
ಸಿಂಧನೂರು,ಏ.೦೧- ಶಾಸಕ ವೆಂಟರಾವ ನಾಡಗೌಡ ಗಾಂಧಿನಗರ ಶಿವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಪಕ್ಷದ. ಚುನಾವಣೆಯ ಪ್ರಚಾರ ಕ್ಕೆ ಇಂದು ಅಧಿಕೃತ ವಾಗಿ ಚಾಲನೆ ನೀಡಿದರು.
ತಾಲ್ಲೂಕಿನಲ್ಲಿ ೨೦೨೩ ರ ಚುನಾವಣೆ ಕಾವು ರಂಗೆರುತ್ತಿದ್ದು ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಮಾಡಿಲ್ಲ. ಆದರೆ ಜೆಡಿಎಸ್ ಅಭ್ಯರ್ಥಿಯಾದ ಶಾಸಕ ವೆಂಟರಾವ ನಾಡಗೌಡ ಇಂದು ತಾಲ್ಲೂಕಿನ ಗಾಂಧಿನಗರ ಶಿವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಪಕ್ಷದ ಚುನಾವಣೆಯ ಪ್ರಚಾರಕ್ಕೆ ಜೆಡಿಎಸ್ ಅಭ್ಯರ್ಥಿಯಾದ ವೆಂಟರಾವ ನಾಡಗೌಡ ಅಧಿಕೃತ ವಾಗಿ ಚಾಲನೆ ಪ್ರಚಾರ ನಡೆಸಿದರು.
ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಶಿವಾಲಯದಲ್ಲಿ ಸೇರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಅಲ್ಲಿಂದ ಚುನಾವಣೆಯ ಅಬ್ಬರದ ಪ್ರಚಾರ ನಡೆಸಿದರು ನಾನು ಐದು ವರ್ಷದಲ್ಲಿ ಜನರ ನಿರೀಕ್ಷೆಯ ಮೀರಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ನನ್ನ ಅಭಿವೃದ್ಧಿ ಕೆಲಸ ನೋಡಿ ಈ ಸಲ ಚುನಾವಣೆಯಲ್ಲಿ ನನಗೆ ಮತ ನೀಡಿ ಜನ ಗೆಲ್ಲಿಸಿ ಬೇಕು ಮತದಾರರಲ್ಲಿ ನಾಡಗೌಡರು ಮನವಿ ಮಾಡಿಕೊಂಡರು.
ಜಿ.ಸತ್ಯನಾರಾಯಣ, ಅಶೋಕ ಗೌಡ, ಬಿ.ಶ್ರೀ ಹರ್ಷ, ಸಂಗಮೇಶ್ವರನಾಡಗೌಡ, ನಾಗೇಶ ಹಂಚಿನಾಳ ಕ್ಯಾಂಪ್, ವೆಂಕಟೇಶ ನಂಜಲದಿನ್ನಿ, ಗಂಗಾಧರ ಗೌಡ, ಆಯನೂರು ಈರನಗೌಡ, ಚಿನ್ನಿ, ಶಿವನಗೌಡ ಗೋರೆಬಾಳ, ರಾಮರಾವ್, ಹರಿಕೀಶೊರ ರೆಡ್ಡಿ ಅಲ್ಲಮ, ಪ್ರಭು ಪೂಜಾರ ಸೇರಿದಂತೆ ಇತರರು ಇದ್ದರು.