ಜೆಡಿಎಸ್ ಅಭ್ಯರ್ಥಿಗೆ ಮತ ನೀಡಿ ಜಯಶೀಲರನ್ನಾಗಿ ಮಾಡಿ

ಹನೂರು:ಮಾ:25: ಪಟ್ಟಣ ಪಂಚಾಯಿತಿ ವ್ಯಾಪ್ತಿಯ 2ನೇ ವಾರ್ಡ್‍ಗೆ ಚುನಾವಣೆ ನಡೆಯುವ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಉಪಾ ಧ್ಯಕ್ಷರು ಹಾಗೂ ಜಿಲ್ಲಾ ಅಧ್ಯಕ್ಷರಾದ ಎಂ.ಆರ್.ಮಂಜುನಾಥ್ ಜೆಡಿಎಸ್ ಅಭ್ಯರ್ಥಿ ಸ್ವಾಮಿ ಪರ ಬಿರುಸಿನ ಮತಯಾಚನೆಯನ್ನು ನಡೆಸಿದರು.
ಪಟ್ಟಣದ 2ನೇ ವಾರ್ಡ್‍ನ ಬೀದಿ ಬೀದಿಗಳಲ್ಲಿ ಸಂಚರಿಸಿದ ಎಂ.ಆರ್.ಮಂಜುನಾಥ್ ಪಟ್ಟಣದ ಅಬಿವೃದ್ಧಿಗೆ ಪೂರಕವಾಗಿ ಜೆಡಿಎಸ್ ಅಭ್ಯರ್ಥಿಗೆ ಮತ ನೀಡಿ ಜಯಶೀಲರನ್ನಾಗಿ ಮಾಡಿ, ಈಗಾಗಲೇ ಪ.ಪಂ.13 ವಾರ್ಡ್‍ಗಳ ಪೈಕಿ 6 ಅಭ್ಯರ್ಥಿಗಳು ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಈ ಒಂದು ಸ್ಥಾನವನ್ನು ಗಳಿಸಿದರೆ ಜೆಡಿಎಸ್ ಪಕ್ಷ ಇನ್ನಷ್ಟು ಬಲಿಷ್ಠವಾಗುತ್ತದೆ. ನನ್ನ ಚುನಾವಣೆಯಲ್ಲಿ ಬೆಂಬಲ ನೀಡಿದಂತೆ ಜೆಡಿಎಸ್ ಅಭ್ಯರ್ಥಿ ಸ್ವಾಮಿಯನ್ನು ಬೆಂಬಲಿಸಿ ಆರ್ಶಿವದಿಸಿ ಎಂದ ಅವರು ಮುಂದಿನ ದಿನಗಳಲ್ಲಿ ಪ.ಪಂ. ವತಿಯಿಂದ ವಸತಿ, ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಒತ್ತನ್ನು ನೀಡಲಾಗುವುದು ಎಂದರು.
ಆರತಿ ಎತ್ತಿ ಸ್ವಾಗತಿಸಿದ ಮಹಿಳೆಯರು: ಪ.ಪಂ. ವ್ಯಾಪ್ತಿಯ ವಾರ್ಡ್‍ಗಳಲ್ಲಿ ತಮ್ಮದೇ ಆದ ಅಭಿಮಾನಿಗಳು ಹಾಗೂ ಕಾರ್ಯಕರ್ತರನ್ನು ಹೊಂದಿರುವ ಆರ್.ಮಂಜುನಾಥ್ ಅವರು ಎರಡನೇ ವಾರ್ಡ್‍ನ ಜೆಡಿಎಸ್ ಅಭ್ಯರ್ಥಿ ಸ್ವಾಮಿ ಪರ ಮತಯಾಚನೆಗೆ ತೆರಳಿದ ವೇಳೆ ಇಲ್ಲಿನ ಮಹಿಳೆಯರು ಪ್ರತಿ ಬೀದಿಯಲ್ಲೂ ಆರತಿ ಎತ್ತಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ಈ ವೇಳೆ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂ ಡರುಗಳು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮಂಜುನಾಥ್ ಪರ ಜಯ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಉಪಾಧ್ಯಕ್ಷ ಶಿವಮೂರ್ತಿ, ಪ.ಪಂ.ಸದಸ್ಯರಾದ ಮುಮತಾಜ್‍ಬಾನು, ಆನಂದ್‍ಕುಮಾರ್, ಮಹೇಶ್‍ನಾಯಕ, ಮಹೇಶ್ ಪಿ.ಜಿ.ಪಾಳ್ಯ ಗ್ರಾ.ಪಂ.ಅಧ್ಯಕ್ಷ ಪರಿಸರ ಪ್ರೇಮಿ ಕೃಷ್ಣಮೂರ್ತಿ, ಮುಖಂಡರುಗಳಾದ ಮುಳ್ಳೂರು ಶಿವಮಲ್ಲು, ಮಂಜೇಶ್, ಸತೀಶ್, ಕಿರಣ್, ಗೋವಿಂದ, ವೆಂಕಟೇಶ್, ಅಮೀನ್, ಜೆಡಿಎಸ್ ಮುಖಂಡರುಗಳು ಮತ್ತು ಕಾರ್ಯಕರ್ತರು ಇದ್ದರು.