ಜೆಡಿಎಸ್‍ಗೆ ಬೆಂಬಲಿಸುವಂತೆ ಚೆನ್ನಕೇಶವ ಮತಯಾಚನೆ


ಸಂಜೆವಾಣಿ ವಾರ್ತೆ
ಗಂಗಾವತಿ, ಏ.22 : ವಿಧಾನಸಭಾ ಚುನಾವಣೆಯಲ್ಲಿ ಅಭಿವೃದ್ಧಿಗಾಗಿ ಬದಲಾವಣೆ ಅವಶ್ಯವಿದ್ದು, ಈ ಭಾರಿ ಜೆಡಿಎಸ್ ಗೆ ಬೆಂಬಲಿಸುವಂತೆ ಜೆಡಿಎಸ್ ಅಭ್ಯರ್ಥಿ ಹೆಚ್.ಆರ್ ಚೆನ್ನಕೇಶವ ಬಸಾಪಟ್ಟಣದಲ್ಲಿ ಮತಯಾಚನೆ ಮಾಡಿದರು.
ಇಂದು ಬೆಳಿಗ್ಗೆಯಿಂದ ನಗರ ಹಾಗೂ ವಡ್ಡರಹಟ್ಟಿ, ಬಸಾಪಟ್ಟಣ, ದಾಸನಾಳ, ಬೆಣಕಲ್ ಗ್ರಾಮಗಳಿಗೆ ಭೇಟಿ ನೀಡಿ ಮನೆಮನೆಗೆ ಕರ ಪತ್ರ ಹಂಚುವ ಮೂಲಕ ಮತಯಾಚನೆ ಮಾಡಿದರು. ನಂತರ ಚೆನ್ನಕೇಶವ ಮಾತನಾಡಿ, ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಹಲವಾರು ಜನಪರ ಯೋಜನೆಗಳನ್ನು ನೀಡಿದ್ದಾರೆ. ರೈತಪರವಾಗಿ ಯೋಜನೆ ರೂಪಿಸಿ ರೈತರ ಅಭಿವೃದ್ಧಿಗೆ ಶ್ರಮಿಸಿದ ಪಕ್ಷ ಎಂದರು ಅದು ಜೆಡಿಎಸ್. ಬಿಜೆಪಿ ಕಾಂಗ್ರೆಸ್ ಬರೀ ಹುಸಿ ಭರವಸೆಗಳನ್ನು ನೀಡುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ. ನೀರುದೋಗ, ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿಗೆ ಅವಕಾಶ ನೀಡಲಾಗಿದೆ ಆದರೆ ಅಭಿವೃದ್ಧಿಯಾಗಿಲ್ಲ. ಈ ಸಲ ಜೆಡಿಎಸ್‍ಗೆ ಮತ ನೀಡುವ ಮೂಲಕ ಬೆಂಬಲಿಸುವಂತೆ ಮನವಿ ಮಾಡಿದರು.

One attachment • Scanned by Gmail