
ಚಾಮರಾಜನಗರ, ಮಾ.18:- ಜೆಡಿಎಸ್ ಅಪ್ಪಮಕ್ಕಳ ಪಕ್ಷವಾಗಿದ್ದು, ಕಾಂಗ್ರೆಸ್ ತಾಯಿ ಮಗನ ಪಕ್ಷವಾಗಿದ್ದರೆÉ ಬಿಜೆಪಿ ಪಕ್ಷ ಮಾತ್ರ ಜನರ ಪಕ್ಷ. ಇಲ್ಲಿ ಸಾಮಾನ್ಯ ಕಾರ್ಯಕರ್ತನು ಸಹ ಪ್ರಧಾನಿ, ಮುಖ್ಯಮಂತ್ರಿ, ರಾಷ್ಟ್ರಪತಿಗಳು ಸಾಧ್ಯವಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ವಿಪಕ್ಷಗಳ ವಿರುದ್ದ ವಾಗ್ದಾಳಿ ಮಾಡಿದರು.
ತಾಲೂಕಿನ ಸಂತೇಮರಳ್ಳಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ನಡೆದ ಬಿಜೆಪಿ ಮಹಿಳಾ ಮೋರ್ಚಾದ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾಮಾನ್ಯ ಕಾರ್ಯಕರ್ತರಾಗಿದ್ದ ನರೇದ್ರ ಮೋದಿ ಪ್ರಧಾನಿಯಾಗಿದ್ದಾರೆ. ಸಾಮಾನ್ಯ ಗಿರಿಜನ ಮಹಿಳೆ ದ್ರೌಪದಿ ಮರ್ಮ ಅವರು ಈ ದೇಶದ ರಾ?À್ಟ್ರಪತಿಯನ್ನಾಗಿ ಮಾಡಿರುವುದು ಜನರ ಪಕ್ಷವಾಗಿ ಬಿಜೆಪಿ ಎಂಬುವುದನ್ನು ತಾವೆಲ್ಲರು ಅರ್ಥ ಮಾಡಿಕೊಳ್ಳಬೇಕು ಎಂದರು.
ಡಬಲ್ ಇಂಜಿನ್ ಸರ್ಕಾರ ದೇಶದ ಅಭಿವೃದ್ದಿಗೆ ವಿಶಿಷ್ಟವಾದ ಕೊಡುಗೆಯನ್ನು ನೀಡುವ ಜೊತೆಗೆ ಮಹಿಳೆಯರ ಸಬಲೀಕರಣದಲ್ಲಿ ಹೆಚ್ಚಿನ ಒತ್ತು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೂರಧೃಷ್ಟಿದ ಆಡಳಿತ ಭಾರತ ದೇಶವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯುತ್ತಿದೆ. ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಹಾಗೂ ದೇಶದಲ್ಲಿ ನರೇಂದ್ರ ಮೋದಿ ಸರ್ಕಾರ ಮಹಿಳೆಯರ ಪರವಾಗಿ ಹಲವಾರು ಯೋಜನೆಗಳನ್ನು ತಂದಿದ್ದಾರೆ ಎಂದು ಬಣ್ಣಿಸಿದರು.
ಉಜ್ವಲ ಯೋಜನೆಯಡಿಯಲ್ಲಿ ಪ್ರತಿ ಬಡ ಕುಟುಂಬಕ್ಕೆ ಉಚಿತವಾಗಿ ಗ್ಯಾಸ್ ಸಿಲೆಂಡರ್ ವಿತರಣೆ ಮಾಡಿದೆ. ಇದರಿಂದ ಅಡುಗೆ ಮನೆಯಲ್ಲಿ ಕಟ್ಟಿಗೆಯಲ್ಲಿ ಒಲೆ ಊದಿ ಲಕ್ಷಾಂತರ ಮಹಿಳೆಯರು ಪ್ರತಿನಿತ್ಯ ನರಕ ಯಾತನೆ ಅನುಭವಿಸುತ್ತಿದ್ದರು. ಇದನ್ನು ತಪ್ಪಿಸಿದ್ದು ಮೋದಿ ಸರ್ಕಾರ, ಗ್ಯಾಸ್ ಅನಿಲ ದರ ಏರಿಕೆ ಎಂದು ಬೊಬ್ಬೆ ಹೊಡೆಯುತ್ತಿರುವ ಕಾಂಗ್ರೆಸ್ ನಾಯಕರು ಉಚಿತವಾಗಿ ಪ್ರಪಂಚದಲ್ಲೇ ಪ್ರಥಮವಾಗಿ ಕೋವಿಡ್‍ಗೆ ಲಸಿಕೆ ಹಾಕಿ, ಪ್ರಾಣ ಹಾನಿಯನ್ನು ತಪ್ಪಿಸಿದ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಟೀಕಿಸಿದರು.
ಸಮಾವೇಶವನ್ನು ಉದ್ಘಾಟಿಸಿದ ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಮಾತನಾಡಿ, ಸಂವಿಧಾನ ಜಾರಿಗೆ ಬಂದು 75 ವಷರ್Àದ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಕೇವಲ 24 ಲಕ್ಷ ಕುಟುಂಬಗಳಿಗೆ ಕುಡಿಯುವ ನೀರು ಒದಗಿಸಿತ್ತು ಆದರೆ ನರೇಂದ್ರ ಮೋದಿಜಿ ಸರ್ಕಾರ ಬಂದಮೇಲೆ 41 ಲಕ್ಷ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಕೊಟ್ಟ ಏಕೈಕ ಸರ್ಕಾರ ಬಿಜೆಪಿ ಸರ್ಕಾರ. ಅದೇ ರೀತಿ ಮನೆಮನೆಗೆ ಗಂಗಾ ಯೋಜನೆ ಜಾರಿಗೆ ತಂದ ಬಿಜೆಪಿ ಸರ್ಕಾರ, ಆದರೆ 75 ವ?ರ್À ಕಳೆದರು ಶುದ್ಧ ಕುಡಿಯುವ ನೀರು ತರುವ ಯೋಜನೆಗೆ ಯಾಕೆ ಕೈ ಹಾಕಲಿಲ್ಲ ಎಂದು ಕಾಂಗ್ರೆಸ್ ಆಡಳಿತ ವಿರುದ್ದ ವಾಗ್ದಾಳಿ ಮಾಡಿದರು.
ನಮ್ಮ ದೇಶದ ಪ್ರಜಾಪ್ರಭುತ್ವ ಬಗ್ಗೆ ಇನ್ನೊಂದು ದೇಶದಲ್ಲಿ ಕುಳಿತು ಮಾತನಾಡುವ ರಾಹುಲ್ ಗಾಂಧಿ ಬಗ್ಗೆ ಏನೂ ಹೇಳಬೇಕು. ಸಾರ್ವಜನಿಕರು ಅದಕ್ಕೆ ಉತ್ತರ ಮತದಾರರು ಕೊಡಬೇಕು ಹಾಗೂ 50 ಕೋಟಿ ಜನಸಂಖ್ಯೆ ಜನರಿಗೆ ಕೊರೊನ ಕಾಯಿಲೆಗೆ ವ್ಯಾಕ್ಷಿನ್ ನೀಡಿದ ಏಕೈಕ ಪ್ರಧಾನ ಮಂತ್ರಿ ಮೋದಿಜಿ ಹಾಗೂ ಮುಂಬರುವ ಬಜೆಟ್ ನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ನಮ್ಮ ಸರ್ಕಾರ ಮುಂದಾಗಿದೆ ಎಂದರು.
ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಮಲೆಯೂರು ಕಮಲಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿದ, ರಾಜ್ಯದ ನೆಲ ಜಲ ಸಂಪತ್ತು ಉಳಿಸುವ ನಿಟ್ಟಿನಲ್ಲಿ ಮೋದಿಜಿ ಅವರನ್ನು ಬೆಂಬಲಿಸಬೇಕಾಗಿದೆ. ನಾಡಿನ ಪ್ರತಿಯೊಬ್ಬ ಮಹಿಳೆಯರು ಬಿಜೆಪಿ ಸರ್ಕಾರ ಮಹಿಳೆಯರ ಸಬಲೀಕರಕ್ಕಾಗಿ ಜಾರಿ ಮಾಡಿರುವ ಯೋಜನೆಯನ್ನು ನೋಡಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಿ. ನಾರಾಯಣ ಪ್ರಸಾದ್, ರಾಜ್ಯ ಮಹಿಳಾ ಮೋಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ಮಹಿಳಾ ಮೋರ್ಚಾ ಪ್ರಭಾರಿ ಲಕ್ಷ್ಮಿ ಕಿರಣ್, ಮಾಜಿ ಶಾಸಕ ಪ್ರೊ.ಕೆ.ಅರ್. ಮಲ್ಲಿಕಾರ್ಜುನಪ್ಪ, ಕಾಡಾ ಅಧ್ಯಕ್ಷ ಜಿ. ನಿಜಗುಣರಾಜು, ಸಂಚಾಲಕರಾದ ಪಿ. ವೃಷಬೇಂದ್ರಪ್ಪ, ಸಹ ಸಂಚಾಲಕ ಟಗರಪುರ ರೇವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಶ್ರೀಪ್ರತಾಪ್, ಕೆ.ಎಸ್. ಮಹದೇವಸ್ವಾಮಿ, ರಾಜ್ಯ ಕಾರ್ಯಕಾರಣಿ ಸದಸ್ಯೆ ಜಯಶೀಲಾ ರಾಜಶೇಖರ್, ನಗರಸಭಾ ಅಧ್ಯಕ್ಷ ಆಶಾನಟರಾಜು, ಕಿನಕಹಳ್ಳಿ ರಾಚಯ್ಯ, ನೂರೊಂದು ಶೆಟ್ಟಿ, ಎಪಿಎಂಸಿ ಉಪಾಧ್ಯಕ್ಷೆ ಕಲಾವತಿ, ಜಿಲ್ಲಾ ಕಾರ್ಯದರ್ಶಿಗಳಾದ ರೇವಣ್ಣ, ಸರಸ್ವತಿ, ಪದ್ಮ, ಜಯಶ್ರೀ, ಜ್ಯೋತಿ, ಗೀತಾ, ಚಿನ್ನತಾಯಮ್ಮ, ನಾಗಮಣಿ ಹಾಗೂ ನಾಲ್ಕು ಮಂಡಲಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.