ಜೆಡಿಎಸ್‍ನಲ್ಲಿದ್ದು ಪಕ್ಷ ಸಂಘಟನೆಗೆ ಒತ್ತು ನೀಡುವೆ: ನಾಗಮಾರಪಳ್ಳಿ

ಬೀದರ್: ಮೇ.14:ಭಾರತೀಯ ಜನತಾ ಪಕ್ಷ ಟಿಕೇಟ್ ನೀಡದೇ ನಡಿ ನೀರಲ್ಲಿ ನನ್ನ ಕೈಬಿಟ್ಟಾಗಿ ಜ್ಯಾತ್ಯಾತೀತ ಜನತಾ ದಳ ನನಗೆ ಪಕ್ಷದ ಬೀದರ್ ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಿ ನಿಲ್ಲಿಸಿ ಬೀಫಾರಂ ನೀಡಿ ನನ್ನ ಕೈಹಿಡಿದಿರುವುದಕ್ಕೆ ಬೇರು ಮಟ್ಟದಿಂದ ಪಕ್ಷ ಮತ್ತೆ ಬಲಪಡಿಸಿ ಮುಂಬರುವ ದಿನಗಳಲ್ಲಿ ಜ್ಯಾತ್ಯಾತೀತ ಜನತಾದಳವನ್ನು ಜಿಲ್ಲೆಯಲ್ಲಿ ಮತ್ತೆ ಪುಟಿದೇಳುವಂತೆ ಮಾಡುವುದಾಗಿ ಜೇಡಿಎಸ್ ಪರಾಜಿತ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ವಿಧಾನ ಸಭಾ ಚುನಾವಣೆಯಲ್ಲಿ ನನ್ನ ಪರ ಮತ ಚಲಾಯಿಸಿರುವ ಬೀದರ ಉತ್ತರ ಕ್ಷೇತ್ರದ ಸಮಸ್ತ ಮತದಾರ ಬಾಂಧವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ನನ್ನ ಪರವಾಗಿ ಕೆಲಸ ಮಾಡಿರುವ ಪಕ್ಷದ ಎಲ್ಲಾ ಪದಾಧಿಕಾರಿಗಳಿಗೂ, ಕಾರ್ಯಕರ್ತರಿಗೂ, ನಮ್ಮ ತಂದೆಯವರಾದ ಗುರುಪಾದಪ್ಪ ನಾಗಮಾರಪಳ್ಳಿ ಮತ್ತು ಸಹೋದರ ಉಮಾಕಾಂತ ನಾಗಮಾರಪಳ್ಳಿರವರ ಎಲ್ಲಾ ಅಭಿಮಾನಿಗಳಿಗೂ ಹಿತೈಶಿಗಳಿಗೂ ವ್ಯಯಕ್ತಿಕವಾಗಿ ವಿಶೇಷ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳಿದ್ದಾರೆ.

ನನ್ನ ಮೇಲೆ ಭರವಸೆಯಿಟ್ಟು ಜನತಾ ದಳದ ಟಿಕೆಟ್ ನೀಡಿದ ಪಕ್ಷದ ವರಿಷ್ಠರಾದ ಹೆಚ್.ಡಿ. ದೇವೆಗೌಡ, ಹೆಚ್.ಡಿ. ಕುಮಾರಸ್ವಾಮಿ, ನಾಯಕರಾದ ಬಂಡೆಪ್ಪ ಖಾಶೆಂಪೂರ, ಜಿಲ್ಲಾಧ್ಯಕ್ಷರಾದ ರಮೇಶ ಪಾಟೀಲ್ ಸೋಲಪೂರ ಹಾಗೂ ತಾಲೂಕೂ ಅಧ್ಯಕ್ಷರಾದ ಬಸವರಾಜ ಪಾಟೀಲ್ ಹಾರೂರಗೇರಿ ರವರಿಗೆ ಧನ್ಯವಾದಗಳನ್ನು ತಿಳಿಸುತ್ತಾ ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಗೆ ತಮ್ಮ ಜೊತೆ ಹಗಲಿರುಳು ದುಡಿಯುವುದಾಗಿ ತಿಳಿಸುವುದಾಗಿ ಸೂರ್ಯಕಾಂತ ನಾಗಮಾರಪಳ್ಳಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.