ಜೆಡಿಎಸ್‌ನಿಂದ ಅಡಾಕ್ ಸಮಿತಿ ರಚನೆ

ಕೋಲಾರ,ನ.೧೯: ಬಂಗಾರಪೇಟೆ ಪಟ್ಟಣದ ಜೆಡಿಎಸ್ ನೂತನ ಕಛೇರಿಯಲ್ಲಿ ತಾಲ್ಲೂಕು ಜೆಡಿಎಸ್ ಪಕ್ಷದ ನೂತನ ಅಡಾಕ್ ಸಮಿತಿಯ ಆಯ್ಕೆ ಸಭೆ ಹಮ್ಮಿಕೊಳ್ಳಲಾಗಿತ್ತು.
ಪುರಸಭೆ ಸದಸ್ಯ ವೈ.ಸುನೀಲ್‌ಕುಮಾರ್ ಮಾತನಾಡಿ, ಒಂದು ತಿಂಗಳಿಂದ ಸತತವಾಗಿ ಕನಿಷ್ಠ ೧೨೩ ಕಾರ್ಯಕ್ರಮಗಳನ್ನು ಈಡೀ ರಾಜ್ಯದಲ್ಲಿ ಹಮ್ಮಿಕೊಂಡಿದ್ದು, ಈಗ ತಾಲ್ಲೂಕು ಘಟಕದಲ್ಲಿ ನೂತನವಾಗಿ ಅಡಾಕ್ ಸಮಿತಿಯ ರಚನೆಯ ವಿಷಯದಲ್ಲಿ ನಿರ್ಣಯಕ ಹಂತವನ್ನು ತೆಗೆದುಕೊಂಡು ಮುಂಬರುವ ೨೦೨೩ನೇ ವಿಧಾನಸಭೆ ಚುನಾವಣೆಗೆ ಮುನ್ನುಡಿಯಾಗಿ ನಾವು ಕಾರ್ಯಕರ್ತರನ್ನು ಒಟ್ಟುಗೂಡಿಸುವ ಕೆಲಸವನ್ನು ಮಾಡಲಾಗುವುದು. ತಾಲ್ಲೂಕು ಘಟಕ, ಯುವಘಟಕಗಳನ್ನು ತೆರೆದು ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ನಿಖಿಲ್ ಕುಮಾರಸ್ವಾಮಿ ಅಥವಾ ಪ್ರಜ್ವಲ್ ರೇವಣ್ಣ ನವರನ್ನು ಕರೆದು ಅದ್ದೂರಿಯಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.
ಮುಂಬರುವ ತಾ.ಪಂ ಮತ್ತು ಜಿ.ಪಂ ಚುನಾವಣೆಯಲ್ಲಿ ಹಿರಿಯರನ್ನು ಯಾವುದೇ ಕಾರಣಕ್ಕೂ ಕಡೆಗಣಿಸುವುದಿಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಯನ್ನು ಎದುರಿಸುತ್ತೇವೆ. ದಯವಿಟ್ಟು ಉಹಾಪೋಹಗಳಿಗೆ ಕಿವಿಗೊಡಬೇಡಿರಿ. ಪಿ.ದೇವರಾಜ್ ಅವರು ಸತತ ೩೦ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲೆ ಇದ್ದಾರೆ ಇದು ಸ್ವಾಗತಾರ್ಥ. ಇವರ ಮುಖಾಂತರ ತಾಲ್ಲೂಕು ಅಧ್ಯಕ್ಷರನ್ನು ಘೋಷಿಸಿ, ಹಿರಿಯರು-ಕಿರಿಯರನ್ನೆದೆ ಪಕ್ಷದ ತತ್ವ, ಸಿದ್ದಾಂತಗಳಿಗೆ ನಿಷ್ಠವಂತರಾಗಿ, ದುಡಿಯುವವರನ್ನು ಮುಂದಿನ ದಿನಗಳಲ್ಲಿ ಆಯ್ಕೆ ಮಾಡಲಾಗುವುದು, ಮುಂದಿನ ಚುನಾವಣೆ ಹಿರಿಯ ಹಾಗೂ ಯುವ ಅಸ್ತ್ರಗಳೊಂದಿಗೆ ಚುನಾವಣೆಯನ್ನು ಎದುರಿಸುತ್ತೇವೆ ಎಂಬ ಭರವಸೆ ನೀಡುವುದಲ್ಲದೆ ಇರುವ ಹಲವು ಗೊಂದಲಗಳಿಗೆ ತೆರೆಎಳೆಯಲಾಗುವುದು ಎಂದರು.
ಅಧ್ಯಕ್ಷರಾಗಿ ಬಂಗಾರಪೇಟೆ ಪಿ.ದೇವರಾಜ್, ಕಾರ್ಯದರ್ಶಿಯಾಗಿ ಮರಗಲ್ ಆನಂದ್, ಉಪಾಧ್ಯಕ್ಷರಾಗಿ ಸೋಮಶೇಖರ್, ಮುನಯ್ಯ, ಪ್ರಧಾನ ಕಾರ್ಯದರ್ಶಿಗಳಾಗಿ ಕೋಟಿಗಾನಹಳ್ಳಿ ಪ್ರಕಾಶ್, ಮುದುಗುಳಿ ರಾಜಪ್ಪ, ಖಜಾಂಚಿಯಾಗಿ ನಿರ್ಮಲ, ನಹೀಮ್ ಪಾಷ, ಸುಬ್ರಮಣಿ, ಮಂಜುನಾಥ್ ರವರನ್ನು ಎಂ. ಮಲ್ಲೇಶ್‌ಬಾಬು ರವರ ನೇತೃತ್ವದಲ್ಲಿ ತಾಲ್ಲೂಕು ಕಮಿಟಿಯನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ತಾಲ್ಲೂಕು ಪುರಸಭೆ ಅಧ್ಯಕ್ಷ ವೈ.ಸುನೀಲ್‌ಕುಮಾರ್, ಅಧ್ಯಕ್ಷ ಗುಟ್ಟಹಳ್ಳಿ ಪಿ.ದೇವರಾಜು, ಐಮಾಸಪುರ ನರೇಂದ್ರಬಾಬು, ನೆರಳೆಕೆರೆ ವಿಜಯ್‌ಕುಮಾರ್, ಗೋಪಿ, ರಮೇಶ್, ವಿಜಯ್, ತಮ್ಮೇನಹಳ್ಳಿ ಚಂದ್ರಪ್ರ, ಬ್ಯಾಡಬೆಲೆ ಪ್ರವೀಣ್‌ಕುಮಾರ್, ಹಾಗು ಇತರರು ಭಾಗವಹಿಸಿದ್ದರು.