ಜೆಡಿಎಸ್,ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ

ಮಾನ್ವಿ,ಏ.೩೦- ತಾಲೂಕಿನ ಅಮರಾವತಿ ಗ್ರಾಮದ ಮುಖಂಡರು ಜೆಡಿಎಸ್, ಕಾಂಗ್ರೆಸ್ ಪಕ್ಷ ತೊರೆದು ಮಾಜಿ ಸಂಸದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವಿ. ನಾಯಕ್, ಮಾಜಿ ಶಾಸಕರಾದ ಬಸವನಗೌಡ ಬ್ಯಾಗವಾಟ, ಗಂಗಾಧರ್ ನಾಯಕ್ ಅವರುಗಳ ನೇತೃತ್ವದಲ್ಲಿ ಮಾನ್ವಿ ನಗರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಪಕ್ಷವನ್ನು ಸೇರಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ, ಯಡ್ಡಿಯೂರಪ್ಪ ಬಸವರಾಜ್ ಬೊಮ್ಮಾಯಿ ಯವರ ಜನಪರ ಆಡಳಿತ, ಬಿವಿ ನಾಯಕ್ ಅವರ ಸರಳತೆಯನ್ನು ಮೆಚ್ಚಿ ಅಮರಾವತಿ ಗ್ರಾಮದ ಮುಖಂಡರಾದ ಮನ್ಮ೦ತರೆಡ್ಡಿ, ಶಂಕ್ರಪ್ಪ ಗೌಡ, ಚಂದ್ರಪ್ಪ ಗೌಡ, ವೆಂಕಟೇಶ್ ಶೆಟ್ಟಿ, ರಾಮಕೃಷ್ಣ, ಸೇರಿದಂತೆ ಗ್ರಾಮದ ಹಲವರು ಮುಖಂಡರು, ಯುವಕರು ಬಿಜೆಪಿ ಪಕ್ಷಕ್ಕೆ ಸೇರಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗೌಡ ನಕ್ಕುಂದಿ, ವೀರಭದ್ರಪ್ಪ ಗೌಡ ಬೋಗವತಿ, ಅಮರಾವತಿ ಗ್ರಾಮದ ಮಾಜಿ ತಾ.ಪಂ ಸದಸ್ಯ ಹನುಮಂತ, ಬಿಜೆಪಿ ಪಕ್ಷದ ಮುಖಂಡರಾದ ಮಲ್ಲಪ್ಪ ಗೌಡ,ಗ್ರಾಮ ಪಂಚಾಯತ್ ಸದಸ್ಯ ಸಿದ್ದಲಿಂಗಪ್ಪ, ಬಿಜೆಪಿ ಯುವ ಮುಖಂಡರಾದ ಮಲ್ಲಿಕಾರ್ಜುನ ಮರಡ್ಡಿ, ಹುಲ್ಲೇಶ್ ಹೊಸೂರು, ಕುರುಬರು ಹನುಮಂತಪ್ಪ, ಮುದ್ದೆತಾ, ಸಿದ್ದು ದೊಡ್ಡಮನಿ, ಅಬ್ಬಯ್ ದೊಡ್ಡಮನಿ, ರಾಮಣ್ಣ ಕುರುಬರು ಸೇರಿದಂತೆ ಗ್ರಾಮದ ಅನೇಕರು ಉಪಸ್ಥಿತರಿದ್ದರು.