ಜೆಡಿಎಸ್‍ಗೆ ಧರ್ಮಾಧಾರಿತ ರಾಜಕಾರಣ ಮಾಡುವ ಅಗತ್ಯವಿಲ್ಲ-ಸುರೇಶಗೌಡ

ಸಂಜೆವಾಣಿ ವಾರ್ತೆ
ಮಂಡ್ಯ: ಕೆರಗೋಡು ಧ್ವಜ ವಿವಾದದ ಹಿನ್ನೆಲೆಯಲ್ಲಿಕರೆದಿದ್ದ ಸುದ್ದಿಗೋಷ್ಠಿಯಲ್ಲಿ ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಸುರೇಶಗೌಡ ಮಾತನಾಡಿ ಹನುಮ ಧ್ವಜವನ್ನು ಹಾರಿಸಲು ನಾವು ಅವಕಾಶ ಕೊಟ್ಟಿಲ್ಲ ಎಂಬ ಅನುಮತಿ ಪತ್ರದ ದಾಖಲೆಗಳನ್ನು ಬಹಿರಂಗಪಡಿಸಿದ್ದಾರೆ. ಎರಡು ಅನುಮತಿ ಪತ್ರಗಳನ್ನು ಮಾಡಿಸಿದ್ದಾರೆ. ಬಹುಶಃ ಇವು ಕೇವಲ ಮೂರು ದಿನದಲ್ಲಿ ಸೃಷ್ಟಿ ಮಾಡಿರುವ ದಾಖಲೆಗಳು.ಮೊದಲನೆಯದಾಗಿ ಗೌರಿ ಶಂಕರ ಸೇವಾ ಟ್ರಸ್ಟ್ ಅರ್ಜಿಯನ್ನೇ ಕೊಟ್ಟಿರಲಿಲ್ಲ. ದಿನಾಂಕವನ್ನು ತಿದ್ದಿದ್ದಾರೆ. ನೋಟಿಸ್ ಕೊಟ್ಟ ಮೇಲೆ ಅಂಡರ್ ಟೇಕಿಂಗ್ ತಗೋಳ್ತೀರಾ. ಅದಕ್ಕಿಂತ ಮುಂಚೆ ತೆಗೆದುಕೊಂಡಿದ್ದೀರಾ. ಪಿಡಿಒ 16 ಕ್ಕೆ ಸೈನ್ ಮಾಡಿ 18 ಕ್ಕೆ ಇಶ್ಯೂ ಮಾಡ್ತಾರೆ. ನೋಟಿಸ್ ಕೊಟ್ಟು ಸಮಜಾಯಿಷಿ ಪಡೆಯುವ ಮುನ್ನ ಶಾಸಕರು ಜವಾಬ್ದಾರಿಯನ್ನು ಅರಿತು ಸಮಸ್ಯೆ ಉದ್ಭವವಾದಾಗ ಸ್ಥಳದಲ್ಲಿ ಕುಳಿತು ಏನಾಗಿದೆ ಎಂಬುದರ ಬಗ್ಗೆ ಚರ್ಚೆ ಯಾಕೆ ಮಾಡ್ಲಿಲ್ಲ. ಮಂಡ್ಯ ಜಿಲ್ಲಾಧಿಕಾರಿ, ಎಸಿ, ತಹಶೀಲ್ದಾರ್ ಆಗಿರುವ ತಪ್ಪುಗಳನ್ನು ಸಂಕೀರ್ಣ ಮಾಡಿ ಸುಳ್ಳು ಪತ್ರಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ರಾತ್ರಿ 3 ಗಂಟೆಯಲ್ಲಿ ಧ್ವಜ ಇಳಿಸಿ ಕಳ್ಳರಂತೆ ವರ್ತಿಸಿದ್ದಾರೆ. ರಾಷ್ಟ್ರಧ್ವಜಕ್ಕೆ ಅವರಿಗಿಂತ ಹೆಚ್ಚಿಗೆ ಗೌರವ ಕೊಡುತ್ತೇವೆ ಮಧ್ಯಾಹ್ನ 3:00 ಗಂಟೆಗೆ ಹಾರಿಸುವ ಅಗತ್ಯವೇನಿತ್ತು. ಧ್ವಜಕ್ಕೂ ಗೌರವ ಕೊಟ್ಟಿಲ್ಲ. ನಮ್ಮ ಪಕ್ಷಕ್ಕೆ ಧರ್ಮದ ಮೇಲೆ ರಾಜಕಾರಣ ಮಾಡುವ ಪರಿಸ್ಥಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಟ್ರ್ಯಾಪ್ ಮಾಡಿರುವುದು ಯಾರು?
ಬಿಜೆಪಿ ಜೆಡಿಎಸ್ ನವರು ಟ್ರ್ಯಾಪ್ ಮಾಡಿದ್ದಾರೆ ಎನ್ನುವ ಶಾಸಕರೇ, ನಿಮ್ಮನ್ನು ಟ್ರ್ಯಾಪ್ ಮಾಡಿರುವುದು ಕಾಂಗ್ರೆಸ್‍ನ ಒಂದು ಬಣ. ಈ ಸಮಸ್ಯೆ ಉದ್ಭವವಾಗಲು ಕಾಂಗ್ರೆಸ್ಸಿನಲ್ಲಿರುವ ಒಡಕಿನಿಂದ. ಶಾಸಕರು ಯಾವ ಬಣದಲ್ಲಿ ಇದ್ದಾರೆ, ಜಿಲ್ಲಾ ಮಂತ್ರಿಗಳು ಯಾವ ಬಣದಲ್ಲಿ ಇದ್ದಾರೆ ಎಂಬುದನ್ನು ತಿಳಿಸಿ ಎಂದರು.
ಹುಲ್ಲುಕಡ್ಡಿಯಂತ ಸಮಸ್ಯೆಯನ್ನು ಗುಡ್ಡ ಮಾಡಿದ್ದು ಯಾರು? ಬಹುಸಂಖ್ಯಾತ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದು ಯಾರು? ಎಂದು ಹರಿ ಹಾಯ್ದರು.
ಅಧಿಕಾರ ಇದೆ ಎಂದು ಹುಚ್ಚಾಟ ಆಡೋದು ಬೇಡ. ಅಧಿಕಾರ ಇದ್ದ ಸಂದರ್ಭದಲ್ಲಿ ಮಾಡಬಾರದ್ದನ್ನು ಮಾಡಿದರೆ ನಿಮ್ಮವರೇ ನಿಮ್ಮನ್ನು ಕಾಯುತ್ತಿರುತ್ತಾರೆ ಎಚ್ಚರಿಕೆ ಇರಲಿ ಎಂದರು.