ಜೆಡಿಎಸ್ ಅಧ್ಯಕ್ಷ ಭಾಸ್ಕರ್‌ರಿಗೆ ಅಭಿನಂದನೆ

ವಿಜಯಪುರ.ಏ೧೯: ಕಳೆದ ೩ ವರ್ಷಗಳಿಂದ ಪುರಸಭೆಯಲ್ಲಿ ಪ್ರಜಾಪ್ರತಿನಿಧಿಗಳ ಆಡಳಿತ ಇಲ್ಲದಿದ್ದಾಗ್ಯೂ ಸಹ ಶಾಸಕರ ಸಹಕಾರದೊಂದಿಗೆ ಶಾಸಕರ ನಿಧಿಯಲ್ಲಿ ಪಟ್ಟಣದೆಲ್ಲೆಡೆ ರಸ್ತೆಗಳ ಡಾಂಭರೀಕರಣ, ಕಾಂಕ್ರೀಟೀಕರಣ, ಹಾಗೂ ಚರಂಡಿಗಳ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಮುಂತಾದವುಗಳನ್ನು ನಡೆಸಿಕೊಂಡು, ಬರುತ್ತಿರುವ ಟೌನ್ ಜೆ.ಡಿ.ಎಸ್ ಅಧ್ಯಕ್ಷ ಎಸ್.ಭಾಸ್ಕರ್, ಪಟ್ಟಣದ ಅಭಿವೃದ್ದಿಯ ಹರಿಕಾರರಾಗಿರುವರೆಂದು, ಈದ್ಗಾ ಮೊಹಲ್ಲಾದ ಫಜಲ್‌ರವರು ತಿಳಿಸಿದರು.
ಅವರು ಈದ್ಗಾ ಮೊಹಲ್ಲಾದಲ್ಲಿ ೨ ನೇ ವಾರ್ಡ್‌ನ ಮತದಾರರೊಂದಿಗೆ ಸೇರಿ, ಪುರಸಭೆಯ ೨ ನೇ ವಾರ್ಡ್‌ನ ಅಭ್ಯರ್ಥಿ ರಾಜೇಶ್ವರಿ ಎಸ್.ಭಾಸ್ಕರ್, ಹಾಗೂ ಭಾಸ್ಕರ್‌ರವರನ್ನು ಪುಷ್ಪ ವೃಷ್ಟಿ ಮಾಡುವ ಮೂಲಕ ಅಭಿನಂದಿಸಿ, ಮಾತನಾಡುತ್ತಿದ್ದರು.
ಪಟ್ಟಣದ ಯಾವುದೇ ಸಮಸ್ಯೆಗಳ ಬಗ್ಗೆಯೂ ಟೌನ್ ಜೆ.ಡಿ.ಎಸ್ ಅಧ್ಯಕ್ಷ ಭಾಸ್ಕರ್‌ರವರ ಬಳಿ ಹೋದಾಗ ಅವರನ್ನು ಶಾಸಕರ ಬಳಿ ಕರೆದೊಯ್ದು, ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದರೊಂದಿಗೆ ನೂರಾರು ಮಂದಿ ಕ್ಯಾನ್ಸರ್, ಕಿಡ್ನಿ ಸಮಸ್ಯೆ, ಹೃದ್ರೋಗ, ಮುಂತಾದ ತೀವ್ರ ರೋಗಗಳಿಂದ ಬಳಲುತ್ತಿದ್ದವರಿಗೆ ಶಸ್ತ್ರ ಚಿಕಿತ್ಸೆ ಮತ್ತಿತರೆ ಚಿಕಿತ್ಸಾ ವೆಚ್ಚಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಹಾಯ ಧನ ಕೊಡಿಸುತ್ತಿದ್ದರೆಂದು ತಿಳಿಸಿದರು.
ಖಾಜಲ್‌ರವರು ಮಾತನಾಡಿ, ಇದೀಗ ಪುರಸಭಾ ಚುನಾವಣೆ ಬಂದಿದ್ದು, ೨ ನೇ ವಾರ್ಡ್ ಸಾಮಾನ್ಯ ಮಹಿಳಾ ಮೀಸಲು, ಆಗಿದ್ದು, ಭಾಸ್ಕರ್‌ರವರ ಪತ್ನಿ ಪದವೀಧರೆಯಾದ ರಾಜೇಶ್ವರಿರವರು ಸ್ಪರ್ಧಿಸುತ್ತಿದ್ದು, ಅವರ ಗೆಲುವಿಗೆ ಎಲ್ಲಾ ಮತದಾರರು ಜಾತಿ, ಮತ, ಬೇಧ ತೊರೆದು, ಮತ ನೀಡಬೇಕೆಂದು, ತಿಳಿಸಿದರು.
ಈದ್ಗಾ ಮೊಹಲ್ಲಾ ನಿವಾಸಿಗಳಾದ ಬಾಬಾಜಾನ್, ಜಮೀರ್, ಜಾಮೀರ್, ಮೌಲಾ, ಇನಾಯತ್, ಮತ್ತಿತರರು ಉಪಸ್ಥಿತರಿದ್ದರು.