ಜೆಡಿಎಸ್ ಅಭ್ಯರ್ಥಿ ಅನಿಲ್ ಲಾಡ್ ಪ್ರಚಾರ ಶುರು


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.24: ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅನಿಲ್ ಹೆಚ್. ಲಾಡ್ ಅವರು  ನಗರದಲ್ಲಿ ಮತಯಾಚನೆ ಆರಂಭಿಸಿದ್ದಾರೆ.
ನಗರದ  ಎಪಿಎಂಸಿ ಮಾರ್ಕಟ್‍ನಲ್ಲಿ  ಇಂದು‌ ಬೆಳಿಗ್ಗೆ ಹಮಾಲರು ಮತ್ತು ಕಾರ್ಮಿಕರ ಸಭೆಕರೆದು, ಅವರ ಕುಂದು ಕೂರತೆಗಳನ್ನು ವಿಚಾರಿಸಿದರು. ತಾವು ಶಾಸಕರಾಗಿದ್ದಾಗ ಹಮಾಲರಿಗೆ ನಿವೇಶನ ಮತ್ತು ನೀಡುವ ಕಾರಗಯ ಮಾಡಿದ್ದನ್ನು ಸ್ಮರಿಸಿ.  ನನಗೆ ರಾಜಕೀಯದಿಂದ ಹಣ ಮಾಡುವ ಅವಶ್ಯಕತೆ ಇಲ್ಲ. ಜನಸೇವೆಯೇ ಮುಖ್ಯವಾಗಿದೆ. ನಿಮ್ಮ ಸಂಕಷ್ಟಗಳಿಗೆ ಸ್ಪಂದಿಸುವೆ. ಈ ಬಾರಿ ಜೆಡಿಎಸ್ ನಿಂದ ಸ್ಪರ್ಧೆ ಮಾಡಿದ್ದು. ಕುಮಾರಣ್ಣನನ್ನು ಅಧಿಕಾರಕ್ಕೆ ತರಲು ಭತ್ತದ ಹುಲ್ಲಿನ ಹೊರೆ ಹೊತ್ತ ಮಹಿಳೆ ಗುರ್ತಿಗೆ ಮತ ನೀಡಿ ಎಂದು ಕೋರಿದರು.
ನಂತರ ಪ್ರತಿ ಮಳಿಗೆಗೆ ಭೇಟಿ  ನೀಡಿ   ಜೆಡಿಎಸ್ ಪಕ್ಷ ಗೆಲ್ಲಿಸಲು ಮನವಿ ಮಾಡಿದರು. ಪಕ್ಷದ ಜಿಲ್ಲಾ ಅಧ್ಯಕ್ಷ ಪಿ.ಎಸ್.ಸೋಮಲಿಂಗನಗೌಡ ಮೊದಲಾದವರು ಜೊತೆಗಿದ್ದರು.  ಲಾಡ್ ಬಂದಿದ್ದನ್ನು ಕಂಡು ಹಲವರು 2008 ರ ಚುನಾವಣೆಯನ್ನು ಸ್ಮರಿಸಿದರು.