ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರಿಗೆ ನಿರಂತರ ೨೪ ಗಂಟೆ ವಿದ್ಯುತ್ ; ಹೆಚ್ ಆನಂದಪ್ಪ ಭರವಸೆ

ದಾವಣಗೆರೆ. ಮೇ.೧; ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ರೈತರಿಗೆ ನಿರಂತರ ೨೪ ಗಂಟೆ ವಿದ್ಯುತ್ ನೀಡಲಾಗುವುದು ಎಂದು ಮಾಯಕೊಂಡ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಆನಂದಪ್ಪ ಭರವಸೆ ನೀಡಿದರು.ಮಾಯಕೊಂಡ ಕ್ಷೇತ್ರ ವ್ಯಾಪ್ತಿಯಲ್ಲಿ ಮನೆಮನೆಗೆ ತೆರಳಿ ಪ್ರಚಾರ ಕಾರ್ಯ ನಡೆಸಿದ ಅವರು ಜೆಡಿಎಸ್ ಪಕ್ಷದ ಭರವಸೆಗಳನ್ನು ಜನರಿಗೆ ತಿಳಿಸಿದರು.ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ  ಸ್ತ್ರೀ ಶಕ್ತಿ ಸಂಘದ ಸಾಲ ಮನ್ನಾ ಮಾಡಲಾಗುವುದು,ವೃದ್ಧಾಪ್ಯವೇತನ ೫೦೦೦ ರೂಗೆ ಏರಿಕೆ,ಆಟೋಚಾಲಕರಿಗೆ ೨ ಸಾವಿರ,ರೈತರಿಗೆ ಎಕರೆಗೆ ೧೦ ಸಾವಿರ ಪ್ರೋತ್ಸಾಹ ಧನ,ಶಾಲಾಮಕ್ಕಳಿಗೆ ಸೈಕಲ್ ವಿತರಣೆ ಮರು ಪ್ರಾರಂಭ,ಯುವ ರೈತರ ವಿವಾಹ ಕಾರ್ಯಕ್ಕೆ ೨ ಲಕ್ಷ ವಿತರಣೆ,ವಸತಿರಹಿತ ಕುಟುಂಬಕ್ಕೆ ನೆರವು ಹೀಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದರು.ರಾಜ್ಯದ ಸಮಗ್ರ ಅಭಿವೃದ್ಧಿಗೆ ಮಾಯಕೊಂಡ ಜನತೆ ಈ ಬಾರಿ ಜೆಡಿಎಸ್ ಪಕ್ಷ ಬೆಂಬಲಿಸಬೇಕು ಎಂದರು.ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು