ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಬದಲು ರೈತನನ್ನು ಸಾಲದಿಂದ ಮುಕ್ತ ಮಾಡುವ ಗುರಿ

ಬೀದರ್​ :ಜು.30: ರಾಜ್ಯದಲ್ಲಿ ರೈತರ ಸಾಲು ಸಾಲು ಆತ್ಮಹತ್ಯೆ ನಡೆಯುತ್ತಿದೆ ಇದು ಬಿಜೆಪಿ ದುರಾಡಳಿತ ಎದ್ದು ತೋರಿಸುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪಂಚ ರಥಯಾತ್ರೆ ಕಾರ್ಯಕ್ರಮ 104 ಕ್ಷೇತ್ರದಲ್ಲಿ ಶೀಘ್ರದಲ್ಲೇ ದಿನಾಂಕ ನಿಗದಿಯಾಗಿದ್ದು, ಜನತಾ ಜಲದಾರೆ ರೀತಿಯಲ್ಲೆ ಪಂಚ ರಥಯಾತ್ರೆ ಕಾರ್ಯಕ್ರಮ ನಡೆಯಲಿದೆ.

ನಮ್ಮ ಪಕ್ಷ ಯಾರ ಬಲದಿಂದ ಅಧಿಕಾರಕ್ಕೆ ಬರದೆ 2023ರಲ್ಲಿ ಸ್ವತಃ 123 ಶಾಸಕರನ್ನು ಗೆಲ್ಲಿಸುವಲ್ಲಿ ಸಾರ್ವಜನಿಕರು ಮುಂದಾಗಬೇಕು. ಸರ್ಕಾರ ಅಧಿಕಾರಕ್ಕೆ ಬಂದರೆ ಇನ್ನು ಮುಂದೆ ರೈತರ ಸಾಲ ಮನ್ನಾ ಬದಲು ರೈತರನ್ನು ಸಾಲದಿಂದ ಮುಕ್ತ ಮಾಡುವ ಗುರಿ ಹೊಂದಲಾಗಿದೆ ಎಂದು ಇದೇ ವೇಳೆ ತಿಳಿಸಿದರು

ಶಿಕ್ಷಣ ಉದ್ಯೋಗ ಗ್ರಾಮಗಳ ಅಭಿವೃದ್ಧಿ ಬಗ್ಗೆ ಪಕ್ಷಸ ನಿಲುವು ತಿಳಿಸಲು ಈ ಯಾತ್ರೆ ನಡೆಯುತ್ತಿದ್ದು, ಬೀದರ್ ಕಲ್ಬುರ್ಗಿ ರಾಯಚೂರು ಜಿಲ್ಲೆಯ ಅಭ್ಯರ್ಥಿಗಳನ್ನ ಒಂದೆರಡು ವಾರದಲ್ಲಿ ಘೋಷಣೆ ಮಾಡಲಾಗುತ್ತದೆ ಎಂದರು.

ಇನ್ನು, ಯಾವುದೇ ಪಕ್ಷದ ಬೆಂಬಲ ವಿಲ್ಲದೆ 2023 ರಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ರೈತರ ಸಾಲು ಸಾಲು ಆತ್ಮಹತ್ಯೆ ನಡೆಯುತ್ತಿದೆ ಇದು ಬಿಜೆಪಿ ಆಢಳಿತ ತೋರಿಸುತ್ತಿದೆ. ಕೋವಿಡ್ ಸಮಯದಲ್ಲಿ ಮೃತ್ತಪಟ್ಟವರಿಗೆ ಸರಕಾರ ಇನ್ನೂ ಪರಿಹಾರ ಕೊಟ್ಟಿಲ್ಲ. ಕೇವಲ ತಮ್ಮ ಪಕ್ಷದ ಕಾರ್ಯಕರ್ತರಿಗೆ ಮಾತ್ರ ಪರಿಹಾರ ಕೊಟ್ಟಿದ್ದಾರೆ. ನಿಕೀಲ್ ಕುಮಾರಸ್ವಾಮಿ ಪಕ್ಷ ಸಂಘಟನೆಗೆ ಮಾಡುತ್ತಾರೆ ಅವರ ಸ್ಪರ್ಧೆ ಬಗ್ಗೆ ನಿರ್ಧರಿಸಿಲ್ಲ ಎಂದು ಹೇಳಿದರು.

ಅದಲ್ಲದೇ, ರೈತರ ಸಾಲ ಮನ್ನಾ ಬಗ್ಗೆ ನಾನು ಯೋಚನೆ ಬಿಟ್ಟಿರುವೆ ಅವರು ಸಾಲಗಾರ ಆಗದಂತೆ ಮಾಡುವುದು ಹೇಗೆ ಎಂದು ಯೋಚಿಸಿರುವೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯವರು ಅಪ್ರೆಷನ್ ಕಮಲ ಮಾಡುವ ಪ್ರಶ್ನೆಯೆ ಬರುವುದಿಲ್ಲ. ಆಪ್ರೆಷನ್ ಮಾಡುವ ಅವಕಾಶ ಕೊಟ್ಟರೆ ಅವರು ಮಾಡುತ್ತಾರೆ ಆದರೆ ಅದಕ್ಕೆ ಅವಕಾಶ ಸಿಗುವುದಿಲ್ಲ ಎಂದರು.

ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ರು ಹಾಗೂ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪೂರ್, ಕೃಷಿ ಸಚಿವ ಎನ್.ಎ್ ನಬಿ, ಪಕ್ಷದ ಹಿರಿಯ ಸದಸ್ಯರಾದ ಅಶೋಕಕುಮಾರ ಕರಂಜಿ, ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲಪುರ, ಪ್ರಧಾನ ಕಾರ್ಯದರ್ಶಿ ಅಶೋಕ ಕೋಡಗೆ, ತಾಲ್ಲೂಕು ಅಧ್ಯಕ್ಷ ಬಸವರಾಜ ಪಾಟೀಲ್ ಹಾರೂರಗೇರಿ ಹಾಗೂ ಇತರರು ಈ ಸಂದರ್ಭದಲ್ಲಿದ್ದರು.