ಜೆಡಿಎಸ್,ಬಿಜೆಪಿ ಬಿರುಸಿನ ಪ್ರಚಾರ

ಮುಳಬಾಗಿಲು, ಡಿ.೪: ರಾಜ್ಯದಲ್ಲಿ ಜೆಡಿಎಸ್, ಬಿ.ಜೆ.ಪಿ ಪಕ್ಷಗಳ ನಡುವೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಏರ್ಪಟ್ಟು ಕೋಲಾರ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹೊಂದಾಣಿಕೆಯಾಗುತ್ತದೆ ಎಂಬ ಚರ್ಚೆಗಳು ನಡೆಯುತ್ತಿದ್ದರೂ ಜೆ.ಡಿ.ಎಸ್ ಮತ್ತು ಬಿ.ಜೆ.ಪಿ ಪಕ್ಷದ ಮುಖಂಡರು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಬಿರುಸಿನ ಪ್ರಚಾರದಲ್ಲಿ ಮುಂದುವರೆಸಿದೆ.
ದಿದ್ದು, ಮುಳಬಾಗಿಲಿನ ಕಲ್ಲುಪಲ್ಲಿ ಪ್ರಕಾಶ್ ನಿವಾಸಕ್ಕೆ ಬಿ.ಜೆ.ಪಿ ನಿಯೋಗ ಶುಕ್ರವಾರ ಸಂಜೆ ಬೇಟಿ ನೀಡಿ ದೋಸೆ ಚಿಕನ್ ಸಾರು ಸವಿಯುವ ಮೂಲಕ ಬಿ.ಜೆ.ಪಿಯ ಶಕ್ತಿಯನ್ನು ವೃದ್ಧಿಸಿಕೊಳ್ಳುವ ಪ್ರಯತ್ನ ಆರಂಭಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಮುನಿರತ್ನ, ಬೆಂಗಳೂರು ಕೇಂದ್ರದ ಸಂಸದ ಪಿ.ಸಿ.ಮೋಹನ್, ಕೋಲಾರ ಸಂಸದ ಎಸ್.ಮುನಿಸ್ವಾಮಿ, ಶಾಸಕ ಹೆಚ್.ನಾಗೇಶ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಂಗಾರಪೇಟೆ ಕೆ.ಚಂದ್ರಾರೆಡ್ಡಿ, ಕೆ.ಜಿ.ಎಫ್.ನ ಶ್ರೀನಿವಾಸ್, ಬಿ.ಜೆ.ಪಿ ಅಭ್ಯರ್ಥಿ ಶ್ರೀನಿವಾಸಪುರದ ಡಾ.ವೇಣುಗೋಪಾಲ್, ರವರು ಮುಳಬಾಗಿಲಿನ ಪ್ರಭಾವಿ ಮುಖಂಡರಲ್ಲಿ ಒಬ್ಬರಾದ ಪುರಸಭೆ ಮಾಜಿ ಸದಸ್ಯ ಕಲ್ಲುಪಲ್ಲಿ ಪ್ರಕಾಶ್ ರವರ ಮನೆಗೆ ಬೇಟಿ ನೀಡಿ ಬಿ.ಜೆ.ಪಿಯನ್ನು ಬೆಂಬಲಿಸುವಂತೆ ಕೋರಿದ್ದಾರೆ.
ಪ್ರಕಾಶ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್‌ನ ಸಮೃದ್ಧಿ ಮಂಜುನಾಥ್ ಪರವಾಗಿ ಚುನಾವಣೆ ಪ್ರಚಾರದ ನೇತೃತ್ವ ವಹಿಸಿದ್ದು ಈಗ ಬಿ.ಜೆ.ಪಿ ಮುಖಂಡರ ಸಂಪರ್ಕಕ್ಕೆ ಒಳಗಾಗಿದ್ದಾರೆ.
