ಜೆಡಿಎಸ್ ಅಧಿಕಾರಕ್ಕೆ ತಂದರೆ ಜನಪರ ಯೋಜನೆ ಜಾರಿ: ಎಚ್‍ಡಿಕೆ

ಚಿಂಚೋಳಿ,ಸೆ.22- ಮುಂಬರುವ 2023ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದಲ್ಲಿ ಪಂಚರತ್ನ ಯೋಜನೆ, ಉಚಿತ ಆರೋಗ್ಯ, ಎಲ್.ಕೆ.ಜಿ ಯಿಂದ ಪಿಯುಸಿಯ ವರೆಗೆ ಉಚಿತ ಶಿಕ್ಷಣ, ರೈತರಿಗೆ ಶಾಶ್ವತ ನೆರವು, ಉದ್ಯೋಗ ಹಾಗೂ ವಸತಿ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಜನಪರ ಯೋಜನೆಗಳು ಜಾರಿಗೆ ತರಲು ಸಾಧ್ಯವಾಗದಿದ್ದಲಿ ಪಕ್ಷವನ್ನೇ ವಿಸರ್ಜನೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದರು.
ಚಿಂಚೋಳಿ ಪಟ್ಟಣದ ಪೆÇೀಲಿಸ್ ಪೆರೇಡ್ ಮೈದಾನದಲ್ಲಿ ಆಯೋಜಿಸಿದ್ದ ಕ್ಷೇತ್ರದಲ್ಲಿ ಕೈಗೊಂಡ 23ದಿನಗಳ 500 ಕೀಮಿ ಜೆಡಿಎಸ್ ಪಕ್ಷದ ಮತಜಾಗೃತಿ ಅಭಿಯಾನದ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿದ ಮಾತನಾಡಿದ ಅವರು,
ಮುಖ್ಯಮಂತ್ರಿ ಆಗುವ ಹಂಬಲ ತನಗಿಲ್ಲ ಏಕೆಂದರೆ ಈಗಾಗಲೇ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೇನೆ ಆದರೆ ರಾಜ್ಯದ 6.50 ಕೋಟಿ ಜನರ
ಬದುಕು ಉತ್ತಮಪಡಿಸಲು ಗುರಿಯನ್ನು ನಾನು ಹೊಂದಿದ್ದೇನೆ ರಾಜ್ಯದ ಆರು ಸಾವಿರ ಗ್ರಾಮ ಪಂಚಾಯತ್ ಕೇಂದ್ರ ಸ್ಥಾನದಲ್ಲಿ ಆಸ್ಪತ್ರೆ ನಿರ್ಮಿಸುವ ಯೋಜನೆ ತಮ್ಮದಾಗಿದೆ. ರೈತರನ್ನು ಸಾಲಗಾರರನ್ನಾಗಿ ಮಾಡದೇ ಅವರ ಯೋಗಕ್ಷೇಮ, ಉದ್ಯೋಗ ಕಲ್ಪಿಸಲಾಗುವುದು, ತಾವು 14 ತಿಂಗಳು ಮುಖ್ಯಮಂತ್ರಿ ಆಗಿರುವಾಗ 25 ಸಾವಿರ ಕೋಟಿ ರೂಪಾಯಿಗಳ ಸಾಲವನ್ನು ಮನ್ನಾ ಮಾಡಿದ್ದೇನೆ. ರೈತರಿಗೆ ನೀರಾವರಿ ಯೋಜನೆ, ಯುವಕರಿಗೆ ಉದ್ಯೋಗ, ಪ್ರತಿ ಮನೆಗೆ ಶೌಚಾಲಯ ನೀಡಲಾಗುವುದು ಎಂದರು.
ತಾಲೂಕಿನಲ್ಲಿ ಬೆಟ್ಟಿಂಗ್ ದಂದೆ ಮೀಟರ್ ಬಡ್ಡಿ ನಡೆಸುತ್ತಿರುವುದರಿಂದ ಅನೇಕ ಕುಟುಂಬಗಳು ಬೀದಿಪಾಲಾಗುತ್ತಿವೆ. ಚಿಂಚೋಳಿಯಲ್ಲಿಯೇ ಒಬ್ಬರು ಮನವಿಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಜನ ವಿರೋಧಿ ಸರ್ಕಾರವನ್ನು ವಿರೋಧಿಸಿ ಜೆಡಿಎಸ್ ಪಕ್ಷಕ್ಕೆ ಬೆಂಬಲಿಸಿದಲ್ಲಿ ಬೆಟ್ಟಿಂಗ್ ದಂದೆ ನಿಲ್ಲಿಸಿ ಋಣಮುಕ್ತ ಕಾಯ್ದೆ ಜಾರಿಗೆ ತರುವಲ್ಲಿ ಪ್ರಯತ್ನಿಸಲಾಗುವುದು ಎಂದರು.
ತಾವು ಸಿಎಂ ಇರುವಾಗ ಋಣಮುಕ್ತ ಕಾಯ್ದೆ ಜಾರಿ ಮಾಡಲು ರಾಷ್ಟ್ರಪತಿಯವರಿಂದ ಅಂಕಿತ ಪಡೆದು ಜಾರಿಗೆ ಪ್ರಯತ್ನ ಮಾಡಿದ್ದೇನೆ ಆದರೆ ಬಿಜೆಪಿಗರು ಈ ಕಾಯ್ದೆ ತಿಪ್ಪೆಯಲ್ಲಿ ಬಿಸಕಿದ್ದಾರೆ.
ಪಿಎಸ್‍ಐ ಹಗರಣದಿಂದ ಅನೇಕ ಕುಟುಂಬಗಳು ಬಿದಿಗೆ ಬಂದಿವೆ, ವಿಧಾನ ಸೌಧದಲ್ಲಿ ಕುಳಿತು ಬರಿ ಬರಿ ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿದರೆ ಸಾಲದು ಅನುದಾನ ಜಾರಿಗೊಳಿಸಿ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಲು ಇಲ್ಲಿನ ಸಮಸ್ಯೆಗಳ ಪರಿಹರಿಸಿದರೆ ಮಾತ್ರ ಕಲ್ಯಾಣವಾಗಲು ಸಾದ್ಯವಾಗುತ್ತದೆ. ಹೆಣ್ಣುಮಕ್ಕಳಿಗಾಗಿ ಗುಡಿ ಕೈಗಾರಿಗೆ ಯೋಜನೆ ಸರ್ಕಾರದಿಂದಲ್ಲೇ ಪ್ರತಿಶತಃ ಜಾರಿಗೊಳಿಸಿ ಶೇ 99ರಷ್ಟು ಅನುದಾನ ಕೊಟ್ಟು ಉದ್ಯೋಗ ನೀಡಲಾಗುವುದು. ಜೆಡಿಎಸ್‍ಗೆ ಅಧಿಕಾರ ನೀಡಿದರೆ ಸಮಾಜದ ಸಾಮರಸ್ಯ ಹಾಗೂ ಭಾವೈಕ್ಯ ನಾಶ ಮಾಡಲು ಹೋರಟಿರುವ
ಶಕ್ತಿಗಳಿಗೆ ತಕ್ಕಪಾಠ ಕಲಿಸುತ್ತೇನೆ ಎಂದರು.
ನೆರೆಯ ತೆಲಂಗಾಣ ಮಾದರಿಯಲ್ಲಿ ದಿನದ 24 ಗಂಟೆ ವಿದ್ಯುತ್ ಕಲ್ಪಿಸಲಾಗುವುದು, ಜಾತಿಧರ್ಮದ ವ್ಯಾಮೋಹ ಬಿಟ್ಟು ಒಂದು ಬಾರಿ ಜೆಡಿಎಸ್‍ಗೆ ಅವಕಾಶ ಕೊಡಿ. ಕಲಬುರ್ಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರದಲ್ಲಿ 5-6 ಮತಕ್ಷೇತ್ರಗಳು ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಿಕೊಡುವಂತೆ ಅವರು ಮನವಿ ಮಾಡಿದ ಅವರು, ಐದು ವರ್ಷ ಸರ್ಕಾರ ಕೊಡಿ ರಾಜ್ಯದ ಪ್ರತಿಯೊಬ್ಬರ ಸಮಸ್ಯೆ ಬಗೆಹರಿಸಲಾಗುವುದು ಸರ್ಕಾರದ ಖಜಾನೆಯಲ್ಲಿ ಯಾವುದೇ ಹಣದ ಕೊರತೆಯಿಲ್ಲಾ ರಾಜ್ಯದ 6.50 ಕೋಟಿ ಜನರ ತೆರಿಗೆ ಹಣ ಸಾಕಷ್ಟು ಇದೆ ಸಮರ್ಪಕವಾಗಿ ಉಪಯೋಗ ಮಾಡಿ ಎಲ್ಲೋರ ಬದುಕು ಉಜ್ವಲಗೊಳಿಸಲಾಗುವುದು ಎಂದರು.
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ, ಚಿಂಚೋಳಿ ತಾಲೂಕಿನ ಮಾಜಿ ಮುಖ್ಯಮಂತ್ರಿಗಳಾದ ವೀರೇಂದ್ರ ಪಾಟೀಲ್ ಅವರು ನನ್ನ ರಾಜಕೀಯ ಗುರುಗಳಾಗಿದ್ದರು ಅವರನ್ನು ನೆನಪಿಸಿಕೊಂಡು ಮಾತನಾಡಿ 90 ವರ್ಷದಲ್ಲಿಯು ಸಹ ದೇವೆಗೌಡರು ರೈತರ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ, ಅವರ ಕಾಲದಲ್ಲಿ ಅನೇಕ ನೀರಾವರಿ ಯೋಜನೆ ಜಾರಿಗೆ ತಂದ್ದಿದಾರೆ. ಅದರಿಂದ ರಾಜ್ಯದ ಜನರು ಬಿಜೆಪಿ ಕಾಂಗ್ರೆಸ್ ಪಕ್ಷದವರ ಆಡಳಿತ ನೋಡಿ ಜನರು ರೋಸಿ ಹೋಗಿದ್ದಾರೆ ಒಂದು ಸಲ ಜೆಡಿಎಸ್ ಗೆ ಮತನೀಡಿ ನೋಡಿ ಬರುವ 2023ಕ್ಕೆ ಒಂದು ಬಾರಿ ಅಧಿಕಾರ ಕೊಟ್ಟು ನೋಡಿ ರಾಜ್ಯದ ರೈತರ ಬಡವರ ಸಮಸ್ಯೆಗಳನ್ನು ಬಗೆಹರಿಸಬೇಕಾದರೆ ಜೆಡಿಎಸ್ ಪಕ್ಷದಿಂದಲೇ ಮಾತ್ರ ಸಾಧ್ಯವಾಗುತ್ತದೆ ಎಂದರು.
ಚಿಂಚೋಳಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಂಜೀವನ್ ಆರ್.ಯಾಕಾಪೂರ ಮತ್ತು ಅವರು ಮಗನದ ರಾಹುಲ್ ಯಾಕಾಪೂರ ಅವರನ್ನು ಬೆಂಬಲಿಸಿರಿ, ಮುಂಬರುವ ದಿನದಲ್ಲಿ ರಾಜಕೀಯ ಭವಿಷ್ಯವು ಉಜ್ವಲಾಗಲಿದ್ದು ಮುಂದೆ ಚಿಂಚೋಳಿ ಶಾಸಕನಾಗಿ ಮತ್ತು ಮಂತ್ರಿ ಕೂಡ ಅವರು ಆಗಬಹುದು ನಾನು ಕೂಡ ರಾಜ್ಯದಲ್ಲಿ ಪ್ರವಾಸ ಮಾಡಿ ಜೆಡಿಎಸ್ ಪಕ್ಷದಲ್ಲಿ ಇಂತಹ ಕಾರ್ಯಕರ್ತರಿಗಾಗಿ ಹುಡುಕಾಟ ನಡೆಸುತ್ತಿದ್ದೇನೆ ಅದರಿಂದ ಜೆಡಿಎಸ್ ಪಕ್ಷಕ್ಕೆ 2023 ರಂದು ಅಧಿಕಾರ ನೀಡಬೇಕಾಗಿ ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡಿದರು,
ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಂಜೀವನ್ ಆರ್.ಯಾಕಾಪೂರ, ಅವರು ಮಾತನಾಡಿ, ನಾನು ಜೆಡಿಎಸ್ ಪಕ್ಷಕ್ಕೆ ಸೇರಿ ಇವತ್ತಿಗೆ ಒಂದು ವರ್ಷ ಎಂಟು ತಿಂಗಳ ಆಯ್ತು ಆದರೆ ನಾನು ಬಿಜೆಪಿ ಪಕ್ಷ ತೊರೆದು ಜೆಡಿಎಸ್ ಪಕ್ಷ ಸೇರಿದಾಗ ಕೆಲವರು ನನ್ನ ರಾಜಕೀಯ ಬಗ್ಗೆ ಕೀಳವಾಗಿ ಮಾತನಾಡಿದರು ಆದರೆ ನಾನು ಜೆಡಿಎಸ್ ಪಕ್ಷದ ಸೇರಿದ ಮೇಲೆ ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಜೆಡಿಎಸ್ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರನ್ನು ನೇಮಕ ಮಾಡಿ ತಾಲೂಕಿನ ರೈತರ ಹಾಗೂ ಬಡವರ ಸಮಸ್ಯೆಗಳ ಕುರಿತು ಹೋರಾಟವನ್ನು ಮಾಡಿ ಜನರ ಸಮಸ್ಯೆಗಳನ್ನು ಬಗೆಹರಿಸಿದ್ದೇವೆ. ಅದೇ ರೀತಿ ಚಿಂಚೋಳಿ ತಾಲೂಕಿಗಾಗಿ ಎಚ್ ಡಿ ದೇವೇಗೌಡ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಚಿಂಚೋಳಿ ಸುಗರ್ ಫ್ಯಾಕ್ಟರಿ ಮಂಜೂರು ಮಾಡಿದರು ಆದರೆ ಚಿಂಚೋಳಿಯ ಕೆಲ ರಾಜಕಾರಣಿಗಳ ನಿರ್ಲಕ್ಷದಿಂದ ಫ್ಯಾಕ್ಟರಿ ಬಂದಾಯ್ತು ಈಗ ಫ್ಯಾಕ್ಟರಿ ಕೆಲ ಖಾಸಗಿ ಕಂಪನಿಗೆ ನೀಡಿದ್ದು ಅದು ಈಗ ಶುಗರ್ ಫ್ಯಾಕ್ಟರಿ ಬದಲು ಇತ್ನಾಳ್ ಫ್ಯಾಕ್ಟರಿ ಮಾಡ್ಲಾತ್ತಿದ್ದು ಅದರಿಂದ ಚಿಂಚೋಳಿ ಮತ್ತು ಕಾಳಗಿ ತಾಲೂಕಿಗೆ ರೈತರಿಗೆ ಅನುಕೂಲ ಆಗಬೇಕೆಂದರೆ ಮತ್ತೊಂದು ಶುಗರ್ ಫ್ಯಾಕ್ಟರಿ ನೀಡಬೇಕೆಂದು ಹೆಚ್ ಡಿ ಕುಮಾರಸ್ವಾಮಿ ಅವರಲ್ಲಿ ಸಂಜೀವನ್ ಯಾಕಾಪೂರ, ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮೈಸೂರಿನ ಮಾಜಿ ಸಚಿವರು ಹಾಲಿ ಶಾಸಕರು ಸಾ.ರಾ.ಮಹೇಶ, ಸುರೇಶ ಮಹಾಗಾಂವಕರ್, ಬಾಲರಾಜ್ ಗುತ್ತೇದಾರ, ಜೆಡಿಎಸ್ ಪಕ್ಷದ ರಾಜ್ಯ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ನಾಸೀರ್ ಹುಸೇನ್ ಉಸ್ತಾದ, ಕೃಷ್ಣ ರೆಡ್ಡಿ, ರಮೇಶ ಪಾಟೀಲ, ಸಮೀರ ಭಾಗಬಾನ್, ಸೈಯದ್ ಜಾಫರ್ ಹುಸೇನ್ ಉಸ್ತಾದ್, ಶಿವಕುಮಾರ ನಾಟೀಕಾರ, ಮಹೇಶ್ವರಿ ವಾಲಿ, ಅಲಿಂ ಇನಾಂದರ್, ರಾಹುಲ್ ಯಾಕಾಪೂರ, ಗೌರಿಶಂಕರ, ಹಣಮಂತರೆಡ್ಡಿ, ಹಣಮಂತ ಪೂಜಾರಿ, ಶಂಕರ ಕಟ್ಟಿ ಸಂಗಾವಿ, ಶಾಮರಾವ ಸೂರನ್, ದೇವೆಗೌಡ ತೇಲ್ಲೂರ, ಬಸವರಾಜ ತಡಕಲ್, ರವಿಶಂಕರರೆಡ್ಡಿ ಮುತ್ತಂಗಿ ಮತ್ತೊಮ್ ಜಬ್ಬಾರ್, ಉಲ್ಲಾಸಕುಮಾರ ಕೆರೋಳ್ಳಿ, ಮತ್ತು ಅನೇಕ ಜೆಡಿಎಸ್ ಪಕ್ಷದ ಸಾವಿರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.