ಜೆಟ್‌ಇಂಜಿನ್ ತಂತ್ರಜ್ಞಾನ ವರ್ಗಾವಣೆ ಒಪ್ಪಂದ ನಿರೀಕ್ಷೆ

ಅಮೆರಿಕಾಕ್ಕೆ ಮೋದಿ ಭೇಟಿ
ನವದೆಹಲಿ, ಜೂ. ೨೦- ಅಮೆರಿಕಾಕ್ಕೆ ಐತಿಹಾಸಿಕ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿಯವರು ಉಭಯ ರಾಷ್ಟ್ರಗಳ ನಡುವಿನ ರಕ್ಷಣಾ ವ್ಯವಸ್ಥೆ ಅಭಿವೃದ್ಧಿ ಹಾಗೂ ಜೆಟ್ ಇಂಜಿನ್ ತಂತ್ರಜ್ಞಾನ ವರ್ಗಾವಣೆ ಕುರಿತಂತೆ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ.ನವದೆಹಲಿಯಿಂದ ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಾಕ್ಕೆ ತೆರಳಿದರು.ಮುಂದಿನ ಮೂರು ದಿನಗಳ ಕಾಲ ಅಮೆರಿಕಾದಲ್ಲಿ ನಡೆಯುವ ಕಾಂಗ್ರೆಸ್‌ನ ಜಂಟಿ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಪರೂಪದ ಭಾಷಣ, ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಹಾಗೂ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರೊಂದಿಗಿನ ಸಭೆಯಲ್ಲಿ ಪಾಲ್ಗೊಳ್ಳುವುದು. ಅಧ್ಯಕ್ಷ ಜೋ ಬಿಡನ್ ಶ್ವೇತಭವನದಲ್ಲಿ ಭೋಜನ ಸ್ವೀಕರಿಸುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಒಳಗೊಂಡಿದೆ.ಅಮೆರಿಕಾಕ್ಕೆ ಮೂರನೇ ಬಾರಿ ಭೇಟಿ ನೀಡುತ್ತಿರುವ ಭಾರತದ ಮೂರನೇ ಪ್ರಧಾನಿಯಾಗಿ ನರೇಂದ್ರ ಮೋದಿ ಗುರುತಿಸಿಕೊಂಡಿದ್ದಾರೆ. ಇದುವರೆಗೂ ಯಾವ ಭಾರತೀಯ ಪ್ರಧಾನಿಯು ಮೂರನೇ ಬಾರಿ ಅಮೆರಿಕಾ ಭೇಟಿಯನ್ನು ನಿರೀಕ್ಷಿಸಿರಲಿಲ್ಲ. ಇತರೆ ದೇಶಗಳ ಕೆಲವೇ ಪ್ರಧಾನಿಗಳು ಮಾತ್ರ ಮೂರನೇ ಬಾರಿ ಅಮೆರಿಕಾಕ್ಕೆ ಭೇಟಿ ನೀಡಿರುವುದಾಗಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.ಫ್ರಾನ್ಸ್ ಎಮ್ಯಾನುಯೆಲ್ ಮ್ಯಾಕ್ರೋನ್, ದಕ್ಷಿಣ ಕೊರಿಯಾದ ಯೂನ್ ಸುಕ್ ಯೋಲ್ ನಂತರ ಅಮೆರಿಕಾಕ್ಕೆ ಭೇಟಿ ನೀಡಿರುವ ಮತ್ತು ಭೋಜನಕ್ಕೆ ಆಹ್ವಾನವನ್ನು ಪಡೆದುಕೊಂಡಿರುವ ಮೂರನೇ ನಾಯಕರಾಗಿ ಪ್ರಧಾನಿ ನರೇಂದ್ರ ಮೋದಿ ಗುರುತಿಸಿಕೊಂಡಿದ್ದಾರೆ.ಅಮೆರಿಕಾ ಭೇಟಿ ವೇಳೆ ವಿಶ್ವ ಯೋಗ ದಿನಾಚರಣೆಯಾದ ಬುಧವಾರದಂದು ವಿಶ್ವ ಸಂಸ್ಥೆ ಕಟ್ಟಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಶುಕ್ರವಾರದಂದು ವಾಷಿಂಗ್ಟನ್ ರೋನಾಲ್ಡ್ ರೇಗನ್ ಕಟ್ಟಡ ಮತ್ತು ಇಂಟರ್ ನ್ಯಾಷನಲ್ ಟ್ರೇಡ್ ಸೆಂಟರ್ ನಲ್ಲಿ ಯುಎಸ್ ನಾದ್ಯಂತ ವಲಸಿಗ ನಾಯಕರನ್ನು ಉದ್ದೇಶಿಸಿ ಮೋದಿ ಅವರು ಮಾತನಾಡಲಿದ್ದಾರೆ.ಈ ಎಲ್ಲ ಕಾರ್ಯಕ್ರಮಗಳ ನಡುವೆ ಜನರಲ್ ಎಲೆಕ್ಟ್ರಿಕ್ ಭಾರತದಲ್ಲಿ ಅತ್ಯುಧುನಿಕ ಜೆಟ್ ಇಂಜಿನ್ ನನ್ನು ಹಿಂದುಸ್ತಾನ್ ಏರೋನ್ಯಾಟಿಕ್ ಲಿಮಿಟೆಡ್‌ನೊಂದಿಗೆ ಬಹು ಮಿಲಿಯನ್ ಒಪ್ಪಂದದಲ್ಲಿ ಉತ್ಪಾದಿಸುವ ಕುರಿತಂತೆ ಉಭಯ ದೇಶಗಳ ನಡುವೆ ಒಪ್ಪಂದ ಏರ್ಪಡುವುದನ್ನು ಸಹ ನಿರೀಕ್ಷಿಸಲಾಗಿದೆ.
ಜೆಟ್ ಇಂಜಿನ್ ತಂತ್ರಜ್ಞಾನವನ್ನು ವಾಯುಯಾನ ತಂತ್ರಜ್ಞಾನದ ಉತ್ಕೃಷ್ಟತೆ ಎಂದು ಪರಿಗಣಿಸಲಾಗಿದ್ದು, ಉತ್ಪಾದನಾ ಘಟಕ ಭಾರತೀಯ ವಾಯುಪ್ರದೇಶಕ್ಕೆ ವರ್ಗಾವಣೆಯಾಗಲಿದೆ. ಅಮೆರಿಕಾ ಜೆಟ್ ಇಂಜಿನ್ ತಂತ್ರಜ್ಞಾನವನ್ನು ವರ್ಗಾಯಿಸುವ ಸಂಬಂಧ ಇದುವರೆಗೂ ಯಾರೊಂದಿಗೂ ಹಂಚಿಕೊಳ್ಳದಿರುವುದು ಹಾಗೂ ಭಾರತದೊಂದಿಗೆ ಒಪ್ಪಂದಕ್ಕೆ ಆಸ್ಪದ ನೀಡಲು ವಿಶೇಷ ಎನ್ನಲಾಗಿದೆ.ಈ ಹಿಂದೆ ಮೊದಲ ಬಾರಿ ರಾಷ್ಟ್ರಪತಿ ಸರ್ವಪಲ್ಲಿ ರಾಧಕೃಷ್ಣನ್ ಹಾಗು ೨೦೦೯ರ ನವೆಂಬರ್‌ನಲ್ಲಿ ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ನಂತರ ಮೂರನೇ ನಾಯಕರಾಗಿ ಭಾರತದಿಂದ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ.