
ದಾವಣಗೆರೆ.ಏ.೨೩; ಕಾಂಗ್ರೆಸ್ ಅಧಿಕಾರದಿಂದ ಬೇಸತ್ತಿದ್ದ ರಾಜ್ಯದ ಜನತೆ ಬಿಜೆಪಿ ಪಕ್ಷವನ್ನು ಆಯ್ಕೆಮಾಡಿದರು. ಆದರೆ, ಬಿಜೆಪಿ ಪಕ್ಷದ ಆಡಳಿತ ವೈಖರಿ ಕಂಡು ರೋಸಿಹೋಗಿದ್ದು ಈಗಾಗಲೆ ಜನರು ಹೊಸ ಬದಲಾವಣೆಗಾಗಿ ಕಾಯುತ್ತಿದ್ದಾರೆ. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮಾಜಿ ಶಾಸಕ, ಹರಿಹರ ಜೆಡಿಎಸ್ ಅಭ್ಯರ್ಥಿ ಎಚ್. ಎಸ್ ಶಿವಶಂಕರ್ ವಿಶ್ವಾಸ ವ್ಯಕ್ತಪಡಿಸಿದರು. ತಮ್ಮ ಗೃಹ ಕಚೇರಿಯಲ್ಲಿ ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ವಿಶೇಷ ಚೇತನರಿಗೆ ಮತ್ತು ವಿಧವೆಯರಿಗೆ ೨೫೦೦ ಮಾಸಿಕ ಪಿಂಚಣಿ, ಶಾಲಾ ಮಕ್ಕಳಿಗೆ ಸೈಕಲ್ ವಿಚಾರಣೆ, ರೈತರಿಗೆ ೨೪ ಗಂಟೆ ವಿದ್ಯುತ್, ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ ೫ ಗ್ಯಾಸ್ ಸಿಲೆಂಡರ್ ಉಚಿತ, ಮಹಿಳಾ ಸಂಘಗಳ ಸಾಲ ಮನ್ನಾ, ವೃದ್ಧರಿಗೆ ಐದು ಸಾವಿರ ಮಾಸಿಕ ಪಿಂಚಣಿ ಹೀಗೆ ಅನೇಕ ಜನಪರ ಮತ್ತು ರೈತ ಪರ ಘೋಷಣೆಗಳನ್ನು ಹೊರಡಿಸಿದ್ದು, ಪಕ್ಷದ ಕಾರ್ಯಕರ್ತರು ಇದನ್ನು ಜನಾರಿಗೆ ತಿಳಿಸಬೇಕೆಂದು ಅವರು ಹೇಳಿದರು.ಉತ್ತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಾತಿ ಶಂಕರ್ ಮಾತನಾಡಿ, ಹೆಚ್.ಡಿ. ಕುಮಾರಸ್ವಾಮಿಯವರ ಕನಸಿನ ಕೂಸಾದ ಪಂಚತಂತ್ರ ಯೋಜನೆಗಳನ್ನು ಪ್ರತಿ ಮನೆಮನೆಗೂ ತಲುಪಿಸುವಲ್ಲಿ ಕಾರ್ಯಕರ್ತರು ನಿಗ ವಹಿಸಬೇಕೆಂದು ಕರೆ ಕೊಟ್ಟರು.ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿಯ ಬಲಿಷ್ಠ ಅಭ್ಯರ್ಥಿಗಳ ನಡುವೆ ಸಾಮಾನ್ಯ ಯುವ ಕಾರ್ಯಕರ್ತರನ್ನು ಗುರುತಿಸಿ, ಚುನಾವಣಾ ಕಣಕ್ಕೆ ಇಳಿಸಿರುವುದು ಜೆಡಿಎಸ್ ಪಕ್ಷದ ಕಳಕಳಿ ತೋರಿಸುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ ಮಾತನಾಡಿ, ೧೪ ತಿಂಗಳ ಆಡಳಿತದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ೨೫,೦೦೦ ಕೋಟಿ ಸಾಲ ಮನ್ನಾ ಮಾಡಿರುವುದನ್ನು ನಮ್ಮ ರಾಜ್ಯದ ರೈತರು ಇಂದಿಗೂ ನೆನೆಯುವಂತೆ ಮಾಡಿದೆ. ರೈತರು, ಕುಮಾರಸ್ವಾಮಿ ಅವರ ಋಣವನ್ನು ಮತ ಹಾಕುವುದರ ಮೂಲಕ ತೀರಿಸಲಿಕ್ಕೆ ಕಾಯುತ್ತಿದ್ದಾರೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕಾರ್ಯದರ್ಶಿರಾದ ಗಣೇಶ ದಾಸಕರಿಯಪ್ಪ, ಕಡತಿ ಅಂಜನಪ್ಪ, ಸೈಯದ್ ಫಕ್ರುದ್ದೀನ್ ದೊಡ್ಮನೆ, ಹುಲುಮನೆ ಕಿರಣ್, ಶೀಲಾ ಕುಮಾರಿ, ರೇಖಾ ಸಿಂಗ್, ಗಾಯತ್ರಿ ಹಾಲೇಶ್, ಸುಧಾ ಗೌಡ, ಹೊನ್ನಮ್ಮ, ಮೊಹಮ್ಮದ್, ವೀರೇಶ್ ದೇವರಟ್ಟಿ, ಪ್ರಕಾಶ್, ಶ್ರೀಕಾಂತ್, ಮಧು ನಾಗರಕಟ್ಟೆ, ವಿಶ್ವನಾಥ, ಯುವ ಘಟಕದ ಶ್ರೀನಿವಾಸ್, ಬಾತಿ ಶ್ರೀನಿವಾಸ್, ತಾಂಡ ಚೇತನ್, ಕುರ್ಕಿ ವಿರೂಪಾಕ್ಷಪ್ಪ, ವಕೀಲ ಯೋಗೀಶ್ ಮತ್ತಿತರರಿದ್ದರು.