ಬೀದರ,ಸೆ 23: ದೇಶದ ಹೆಮ್ಮೆಯ ಪ್ರಧಾನಿ, ವಿಶ್ವನಾಯಕ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಮೆಚ್ಚಿ,ಒಪ್ಪಿ, ಎನ್.ಡಿ.ಎ ಮೈತ್ರಿಕೂಟದ ಜೊತೆಗೆ ರಾಜ್ಯದ ಜಾತ್ಯಾತೀತ ಜನತಾ ದಳ ಪಕ್ಷವು ಬೆಂಬಲಿಸಿ, ದೇಶ ನಿರ್ಮಾಣ ಕಾರ್ಯಕ್ಕೆ ಸಾಥ್ ನೀಡಿ,ದೇಶ ವಿರೋಧಿ, ಧರ್ಮ ವಿರೋಧಿ, ಸಮಾಜವಿರೋಧಿ ನೀತಿಗಳವಿರುದ್ಧ ಒಗ್ಗಟ್ಟಾಗಿ ಹೋರಾಡಲು ನಮ್ಮ ಜೊತೆ
ಕೈಜೊಡಿಸಿರುವುದು ಸಂತಸದ ವಿಷಯ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ. ಭಾರತೀಯ ಜನತಾಪಕ್ಷದೊಂದಿಗೆ ನಿಂತಿರುವ ಜೆ.ಡಿ.ಎಸ್. ಪಕ್ಷದ ಎಲ್ಲಾ ನಾಯಕರಿಗೆ,ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಸ್ವಾಗತ ತಿಳಿಸಿದ್ದಾರೆ.ಜೆ.ಡಿ.ಎಸ್. ಪಕ್ಷವು ಎನ್.ಡಿ.ಎ ಜೊತೆಗೊಡಿರುವುದರಿಂದಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ಪಕ್ಷವನ್ನು ಹೀನಾಯವಾಗಿ ಸೋಲಿಸಿ, ದೇಶಕ್ಕೆ ಮತ್ತೊಮ್ಮೆ ನರೇಂದ್ರ ಮೋದಿಯವರುಪ್ರಧಾನಮಂತ್ರಿಯಾಗಲಿದ್ದಾರೆ.ಭವ್ಯ ಭಾರತದ ಗತವೈಭವ ಮುಂದುವರೆಯಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಆಡಳಿತ
ವಿರೋಧಿ, ರೈತ ವಿರೋಧಿ ನೀತಿಗಳನ್ನು ಜನರಿಗೆ ಮನವರಿಕೆ
ಮಾಡಿಕೊಡುವಲ್ಲಿ ನಾವುಗಳು ಸೇರಿ ಕೆಲಸ ಮಾಡೋಣ,ಜನಜಾಗೃತಿಯನ್ನು ಮಾಡೋಣವೆಂದು ಸಚಿವ ಖೂಬಾ ಜೆ.ಡಿ.ಎಸ್.ಮುಖಂಡರಿಗೆ ಕರೆ ಕೊಟ್ಟಿದ್ದಾರೆ.ಬೀದರ ಲೋಕಸಭಾ ಕ್ಷೇತ್ರದಲ್ಲಿಯೂ ಕಾಂಗ್ರೆಸ್‍ಪಕ್ಷದ ಸಚಿವರುಗಳ ಭ್ರಷ್ಟಾಚಾರ, ದ್ವೇಷದ ರಾಜಕಾರಣ,ಬಡವರ ಮೇಲೆ ಆಗುತ್ತಿರುವ ಅನ್ಯಾಯದ ವಿರುದ್ಧ ಹಾಗೂಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಒತ್ತು ಕೊಡದೆಅನುದಾನ ತರಲು ವಿಫಲರಾಗುತ್ತಿರುವ ಸಚಿವರುಗಳ ವಿರುದ್ಧಎಲ್ಲರೂ ಒಗ್ಗಟ್ಟಾಗಿ ವಿರೋಧಿಸಿ, ಬಡವರಿಗೆ, ದಿನದಲಿತರಿಗೆ, ರೈತರಿಗೆ,ಮಹಿಳೆಯರಿಗೆ, ಎಲ್ಲಾ ವರ್ಗದವರಿಗೆ ನ್ಯಾಯ ಒದಗಿಸಿಕೊಡೋಣಹಾಗೂ ಜಿಲ್ಲೆಯ ಅಭಿವೃದ್ದಿಗಾಗಿ ಹೊರಾಡೋಣವೆಂದು ತಿಳಿಸಿದ್ದಾರೆ.