ಸಚಿವ ಮುನಿರತ್ನ ಮಾಧ್ಯಮದವರೊಂದಿಗೆ ಮಾತನಾಡಿ ಚುನಾವಣೆ ನಡೆಯುತ್ತಿದ್ದು ನಾವು ಕೋಲಾರ ಕ್ಷೇತ್ರದಲ್ಲಿ ಬಿ.ಜೆ.ಪಿ ಗೆಲುವು ಖಚಿತ ನಾವು ಚುನಾವಣೆ ತಂತ್ರಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು. ಜೆ.ಡಿ.ಎಸ್‌ನಲ್ಲಿ ಬಂಡಾಯ ಆಗಿರುವ ಬಗ್ಗೆ ಸಚಿವರನ್ನು ಪ್ರಶ್ನಿಸಿದಾಗ ಆ ಬಗ್ಗೆ ನಮಗೆ ಮಾಹಿತಿ ಇಲ್ಲ ಅದನ್ನೂ ಸಹಾ ನಾವು ರಾಜಕೀಯವಾಗಿ ಪರಿಗಣಿಸಿ ಅಂತಹ ಮುಖಂಡರನ್ನು ಸಂಪರ್ಕಿಸಿ ಬೆಂಬಲ ಕೇಳುತ್ತೇವೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಸೊನ್ನವಾಡಿ ರಘುಪತಿ, ಬಿ.ಜೆ.ಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಬಿ.ಕೆ.ಅಶೋಕ್, ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಸ್.ರಮೇಶ್, ನಂಗಲಿ ವಿಶ್ವನಾಥರೆಡ್ಡಿ ಇದ್ದರು. ತಿಂಡಿ ತಿಂದ ನಂತರ ಶಾಸಕ ಹೆಚ್.ನಾಗೇಶ್ ತರಾತುರಿಯಲ್ಲಿ ಹೊರನಡೆದಿದ್ದು ಫೋಟೋ ಸೆಷನ್‌ಗೆ ಇರಲಿಲ್ಲ.
ಪ್ರತಿಕ್ರಿಯೆ: ಬಿ.ಜೆ.ಪಿ ಪಕ್ಷ ಸೇರುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ, ಸಚಿವರು, ಸಂಸದರು, ಶಾಸಕರು ಮತ್ತು ಬಿ.ಜೆ.ಪಿ ಮುಖಂಡರು ಬಂದು ಎಂ.ಎಲ್.ಸಿ. ಚುನಾವಣೆಯಲ್ಲಿ ಬೆಂಬಲಿಸಬೇಕೆಂದು ಕೇಳಿದ್ದಾರೆ, ಅದಕ್ಕೆ ಪೂರಕವಾಗಿ ಸ್ಪಂದನೆ ನೀಡಿದ್ದೇನೆ, ನಮ್ಮನ್ನು ಯಾರು ಗೌರವದಿಂದ ಕಾಣುತ್ತಾರೋ ಅಂತಹ ಪಕ್ಷಕ್ಕೆ ಸೇರ್ಪಡೆಯಾಗಬೇಕೆ ಎಂಬುದರ ಬಗ್ಗೆ ಚಿಂತಿಸಲಾಗುವುದು, ಈಗಲೇ ತೀರ್ಮಾನ ಇಲ್ಲ.
-ಕಲ್ಲುಪಲ್ಲಿ ಪ್ರಕಾಶ್.
ರಾಜಕಾರಣ ನಿಂತ ನೀರಲ್ಲ ಬಿ.ಜೆ.ಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಹಗಲಿರುಳು ಶ್ರಮಿಸಿ ಎಂ.ಎಲ್.ಸಿ.ಯನ್ನು ಗೆಲ್ಲಿಸುವ ಮೂಲಕ ಕೋಲಾರ ಜಿಲ್ಲೆಯಲ್ಲಿ ಕಮಲ ಅರಳುವಂತೆ ಮಾಡಲಾಗುವುದು. ಪ್ರತಿನಿತ್ಯ ಹಲವಾರು ಮುಖಂಡರನ್ನು ಸಂಪರ್ಕಿಸಿ ಬೆಂಬಲ ಪಡೆಯಲಾಗುವುದು.
-ಕೆ.ಚಂದ್ರಾರೆಡ್ಡಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ.