಎರಡು ಬಾರಿ ಚುನಾವಣೆಯಲ್ಲಿ ಸೋತಿರುವ ನೇಮಿರಾಜ್ ನಾಯ್ಕೆಗೆ ಈ ಬಾರಿ ಅನುಕಂಪದ ಅಲೆ ಎದ್ದು ಕಾಣುತ್ತದೆ. ಬಿಜೆಪಿ ಟಿಕೆಟ್ ವಂಚಿತರಾದ ಸಂದರ್ಭದಲ್ಲಿ ಅವರ ಪತ್ನಿ ವಾಣಿ ಕಣ್ಣೀರಿಡುತ್ತಾ ಅಭಿಮಾನಿಗಳಲ್ಲಿ ಸೆರಗೊಡ್ಡಿ ಮತಯಾಚಿಸಿದ್ದು ಅಭಿಮಾನಿಗಳ ಮನ ಕರಗಿಸುವಂತಿತ್ತು. ಈ ಚುನಾವಣೆ ಭಾರಿ ಜಿದ್ದಾಜಿದ್ದಿನಿಂದ ಕೂಡಿದ್ದು. ಮತದಾರರ ತೀರ್ಪು ಅಂತಿಮವಾಗಿರುತ್ತದೆ