
ಕೆಂಭಾವಿ: ಫೆ.28:ಪಟ್ಟಣದ ಸಮೀಪ ತಿಪ್ಪಣಟಿಗಿ ಗ್ರಾಮದಲ್ಲಿ ಶಹಾಪುರ ಮತಕ್ಷೇತ್ರದ ಶಾಸಕರಾದ ದರ್ಶನಾಪುರ ಶರಣಬಸಪ್ಪಗೌಡ ಅವರು ಜೆಜೆಎಮ್ ಯೋಜನೆಯಡಿಯಲ್ಲಿ ಸುಮಾರು 93 ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರಿನ
ಪೈಪ್‍ಲೈನ್ ಕಾಮಗಾರಿ ಭೂಮಿ ಪೂಜೆ ಪಾಟೀಲ ಹಾಗೂ Sಃಆ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಗಳಿಗೆ ಚಾಲನೆ ನೀಡಿ ಪಂದ್ಯವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮರಿಗೌಡ ಹುಲಕಲ್ ಶಿವಮಾಂತ ಚಂದಾಪುರ, ಕೆಂಭಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಎಸ್ ಚಿಂಚೋಳಿ
ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಡಿ ಪಾಟೀಲ, ಮಹದೇವಪ್ಪ ಸಾಲಿಮನಿ, ಮಾನಪ್ಪ ಸೂಗೂರ,ಸಿದ್ದಣ್ಣ ಚಾಮನೂರ ,ಗ್ರಾಪಂ ಸದಸ್ಯರು ಹಾಗೂ ತಿಪ್ಪಣಟಿಗಿ ಗ್ರಾಮದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಮತ್ತು ಕ್ರೀಡಾಪಟುಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.